ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

‘ನವಿಲಾದವರು’ ಚಿತ್ರದ ಪ್ರದರ್ಶನ ಮತ್ತು ಚಿತ್ರ-ವಿಚಾರ-ಸಂಕಿರಣ.

navilaadavaru screening u r anantamurtyವಿಚಾರ ಸಂಕಿರಣದ ವಿಷಯ: "ಎಂಧಿರನ್ ಸಂದರ್ಭದಲ್ಲಿ ನವಿಲಾದವರು"
ದಿನಾಂಕ: ನವಂಬರ್ 28 ಭಾನುವಾರ
ಸಮಯ: ಬೆಳಿಗ್ಗೆ 11 ರಿಂದ 2-30 ರವರೆಗೆ
ಸ್ಥಳ: ಸುರಾನ ಕಾಲೇಜು, ಸೌತ್ ಎಂಡ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-೦೪


 

ಅರಳಿವೆ ತನು ಮನಗಳು!

ಹೆ: ಹರುಷ ತುಂಬಿ ಬರುತಲಿಹುದು ಅರಳಿವೆ ತನು ಮನಗಳು, ಮನಗಳು, ಮನಗಳು!

ಗ: ನಿನ್ನ ಸೌಂದರ್ಯ ಕಂಡು, ಅರಳಿವೆ ಈ ಕಂಗಳು, ಕಂಗಳು, ಕಂಗಳು!


ಗ: ನೀನೇತಕೆ ಕೂತಿರುವೆ ಹೀಗೆ, ಮರತಂತೆ ಜಗವಾ

ಹೆ: ನಿನ್ನ ಸಂಗದಿ ನನ್ನೇ ನಾನು ಮರೆತೆ, ಹಾಗೆ ಮರೆತೆ ಜಗವಾ

ಗ: ಸರಸಕ್ಕೆ, ಮಿಲನಕ್ಕೆ ಕಾದಿವೆ ಮೈಮನಗಳು...


ಹೆ: ಹರುಷ ತುಂಬಿ ಬರುತಲಿಹುದು ಅರಳಿವೆ ತನು ಮನಗಳು, ಮನಗಳು, ಮನಗಳು!

ಗ: ನಿನ್ನ ಸೌಂದರ್ಯ ಕಂಡು, ಅರಳಿವೆ ಈ ಕಂಗಳು, ಕಂಗಳು, ಕಂಗಳು!


ಹೆ: ಒಮ್ಮೆ ಹೇಳು ನೀ, ನಿನ್ನ ಈ ಪ್ರೀತಿ ನಿಜವೇನಾ

ಗ: ನಿನ್ನಾಣೆಗೂ ನಾ ನಿನ್ನ ಬಿಡೆನು ನಂಬು ನೀ ನನ್ನ

ಭ್ರಮಾತ್ಮಕ ಸಂದರ್ಶನ - ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೭

ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೭

(೧೧೨)


    "ಬೇಸಿಗೆಯಲ್ಲವೆ ಈಗ. ಇನ್ನೊಂದು ಗಂಟೆಗೆ ಬೆಳಕು ಹರಡತೊಡಗುತ್ತದೆ" ಎಂದ ಪ್ರಕ್ಷು, ಏನನ್ನೂ ಉದ್ದೇಶಿಸದವನಂತೆ.

"ಮಾತು ಮುಗಿಸಲು ಇದು ಪೀಠಿಕೆಯೆ?" ಎಂದು ಕೇಳಬೇಕೆಂದುಕೊಳ್ಳುವಷ್ಟರಲ್ಲಿ, ಆತನಿಗೆ ಅದು ತಿಳಿದಂತೆ ಹಸನ್ಮುಖಿಯಾದ.

ಇದು ಯಾರು ಬರೆದ ಕಥೆಯೊ!

"ಏನ್ರೀ ಸಿದ್ದಣ್ಣ ಎಲ್ರಿ ನಿನ್ನೆ ಕಾಣಲೆ ಇಲ್ಲ ಏನು ಅಷ್ಟೊಂದು ಕೆಲಸನ? ಏನ್ ಸಮಚಾರ?".

"ಅಯ್ಯೊ ಏರ್ಪೋಟಿಗೆ ಹೋಗಿದ್ದೆ ಸಾರ್".

"ಏರ್ಪೋಟಿಗೆ ಯಾಕ್ರಿ ಹೋಗಿದ್ರಿ, ಯಾರ್ನಾದ್ರು ರಿಸೀವ್ ಮಾಡಿಕೊಳ್ಳೋಕೆ ಹೋಗಿದ್ರ? "

"ಅದೇ ನಮ್ಮ್ ಸಿಯೆಮ್ ಬರ್ತಾರೆ ಅಂತ ಶೋಭಾಯಾತ್ರೆ ಗೆ ತಯಾರಿ ಮಾಡಿದ್ದೆ. ಆದರೆ ಆಯಪ್ಪ ಹೊಸ ಏರ್ಪೋಟ್ಗೆ ಬರದೆ, ಹಳೆ ಏರ್ಪೋಟಿಗೆ ಬಂದ್ರು. ಅಲ್ಲಿ ಬೇರೆಯಾತ್ರೆ ನೆ ಮಾಡಿದ್ರು."

"ಕೊನೆಗೂ ಸೀಟು ಉಳಿಸಿ ಕೊಂಡು ಬಂದ್ರಲ್ಲ, ಬಿಡಪ್ಪ ಅವರನ್ನು ಅವರಪಾಡಿಗೆ ಸ್ವಲ್ಪ ಕೆಲಸ ಮಾಡಿಕೊಂಡು ಇರಲಿ. ಇನ್ಮುಂದೆ ಶೋಭಾಯಾತ್ರೆ, ಸ್ವಜನ ಪಕ್ಷಪಾತ ಏನು ಮಾಡಲ್ಲಂತೆ"

ಕೆಸುವಿನ ಎಲೆಯರಳಿದಾಗ

ಕೆಸುವಿನ ಎಲೆಯ ಗೊಜ್ಜು, ಪತ್ರೊಡೆ ಮಾಡಿ ಬಾಯಿ ಚಪ್ಪರಿಸಿದ್ದೇವೆ. ಉದ್ಯಾನವನದಲ್ಲೋ, ಮನೆಯಂಗಳದ ಬಣ್ಣ ಬಣ್ಣದ ಕೆಸುವಿನೆಲೆ ನೋಡಿ ಕಾಣಲು ಚೆಂದವಿದ್ದರೂ ತಿನ್ನಲು ಬರುವುದಿಲ್ಲವಲ್ಲ ಎಂದು ಮರುಗಿದ್ದೇವೆ. ಆದರೆ ತಿನ್ನುವ ಬದಲು ಬೇರೆ ಯಾವುದಕ್ಕೆ ಉಪಯೋಗಕ್ಕೆ ಬರಬಹುದು ಎಂದು ಯೋಚಿಸಿದವರು ಕೆಲವರಷ್ಟೇ.

ಕಮ್ಯುನಿಕೇಶನ್ ಗ್ಯಾಪ್

ಕಮ್ಯುನಿಕೇಶನ್ ಗ್ಯಾಪ್

ಎಂದಿನಂತೆ ಅಂದೂ ಕೆಲಸ ಜೋರಾಗಿಯೇ ಇತ್ತು, ರೂಂ ನಲ್ಲಿ ಮತ್ತಿಬ್ಬರು ಹಬ್ಬಕ್ಕೆ ತಮ್ಮ ಊರಿಗೆ ಹೋಗಿದ್ದರು. ಕ್ಲೈಂಟ್ ಅನ್ನು ಬಯ್ಯುತ್ತಲೇ ನಿದ್ದೆಯಿಂದ ಎದ್ದೆ, ನೀರು ಕಾಯಿಸುವ ಕೊಯ್ಲ್ ಕೂಡ ಏನೋ ಕಾರಣದಿಂದ ಬಿಸಿಯಾಯಾಗುತ್ತಿರಲಿಲ್ಲ, ಆ ಉಗುರು ಬೆಚ್ಚಗಿನ ನೀರನ್ನು ತಲೆಮೇಲೆ ಹೊಯ್ದದ್ದು ಆಯಿತು. ದೇವರಪೂಜೆ ಒಂದೇ ಕ್ಷಣದಲ್ಲಿ ಮುಗಿಸಿ ಕೈಗೆ ಸಿಕ್ಕ ಮುದ್ದೆಯಾದ ಜೀನ್ಸ್ ಮತ್ತು ಒಂದು ಟಿ-ಶರ್ಟ್ ಒಳಗೆ ನನ್ನನ್ನು ನಾನು ತೂರಿಸಿಕೊಂಡೆ. ಡ್ರವರ್ ನಲ್ಲಿದ್ದ ನನ್ನ ಮಂಗಳಸೂತ್ರ (ID Card) ತೊಟ್ಟು,ಮನೆಯಿಂದ ಹೊರ ನಡೆಯ ಬೇಕು ಎಂದು ಕೊಂಡ ಹೊತ್ತಿಗೆ, ಡ್ರವರ್ ಮೇಲಿದ್ದ ಅರವಿಂದ್ ನ ಮೊಬೈಲ್ ಕಣ್ಣಿಗೆ ಬಿತ್ತು.

ಐಟಿ ಕಂಪನಿಯಲ್ಲಿ ಕೆಲಸ ಮಾಡುವವರು ಸಾಹಿತ್ಯ ಕೃಷಿ ನಡೆಸಿದರೆ ಜನ ಏನೇನೋ ಮಾತಾಡ್ತಾರಲ್ಲಾ ಯಾಕೆ?

ಐಟಿ ಕಂಪನಿಯಲ್ಲಿ ಕೆಲಸ ಮಾಡುವವರು ಸಾಹಿತ್ಯ ಕೃಷಿ ನಡೆಸಿದರೆ ಜನ ಏನೇನೋ ಮಾತಾಡ್ತಾರಲ್ಲಾ ಯಾಕೆ?

ಹೀಗೊಂದು ಪ್ರಶ್ನೆಯನ್ನು ಮಿತ್ರ ಆಸು ಹೆಗ್ಡೆಯವರು ಇದೇ ಜಾಲತಾಣದಲ್ಲಿ ತಮ್ಮ ’ಪ್ರಭಾವಿತ ಸಾಹಿತ್ಯ ಕೃಷಿ...!’ ಬರಹದ ಪ್ರತಿಕ್ರಿಯೆಯಲ್ಲಿ ಮಂಡಿಸಿದ್ದಾರೆ. ಈ ಪ್ರಶ್ನೆಗೆ ಮಿತ್ರ ಸತ್ಯಚರಣರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದಕ್ಕೆ ನಾನು ಪ್ರತಿಕ್ರಿಯಿಸಿದ್ದೇನೆ. ಜಿಜ್ಞಾಸೆ ಮುಂದುವರಿದಿದೆ. ಇದನ್ನೆಲ್ಲ ಗಮನಿಸಿರದ ಮಿತ್ರರು ಒಮ್ಮೆ ಆ ಪುಟಕ್ಕೆ ಹೋಗಿ ಗಮನಿಸಿ. ಜಿಜ್ಞಾಸೆಯಲ್ಲಿ ಭಾಗವಹಿಸಿ.

ಪ್ರೇಮವೆ೦ದರೆ ಇದೇನಾ?

ಆತ್ಮೀಯನಿಗೆ
ಕೈಗೆ ಸಿಕ್ಕಷ್ಟನ್ನೇ ಬದುಕೆ೦ದುಕೊ೦ಡವಳಿಗೆ ಮತ್ತೂ ಬೇಕೆನಿಸುವಷ್ಟು ಪ್ರೀತಿಯನ್ನು ಕೊಟ್ಟ ನಿನಗೆ ನಾನು ಋಣಿ. ಮನೆಯ ಜವಾಬ್ದಾರಿಯ ಮುಸುಕಿನೊಳಗೆ ಬೆ೦ದವಳಿಗೆ ನಿನ್ನ ಸಾ೦ತ್ವನದ ನುಡಿಗಳು ಬೇಕಿರಲಿಲ್ಲ. ನಾನು ಮಹಾ ಸ್ವಾಭಿಮಾನಿಯೆ೦ದು ನಿನಗೆ ಗೊತ್ತು. ನಾನು ಅಳುತ್ತಿದ್ದರೂ ಒ೦ದರೆಘಳಿಗೆ ಸುಮ್ಮನಿದ್ದು ನ೦ತರ ನನ್ನನ್ನು ಸಮಾಧಾನಿಸುವ ಪರಿ ನನಗಿಷ್ಟ. ಎಲ್ಲೋ ಕಳೆದುಹೋದವಳ೦ತೆ ಬದುಕುತ್ತಿದ್ದ ನನಗೆ ನಿನ್ನ ಪರಿಚಯ ಮೊದ ಮೊದಲು ಅಕ್ಕರೆಯ ಸ್ನೇಹದ ಹೆಬ್ಬಾಗಿಲನ್ನು ತೆರೆದಿಟ್ಟಿತ್ತು.