ಕೋಗಿಲೆಯ ಹಾಡ ಕೇಳಿದೆ...

ಕೋಗಿಲೆಯ ಹಾಡ ಕೇಳಿದೆ...

 ೋಗಿಲೆಯ ಕವಿತೆ ಕೇಳಿದೆ
ಆಗ ನಿನ್ನೊಲವಿನ ಭಾವ
ನನ್ನೆದಯಲ್ಲಿ ಮೂಡಿತು...

ಕೋಗಿಲೆಯ
ಸ್ವರವ ಆಸ್ವಾದಿಸಿದೆ
ಆಗ ನಿನ್ನ ಬದುಕಿನ ಜೀವ ಸ್ವರ
ನನ್ನೆದೆಯಲ್ಲಿ ಮೀಟಿತು...

ಕೋಗಿಲೆಯ
ಆಲಾಪ ಕೇಳಿದೆ
ಆಗ ನೀ ಕೊಟ್ಟ ಪ್ರೀತಿಯ ಕೂಗು
ನನ್ನಲ್ಲಿ ಸಂಗೀತ ಸ್ವರ ಹೊಮ್ಮಿಸಿತು...

ಕೋಗಿಲೆಯ
ಮೌನ ಅನುಭವಿಸಿದೆ
ಆಗ ನೀ ನೆನಪಾದೆ. ನಿನ್ನ ನೋವು
ನೆನಪಾದವು...

ಕೋಗಿಲೆಯ ಬಣ್ಣ ನೋಡಿದೆ
ಆಗ ನೀ ದೂರವಾದ ಕರಾಳ
ದಿನ ಮತ್ತಷ್ಟು...ಇನ್ನಷ್ಟು ಕಗ್ಗತ್ತಲಾಯಿತು..

-ೇವನ್
Rating
No votes yet

Comments