ಕಣ್ಣಿನ ಕೆಳಗಿಡು ಕರ್ಚೀಫು

ಕಣ್ಣಿನ ಕೆಳಗಿಡು ಕರ್ಚೀಫು

ಕವನ

ಸುತ್ತಲಿ ನಿನ್ನ ಸುತ್ತಲೂ
ಸದಾ ನಗುವ ಸ್ಮೈಲಿಗಳು
ಇನ್ ಬಾಕ್ಸಲಿ ಗುಡ್ ಲಕ್
ಕಂಗ್ರ್ಯಾಜುಲಶನ್ ಗಳು

ತೀರದಿರಲಿ ಎಂದಿಗೂ
ನಿನ್ನ ಪ್ರಿಪೈಡ್ ಖಾತೆ
ಇರು ನೀ ಸದಾ
ನೆಟ್ವರ್ಕ್ ರೇಂಜಲಿ

ಪಕ್ಕದ ಸೆಲ್ಲಲಿ ಒಳ್ಳೆಯದಿರಲು
ನೀಲಿ ಹಲ್ಲುಗಳ ಮರೆಯದಿರು
ಸಿಮ್ಮಿನ ಹಾವಳಿ ಅತಿಯಾದಾಗ
ಡ್ಯುಯಲ್ ಸಿಮ್ಮಿನಲಿ ಗರಿಗೆದರು

ಎಲ್ಲವ ಅರಿತು
ಚಾರ್ಜರ್ ಮರೆತರೆ
ಆಗುವುದೆಲ್ಲಾ ಸ್ವಿಚ್ಚಾಫು

ಚಾರ್ಜರ್ ಇದ್ದೂ
ಕರೆಂಟು ಹೋದರೆ
ಕಣ್ಣಿನ ಕೆಳಗಿಡು
ಕರ್ಚೀಫು..

Comments