ಮನಮುಟ್ಟಿದ ಕಥೆ..
ಮಿಂಚಂಚೆಯಲ್ಲಿ ಬಂದದ್ದು. ಕನ್ನಡಕ್ಕೆ ಅನುವಾದಿಸಿದ್ದೇನೆ. ಮುಂಚೆಯೇ ಓದಿರಬಹುದು..
ನಾನೊಂದು ಮಾಲ್ನಲ್ಲಿ ಶಾಪಿಂಗ್ ಮಾಡುತ್ತಿದ್ದಾಗ ಅಲ್ಲಿ ಒಬ್ಬ ೫ ರಿಂದ ೬ ವರ್ಷದ ಹುಡುಗ ಕ್ಯಾಷಿಯರ್ ಹತ್ತಿರ ಮಾತನಾಡುತ್ತಿದ್ದನ್ನು ಗಮನಿಸಿದೆ. ಕ್ಯಾಷಿಯರ್ ಆ ಹುಡುಗನಿಗೆ ಹೇಳುತಿದ್ದ ನಿನ್ನ ಹತ್ತಿರ ಈ ಬೊಂಬೆಯನ್ನು ಕೊಳ್ಳಲು ಸಾಕಷ್ಟು ಹಣವಿಲ್ಲ. ಆ ಹುಡುಗ ನನ್ನೆಡೆಗೆ ತಿರುಗಿ ಅಂಕಲ್ ಸ್ವಲ್ಪ ಈ ಹಣ ಎಣಿಸುತ್ತಿರ ಎಂದು ನನ್ನ ಕೈಗಿತ್ತ. ನಾನು ಆ ಬೊಂಬೆಯ ಬೆಲೆಯನ್ನು ವಿಚಾರಿಸಿ ಆ ಹಣವನ್ನು ಎಣಿಸಿದಾಗ ಅದು ಕಮ್ಮಿ ಇದೆ ಎಂದು ಆ ಹುಡುಗನ ಕೈಗೆ ಮರಳಿಸಿ ಯಾರಿಗಾಗಿ ಈ ಬೊಂಬೆ ಎಂದು ಕೇಳಿದ್ದಕ್ಕೆ, ಆ ಹುಡುಗ ಇದು ನನ್ನ ಪ್ರೀತಿಯ ತಂಗಿಯ ಹುಟ್ಟುಹಬ್ಬಕ್ಕಾಗಿ. ನಾನು ಇದನ್ನು ನನ್ನ ತಾಯಿಯ ಕೈಗೆ ಕೊಟ್ಟರೆ ಅವರು ಅಲ್ಲಿಗೆ ಹೋದಾಗ ನನ್ನ ತಂಗಿಗೆ ಕೊಡುತ್ತಾರೆ ಎಂದು ಬೇಸರವಾಗಿ ನುಡಿದ.
ನನ್ನ ತಂಗಿ ದೇವರ ಹತ್ತಿರ ಹೋಗಿದ್ದಾಳಂತೆ, ಇಷ್ಟರಲ್ಲೇ ಅಮ್ಮನು ಅವಳ ಬಳಿಗೆ ಹೋಗುತ್ತಾಳಂತೆ. ಅದಕ್ಕೆ ನಾನು ಈ ಬೊಂಬೆಯನ್ನು ಅಮ್ಮನ ಕೈಯಲ್ಲಿ ಕಳುಹಿಸೋಣ ಎಂದುಕೊಂಡೆ.
ನನ್ನ ಎದೆಬಡಿತ ನಿಂತಂತಾಯಿತು. ಆ ಹುಡುಗ ನನ್ನೆಡೆಗೆ ನೋಡಿ ನಾನು ಬರುವಾಗ ಅಪ್ಪನಿಗೆ ಹೇಳಿ ಬಂದಿದ್ದೇನೆ ನಾನು ಮಾಲ್ ನಿಂದ ಬರುವವರೆಗೂ ಅಮ್ಮನಿಗೆ ಹೋಗಬೇಡಿ ಎಂದು ಹೇಳಿದ್ದೇನೆ.. ಆ ಹುಡುಗ ಒಂದು ಫೋಟೋ ತೋರಿಸಿದ ಅದರಲ್ಲಿ ಆ ಹುಡುಗ ಮುದ್ದಾಗಿ ನಗುತಿರುವ ಫೋಟೋ ಇತ್ತು. ಅಮ್ಮನ ಜೊತೆ ಈ ಫೋಟೋ ಕೂಡ ಕಳುಹಿಸಬೇಕು ಏಕೆಂದರೆ ನನ್ನ ತಂಗಿ ನನ್ನನ್ನು ಮರೆಯಬಾರದೆಂದು. ನಾನು ನನ್ನ ಅಮ್ಮನನ್ನು ತುಂಬಾ ಇಷ್ಟ ಪಡುತ್ತೇನೆ ಮತ್ತು ಅವಳನ್ನು ಅಲ್ಲಿಗೆ ಕಳುಹಿಸಲು ಇಷ್ಟವಿಲ್ಲ..ಆದರೆ ಅಪ್ಪ ಹೇಳುತ್ತಾರೆ ಅಲ್ಲಿ ತಂಗಿ ಒಬ್ಬಳೇ ಇರುತ್ತಾಳೆ ಅದಕ್ಕೋಸ್ಕರ ಹೋಗಬೇಕು ಎಂದು.
ಮತ್ತೆ ಆ ಹುಡುಗ ಬೊಂಬೆಯ ಕಡೆ ದೀನವಾಗಿ ನೋಡುತ್ತಿದ್ದ..ಅಷ್ಟರಲ್ಲಿ ನಾನು ನನ್ನ ಜೇಬಿನಿಂದ ಸ್ವಲ್ಪ ಹಣ ತೆಗೆದು ಆ ಹುಡುಗನಿಗೆ ಹೇಳಿದೆ ಎಲ್ಲಿ ಹಣ ಕೊಡು ಮತ್ತೊಮ್ಮೆ ಲೆಕ್ಕ ಹಾಕೋಣ ಎಂದು ಆ ಹಣದ ಜೊತೆ ನನ್ನ ಹಣವನ್ನು ಸೇರಿಸಿ ಎಣಿಸಿ ನಿನಗೆ ಬೊಂಬೆ ತೆಗೆದುಕೊಳ್ಳಲು ಸಾಕಷ್ಟು ಹಣವಿದೆ ಹಾಗೆ ಸ್ವಲ್ಪ ಚಿಲ್ಲರೆ ಸಹ ಮಿಗುವುದು ಎಂದಾಗ ಆ ಹುಡುಗ ಸಂತಸದಿಂದ ನುಡಿದ ನೆನ್ನೆ ರಾತ್ರಿ ನಾನು ದೇವರಲ್ಲಿ ಬೇಡಿಕೊಂಡೆ ಆ ಬೊಂಬೆ ಕೊಳ್ಳುವುದಕ್ಕೆ ಸಾಕಷ್ಟು ಹಣ ನೀಡು ಎಂದು ಬಹುಷಃ ಅದು ಕೇಳಿಸಿರಬೇಕು ಅದಕ್ಕೆ ದೇವರು ಹಣ ಕೊಟ್ಟಿದ್ದಾನೆ ಎಂದು ಮುಗ್ಧವಾಗಿ ನುಡಿದ. ಹಾಗೆ ನನ್ನ ಅಮ್ಮನಿಗೆ ಬಿಳಿ ಗುಲಾಬಿ ಎಂದರೆ ಬಹಳ ಇಷ್ಟ ಈ ಚಿಲ್ಲರೆಯಲ್ಲಿ ಅವಳಿಗಾಗಿ ಬಿಳಿ ಗುಲಾಬಿ ಕೊಂಡುಕೊಳ್ಳುತ್ತೇನೆ ಎಂದ.
ನಾನು ನನ್ನ ಶಾಪಿಂಗ್ ಮುಗಿಸಿ ಬರುತ್ತಿದ್ದಾಗ ತಲೆಯಲ್ಲ ಆ ಹುಡುಗನೇ ತುಂಬಿ ಹೋಗಿದ್ದ. ಹಾಗೆ ಕಳೆದೆರಡು ದಿನಗಳ ಹಿಂದೆ ಪತ್ರಿಕೆಯಲ್ಲಿ ಓದಿದ್ದ ಒಂದು ಘಟನೆ ನೆನಪಿಗೆ ಬಂತು. ಒಬ್ಬ ಲಾರಿ ಚಾಲಕ ಕುಡಿದು ವಾಹನ ಓಡಿಸಿ ಒಂದು ಕಾರಿಗೆ ಗುದ್ದಿ ಕಾರಿನಲ್ಲಿದ್ದ ಒಂದು ಪುಟ್ಟ ಹುಡುಗಿ ಸ್ಥಳದಲ್ಲೇ ಮೃತಪಟ್ಟು ಇನ್ನೊಬ್ಬ ಮಹಿಳೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ ಎಂದು...ಬಹುಷಃ ಈ ಹುಡುಗನ ಕುಟುಂಬವೇ ಇರಬಹುದೇ ಎಂಬ ಸಂಶಯ ಕಾಡಿತು. ಮರುದಿನ ಬೆಳಿಗ್ಗೆ ಪತ್ರಿಕೆಯಲ್ಲಿ ಆ ಮಹಿಳೆ ಮೃತಳಾದಳು ಎಂಬ ವಾರ್ತೆ ಓದಿ ಮನಸು ತಲ್ಲಣಗೊಂಡಿತು. ಹಾಗು ಹೀಗೂ ಮಾಡಿ ಅವರ ಮನೆಯ ಅಡ್ರೆಸ್ ಗಳಿಸಿ ಒಂದು ಬಿಳಿ ಗುಲಾಬಿಯ ಹೂ ಗುಚ್ಹ ಹಿಡಿದು ಅವರ ಮನೆ ಕಡೆ ಓದಿದೆ. ಮನೆಯಲ್ಲಿ ಆಕೆಯನ್ನು ಮಲಗಿಸಿದ್ದರು ಆಕೆಯ ಪಕ್ಕದಲ್ಲಿ ಆ ಬೊಂಬೆ ಹಾಗೆ ಆ ಹುಡುಗನ ಫೋಟೋ ಹಾಗು ಒಂದು ಬಿಳಿ ಗುಲಾಬಿ ಇಟ್ಟಿದ್ದರು. ಪಕ್ಕದಲ್ಲೇ ಆ ಹುಡುಗ ನಿಂತಿದ್ದ. ನಾನು ಕೊಂಡು ಹೋಗಿದ್ದ ಹೂಗುಚ್ಚವನ್ನು ಆಕೆಯ ಬಳಿ ಇರಿಸಿ ಹೆಚ್ಚು ಹೊತ್ತು ಅಲ್ಲಿರಲಾಗದೆ ವಾಪಸ್ ಮರಳಿದೆ. ಆ ಕುಡುಕ ಚಾಲಕನ ಕ್ಷಣ ನಿರ್ಲಕ್ಷ್ಯ ಒಂದು ಕುಟುಂಬವನ್ನು ಹೇಗೆ ಬಲಿ ತೆಗೆದುಕೊಂಡಿತು ಎಂದು ಆಲೋಚಿಸಿ ಬಹಳ ಸಂಕಟವಾಯಿತು...
Comments
ಉ: ಮನಮುಟ್ಟಿದ ಕಥೆ..
In reply to ಉ: ಮನಮುಟ್ಟಿದ ಕಥೆ.. by kamath_kumble
ಉ: ಮನಮುಟ್ಟಿದ ಕಥೆ..
ಉ: ಮನಮುಟ್ಟಿದ ಕಥೆ..
In reply to ಉ: ಮನಮುಟ್ಟಿದ ಕಥೆ.. by manju787
ಉ: ಮನಮುಟ್ಟಿದ ಕಥೆ..
ಉ: ಮನಮುಟ್ಟಿದ ಕಥೆ..
In reply to ಉ: ಮನಮುಟ್ಟಿದ ಕಥೆ.. by gopaljsr
ಉ: ಮನಮುಟ್ಟಿದ ಕಥೆ..
ಉ: ಮನಮುಟ್ಟಿದ ಕಥೆ..
In reply to ಉ: ಮನಮುಟ್ಟಿದ ಕಥೆ.. by kavinagaraj
ಉ: ಮನಮುಟ್ಟಿದ ಕಥೆ..
ಉ: ಮನಮುಟ್ಟಿದ ಕಥೆ..
In reply to ಉ: ಮನಮುಟ್ಟಿದ ಕಥೆ.. by Devendra L Abbigeri
ಉ: ಮನಮುಟ್ಟಿದ ಕಥೆ..