ಬನ್ನಿ ದಾರಿಯನ್ನು ಹುಡುಕೋಣ
ನಮ್ಮ ಜನಗಳ್ ಕರ್ಮ ಏನು ಹೇಳೋದು ಮತ್ತೆ ಮತ್ತೆ ಎಲೆಕ್ಷನ್ ಬರುತ್ತೆ. ಜನರ ಹತ್ರ ಕ್ಯಾಂಡಿಡೇಟ್ ಗಳು ಬ್ಯಾಡ ಅಂದ್ರು ಬರ್ತಾರೆ. ಏನೇನೋ ಹೇಳ್ತಾರೆ. ಬೇಕಾಗಿಯೋ ಬೇಡವಾಗಿಯೋ ಮತಹಾಕಲೇ ಬೇಕು. ಇಲ್ಲಾ ಅಂದ್ರೆ ತಪ್ಪಾಗುತ್ತೆ. ಮತದಾರನಾಗಿ ತನ್ನ ಹಕ್ಕು ಚಲಾಯಿಸುವುದು ರಾಷ್ಟ್ರಧರ್ಮ. ಅದನ್ನು ಮಾಡದೆ ಪ್ರಶ್ನಿಸುವುದು ಕರ್ತವ್ಯ ಲೋಪ. ಅಭ್ಯರ್ಥಿಯ ಆಯ್ಕೆಯಲ್ಲಿ ಮತದಾರ ಯಾವ ಮಾನದಂಡವನ್ನು ಅನುಸರಿಸಬೇಕು ? ಅವನಿಗೆ ಯಾರೂ ಸೂಕ್ತರಾಗಿಲ್ಲವೆನಿಸಿದರೆ ಆಗ ಏನು ಮಾಡಬೇಕು ? ಇದ್ದವರಲ್ಲಿ ಕಡಿಮೆ ದೋಷವುಳ್ಳವನನ್ನು ಅನಿವಾರ್ಯವಾಗಿ ಬೆಂಬಲಿಸಬೇಕಾದುದು, ಒಪ್ಪಿಕೊಳ್ಳಬೇಕಾದುದು ಯಾವ ಸಾಧನೆಗಾಗಿ ? ಹಣವುಳ್ಳವರಷ್ಟೇ ಚುನಾವಣೆಗಳಲ್ಲಿ ಸ್ಪರ್ಧಿಸಬೇಕೆಂಬ ಸಾಮಾನ್ಯ ಅಭಿಪ್ರಾಯ ರಾಷ್ಟ್ರವ್ಯಾಪಿಯಾಗಿರುವಾಗ ರಾಷ್ಟ್ರಪ್ರೇಮಿಗಳು ಬುದ್ಧಿಯುಳ್ಳವರು ಏನು ಮಾಡಬೇಕು ? ನಿಜವಾದ ರಾಷ್ಟ್ರಪ್ರೇಮಿಗಳು ಅಸಹಾಯಕರಾಗಿ ಸ್ವಾರ್ಥಿಗಳನ್ನು ಅನುಮೋದಿಸುವುದು ಬಂಡವಾಳ ಶಾಹಿಗಳು ಅಧಿಕಾರದ ಗದ್ದುಗೆ ಏರುವುದು ಅಪಾಯಕಾರಿಯಾದ ಸಂಗತಿ. ಬೆಳೆಯುವ ಹಂತದಲ್ಲಿ ರಾಜಕಾರಣಿಗಳು ಅಥವಾ ಪಕ್ಷಗಳು ನಡಕೊಳ್ಳುವ ಕ್ರಮವೇ ಬೇರೆ. ಬೆಳೆದ ಮೇಲಿನ ಕ್ರಮವೇ ಬೇರೆ. ನ್ಯಾಯಕ್ಕಿಂತಲೂ ಸ್ವಾರ್ಥವೇ ಅಧಿಕವಾಗಿರುವುದನ್ನು ಕಂಡಾಗ ಮತ್ತೆ ಮತ್ತೆ ನಂಬುವುದು ಆತ್ಮಘಾತಮಾದಿಕೊಂದಂತಲ್ಲವೇ ? ನಿರಾಕರಿಸಿದವನಿಗೆ ಬದಲಾಗಿ ದಾರಿಯಾವುದಿದೆ ? ಅದರಿಂದಾಗುವ ಪ್ರಯೋಜನವೇನು ? ಈ ವಿಧಾನದಲ್ಲೇ ಎಲ್ಲೋ ಗಂಭೀರ ದೋಷ ಇರಬಹುದೇ. ನಾವು ಇಲ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರ ಹೇಗಿರಬೇಕು ? ಈ ವಿಷಯದಲ್ಲಿ ಒಂದು ಚರ್ಚೆ ನಡೆಯಲೆಂಬುದು ನನ್ನ ಸದಾಶಯ. ದಯಮಾಡಿ ನಿಮ್ಮ ನಿಮ್ಮ ಅಭಿಪ್ರಾಯಗಳೊಂದಿಗೆ ಚರ್ಚೆಯಲ್ಲಿ ಭಾಗವಹಿಸಿರೆಂದು ಕೋರುವೆ . ಬನ್ನಿ ಎಲ್ಲರೂ ಸೇರಿ ದಾರಿಯನ್ನು ಹುಡುಕೋಣ.
Comments
ಉ: ಬನ್ನಿ ದಾರಿಯನ್ನು ಹುಡುಕೋಣ
ಉ: ಬನ್ನಿ ದಾರಿಯನ್ನು ಹುಡುಕೋಣ