ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗೆಳೆಯ

ಕಾಡುವ ನೆನಪಿನ ಸುಳಿಯಲಿ
ಬದುಕು ಮುಳುಗಿ ಏಳುತಿದೆ

ಜೀವನವೆಂಬ ಈ ಸಮುದ್ರದಲಿ
ನನ್ನ ಕನಸುಗಳು ಆಲೆಗಳೊಂದಿಗೆ
ಹೇಳ ಹೆಸರಿಲ್ಲದೆ  ಸಾಗುತಿದೆ

ಮುಸ್ಸಂಜೆಯ ಆ ತಂಗಾಳಿ
ಇಂದ್ಯಕೋ  ನೀನಿಲ್ಲವೆಂದು
ಮುನಿಸಿಕೊಂಡು ಮುಖ ತಿರುಗಿಸಿದೆ

ಬಾ ಸೇರು ನನ್ನ ಬಾಳ ಬಂಡಿಗೆ ........
ಜೊತೆಯಗೂ ನನ್ನ ನೋವಿಗೆ ..........

ಎರಡೇ ಏಕೆ?

ನಮಗೆ
ಹಿಡಿಯಲು
ಎರಡು ಕೈಗಳನ್ನು
ನೀಡಲಾಗಿದೆ
ನಡೆಯಲು ಎರಡು ಕಾಲುಗಳು
ನೋಡಲು ಎರಡು ಕಣ್ಣುಗಳು
ಕೇಳಲು ಎರಡು ಕಿವಿಗಳು..
ಅದರೆ ಒ೦ದೇ ಹೃದಯ
ಏಕೆ??
....
ಆ ಇನ್ನೊ೦ದು ಹೃದಯವನ್ನು
ಬೇರೆಯವರಿಗೆ ನೀಡಲಾಗಿದೆ
ಅದನ್ನು
ಹುಡುಕಬೇಕು
ನಾವು..

 

******

ಮೊದಲು ನನಗಿಷ್ಟವಾಗಬೇಕು!

ಶಿಲ್ಪಿಯೊಬ್ಬ ತದೇಕಚಿತ್ತನಾಗಿ ಮೂರ್ತಿಯೊಂದನ್ನು ಕೆತ್ತುತ್ತ ಕುಳಿತಿದ್ದ. ಆತನ ಸುತ್ತಮುತ್ತ ಸ್ವಲ್ಪೇ ಸ್ವಲ್ಪ ಕಿವಿ ತುಂಡಾದದ್ದೋ, ಮೂಗಿನ ಬಳಿ ಸ್ವಲ್ಪೇ ಸ್ವಲ್ಪ ಕುಳಿ ಬಿದ್ದದ್ದೋ, ಕಣ್ಣಿನ ರೆಪ್ಪೆ ಒಂದಿನಿತೇ ಮುಕ್ಕಾದದ್ದೋ, ಕೈಬೆರಳ ಬಳಿ ಚಕ್ಕಳೆಯುದುರಿದ್ದೋ ಒಟ್ಟಿನಲ್ಲಿ ಭಗ್ನಗೊಂಡಿದ್ದು ಎನ್ನುವಂತಹ ಒಂದೆರಡು ಮೂರ್ತಿಗಳೂ ಬಿದ್ದಿದ್ದವು. ಈ ಎಲ್ಲ ಮೂರ್ತಿಗಳೂ ಶಿಲ್ಪಿಯು ಸಧ್ಯ ನಿರ್ಮಿಸುತ್ತಿರುವ ದೇವರದ್ದೇ.ಸಧ್ಯಕ್ಕೆ ಅದು ಕೃಷ್ಣನ ವಿಗ್ರಹ ಎಂದಿಟ್ಟುಕೊಳ್ಳಿ. ಮೇಲ್ಕಾಣಿಸಿದ ಸೂಕ್ಷ್ಮ ಕುಂದುಗಳು ಕಾಣಿಸದಿದ್ದರೆ ಎಲ್ಲವೂ ಅದ್ಭುತವಾಗಿಯೇ ತಯಾರಾಗಿದ್ದವು. ಆದರೂ ಟಿಕ್ ಟಿಕ್ ಸದ್ದು ನಡೆದೇ ಇತ್ತು.

ಕಣ್ಣಿನ ಕೆಳಗಿಡು ಕರ್ಚೀಫು

ಸುತ್ತಲಿ ನಿನ್ನ ಸುತ್ತಲೂ
ಸದಾ ನಗುವ ಸ್ಮೈಲಿಗಳು
ಇನ್ ಬಾಕ್ಸಲಿ ಗುಡ್ ಲಕ್
ಕಂಗ್ರ್ಯಾಜುಲಶನ್ ಗಳು

ತೀರದಿರಲಿ ಎಂದಿಗೂ
ನಿನ್ನ ಪ್ರಿಪೈಡ್ ಖಾತೆ
ಇರು ನೀ ಸದಾ
ನೆಟ್ವರ್ಕ್ ರೇಂಜಲಿ

ಪಕ್ಕದ ಸೆಲ್ಲಲಿ ಒಳ್ಳೆಯದಿರಲು
ನೀಲಿ ಹಲ್ಲುಗಳ ಮರೆಯದಿರು
ಸಿಮ್ಮಿನ ಹಾವಳಿ ಅತಿಯಾದಾಗ
ಡ್ಯುಯಲ್ ಸಿಮ್ಮಿನಲಿ ಗರಿಗೆದರು

ಎಲ್ಲವ ಅರಿತು
ಚಾರ್ಜರ್ ಮರೆತರೆ
ಆಗುವುದೆಲ್ಲಾ ಸ್ವಿಚ್ಚಾಫು

ಚಾರ್ಜರ್ ಇದ್ದೂ
ಕರೆಂಟು ಹೋದರೆ
ಕಣ್ಣಿನ ಕೆಳಗಿಡು
ಕರ್ಚೀಫು..

ಧನ್ಯವಾಗಲಿ, ಕನ್ನಡತನ

       ಸಮಗ್ರ ಕರ್ನಾಟಕದ ಭಾಗಗಳನ್ನು ಅಧೀಕೃತವಾಗಿ ಪ್ರತ್ಯೇಕತಾ ಹೆಸರುಗಳಿಂದ  ಕರೆಯುವ ಅಸಮಂಜಸ ಸಲಹೆಯೊಂದನ್ನು ಇತ್ತೀಚೆಗೆ ವಿದ್ವಾಂಸರೊಬ್ಬರು ಅಪ್ಪಣೆ ಕೊಡಿಸಿದ್ದಾರೆ. ಹೈದರಾಬಾದ್ ಕರ್ನಾಟಕವನ್ನು “ಕಲ್ಯಾಣ ಕರ್ನಾಟಕ”, ಮುಂಬೈ ಕರ್ನಾಟಕವನ್ನು “ಕಿತ್ತೂರು ಕರ್ನಾಟಕ” ಎಂದು ರಾಜಪತ್ರ ಪ್ರಕಟಣೆ ಹೊರಡಿಸಬೇಕಂತೆ! ಕಿತ್ತೂರ ರಾಣಿ, ಇಡೀ ಕರ್ನಾಟಕಕ್ಕೇ ಚಿರಂತನ ಸ್ಫೂರ್ತಿ ಮತ್ತು ಕಲ್ಯಾಣದ ಬಸವಣ್ಣ ಲೋಕಗುರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕರ್ನಾಟಕದ ಈ “ಹೆಮ್ಮೆ”ಗಳನ್ನು ಕ್ರಮವಾಗಿ ಬೆಳಗಾವಿ ಮತ್ತು ಬೀದರ್ ಜಿಲ್ಲೆಗಳನ್ನೊಳಗೊಂಡ ವಿಭಾಗಗಳಿಗೆ ಕಟ್ಟಿಹಾಕುವುದು ಎಷ್ಟುಮಾತ್ರಾ ವಿವೇಕ?


ಇಷ್ಟಕ್ಕೂ “ನಿಜಾಂ ಕರ್ನಾಟಕ”, “ಮುಂಬೈ ಕರ್ನಾಟಕ” ಎಂಬ ಹೆಸರುಗಳಾದರೋ ಬಂದಿರುವುದು ಹೇಗೆ? ಕುಬ್ಜನನ್ನು ಕುಳ್ಳ, ಕದಿಯುವವನನ್ನು ಕಳ್ಳ ಎಂದಂತೆ ರೂಢನಾಮವಾಗಿಯೇ ಹೊರತು ಹಾಗೆಂದು “ಅಂಕಿತ” ಮಾಡಲಾಗಿದೆಯೇ?

ಮಾಟ-ಮಂತ್ರದ ತಂತ್ರಕ್ಕೆ ಕತ್ತೆಯಂತಹ ಮತದಾರ ಪ್ರಾಣಿ ಬಲಿ!

ವಿರೋಧ ಪಕ್ಷಗಳವರು ಕತ್ತೆಯಂಥಾ ಪ್ರಾಣಿಗಳನ್ನು ಬಲಿಗೊಟ್ಟು ತಮ್ಮ ವಿರುದ್ಧ ಮಾಟ-ಮಂತ್ರ ಮಾಡಿಸುತ್ತಿರುವುದಾಗಿ ಮುಖ್ಯಮಂತ್ರಿಗಳು ಅಲವತ್ತುಕೊಂಡಿದ್ದಾರೆ. ಇಮತಹ ವಿದ್ಯಮಾನಗಳಿಂದ ವಿಚಲಿತರಾಗಬಾರದೆಂಬ ಹಿತೋಕ್ತಿಯನ್ನು, ‘ವಿಚಾರವಾದಿಗಳ ಮೂಢನಂಬಿಕೆ’ ಎಂದೇ ತಳ್ಳಿಹಾಕಬೇಕೇನೊ! ಏಕೆಂದರೆ ವೈಚಾರಿಕತೆಗೂ, ರಾಜನೀತಿಗೂ ಇಂದು ಅಷ್ಟೇನೂ ತಾಳ-ಮೇಳ ಕಂಡುಬರುವುದಿಲ್ಲ. ಅಧಿಕಾರ ರಾಜಕೀಯದಲ್ಲಿ ಸೋಲು-ಗೆಲವುಗಳೇನಿದ್ದರೂ, Floor-test, ರಾಜಭವನದ Parade ಇತ್ಯಾದಿ Fashion showಗಳಿಗಷ್ಟೇ ಸಿಮಿತವಲ್ಲವೇ?