ನೀವೇನಂತೀರಿ?.

ನೀವೇನಂತೀರಿ?.

 


 


 


ಶತಮಾನಗಳ ಕಾಲ ವಿದೇಶಿಯರ ಆಳ್ವಿಕೆಗೊಳಪಟ್ಟು (ಕೇವಲ ಬ್ರಿಟೀಷರು ಮಾತ್ರವೇ ವಿದೇಶಿಯರಲ್ಲ, ಮೊಗಲರು, ಡಚ್ಚರು, ಪೋರ್ಚುಗೀಸರು, ಇತ್ಯಾದಿ) ಸಾವಿರಾರು ಜನರ ತ್ಯಾಗ-ಬಲಿಧಾನದಿಂದ ಬಾಪೂಜಿಯವರ ನಾಯಕತ್ವದಲ್ಲಿ ಬ್ರಿಟೀಷರಿಂದ ಮುಕ್ತಿ ಪಡೆದಿರುವುದು ಕೇವಲ ಭಾರತೀಯರಿಗಷ್ಟೇ ಹೆಮ್ಮೆಯ ವಿಷಯವಲ್ಲ. ಇಡೀ ವಿಶ್ವವೇ ಹೆಮ್ಮೆ ಪಡುವಂತದ್ದು. ಆದರೆ ಬದುಕಿ ಬಾಳಬೇಕಾದ ಅನೇಕ ರಾಷ್ಟ್ರಭಕ್ತರ ಪ್ರಾಣ ತ್ಯಾಗದಿಂದ ಪಡೆದ ಸ್ವಾತಂತ್ರ್ಯದ ಬೆಲೆ ಇಂದು ನಮ್ಮನ್ನಾಳುವವರಿಗೆ ಗೊತ್ತಿದೆಯೇ? ಅಜಾದ್ ಚಂದ್ರಶೇಖರ್ ಮತ್ತು ರಾಜಗುರು ರಾಷ್ಟ್ರಕ್ಕೋಷ್ಕರ ಪ್ರಾಣ ತ್ಯಾಗ ಮಾಡಿದ್ದು ಕೇವಲ ೨೪ ವರ್ಷಕ್ಕೆ, ಭಗತ್ ಸಿಂಗ್ ನೇಣಿಗೆ ಕೊರಳೊಡ್ಡಿದ್ದು ಕೇವಲ ೨೩ ವರ್ಷಕ್ಕೆ, ಈ ಎಲ್ಲಾ ಮಹಾನ್ ದೇಶಭಕ್ತರುಗಳ ತ್ಯಾಗದ ಘಟನಾವಳಿಗಳು ಇಂದಿನ ರಾಜಕಾರಣಿಗಳಿಗೆ ಹಳತೆನಿಸಬಹುದು. ಅಧಿಕಾರ ಸಿಕ್ಕರೆ ಸಾಕು ಸ್ವರ್ಗಕ್ಕೆ ಏಣಿ ಹಾಕಲು, ಸ್ವರ್ಗವೇ ನಾಚುವಂತೆ ಸಂಪತ್ತನ್ನು ಕ್ರೂಢೀಕರಿಸಲು ಸತ್ಯವನ್ನೇ- ಅಸತ್ಯವೆಂದು, ಅಸತ್ಯವನ್ನು-ಸತ್ಯವೆಂದು, ಬೆಳಿಗ್ಗೆ ಹೇಳಿದ್ದನ್ನು- ಮಧ್ಯಾಹ್ನ ಹೇಳಲಿಲ್ಲವೆನ್ನುವ, ಹಣ-ಅಧಿಕಾರಕ್ಕೋಷ್ಕರ ತಮ್ಮನ್ನೇ ತಾವು ಒಂದು ನಿರ್ಧಿಷ್ಟ ಮೊತ್ತಕ್ಕೆ ಮಾರಿಕೊಳ್ಳುವ (ಸತ್ಯ ಹರಿಶ್ಚಂದ್ರ ಅಂದು ಸತ್ಯಕ್ಕೋಷ್ಕರ ತಾನು, ತನ್ನ ಹೆಂಡತಿ-ಮಗನನ್ನು ಒತ್ತೆ ಇಟ್ಟ) ನಾಚಿಕೆಗೆಟ್ಟ ಬಹುತೇಕ ಜನಪ್ರತಿನಿಧಿಗಳಿಗೆ ರಾಷ್ಟ್ರಕ್ಕೋಷ್ಕರ ಪ್ರಾಣ ತ್ಯಾಗ ಮಾಡಿದ ಮಹಾನ ಸಂತರ ಪ್ರಾಣದ ಬೆಲೆ ಗೊತ್ತಾಗುವುದಾದರೂ ಹೇಗೆ? ರಾಷ್ಟ್ರಭಕ್ತರ ಬೌಧ್ಧಿಕ ದೇಹ ನಾಶವಾಗಿರಬಹುದು ಆದರೆ ಅವರ ಆತ್ಮ ಭಾರತಾಂಭೆಯ ಭೂಪ್ರದೇಶದಲ್ಲೇ ಸಂಚರಿಸುತ್ತಿದೆ. ಅದ್ದರಿಂದ ಅನೀತಿಯುತವಾಗಿ, ದೌರ್ಜನ್ಯಯುತವಾಗಿ ಆಡಳಿತ ನಡೆಸುವವರ ಕುಟುಂಬಕ್ಕೆ ಮುಂದೊಂದು ದಿನ ರಾಷ್ಟ್ರಭಕ್ತರ ತ್ಯಾಗ ಮತ್ತು ಬಲಿಧಾನ ಭಾರತಾಂಭೆಯ ಶಾಪವಾಗಿ ಮಾರ್ಪಟ್ಟು ಕಷ್ಟ ಅನುಭವಿಸುವುದಂತೂ ಶತ:ಸಿದ್ದ (ಇಂತಹ ಅನೇಕ ಮಂದಿ ಈಗಾಗಲೇ ಕೂರಲು ಆಗದೇ, ಮಲಗಲು ಆಗದೇ ಯಾರಿಗಾಗಿ ದುರ್ಮಾರ್ಗದ ಸಂಪತ್ತನ್ನು ಕ್ರೂಢೀಕರಿಸಿದರೋ ಅಂತಹ ಹೆಂಡತಿ ಮಕ್ಕಳಿಂದ್ ತಿರಸ್ಕಾರ ಹೊಂದಿ) ಬಹುತೇಕ ಮಂದಿ ರಾಜಕೀಯವೆಂಬುದನ್ನು ಹಣ ಗಳಿಸುವ ವೃತ್ತಿ ಎಂಬುದಾಗಿ ತಿಳಿದು ಈ ಕ್ಷೇತ್ರವನ್ನು ಮತ್ತಷ್ಟು ಹೊಲಸು ಮಾಡುವುದಾದರೆ ಇನ್ನು ಈ ದೇಶದ ೧೦೬ ಕೋಟಿ ಜನರಿಗೆ ಸೇವೆ ಸಲ್ಲಿಸುವರಾರು? ಸರ್ಕಾರ ಉಳಿಸಿಕೊಳ್ಳಲು, ಸರ್ಕಾರ ಬೀಳಿಸಲು ಹತ್ತಾರು ಅಲ್ಲ ನೂರಾರು ಕೋಟಿ ಖರ್ಚು ಮಾಡುವ ಈ ಮಂದಿಗೆ ಹಣ ಬರುವುದಾದರು ಯಾವ ನ್ಯಾಯ ಮಾರ್ಗದಿಂದ? ಕೇವಲ ಶಾಸಕರಿಗೆ ಹತ್ತಾರು ಕೋಟಿ ಕೊಟ್ಟು ಕೊಂಡುಕೊಳ್ಳುವ/ಮಂತ್ರಿಮಾಂದಿಗರನ್ನಾಗಿಸುವ ನಾಯಕವರ್ಗ ಇವರಿಂದ ನಿರೀಕ್ಷಿಸುವುದಾದರೂ ಎಂತಹ ಆಡಳಿತವನ್ನು. ಶಾಸಕರ ಬೆಲೆ ಇಂದಿನ ಚಿನ್ನದ ಬೆಲೆಯಷ್ಟೇ ಗಗನಕ್ಕೇರಿದರೆ ಶಾಸಕರಿಗೆ ಬೆಲೆ ಕಟ್ಟಿ ಕೊಂಡುಕೊಳ್ಳುವುದಾದರೆ ಮುಂದಿನ ಚುನಾವಣೆಯಲ್ಲಿ/ಮುಂದೊಂದು ದಿನ ಶಾಂತವೇರಿ ಗೋಪಾಲಗೌಡ, ಲಾಲ್ ಬಹದ್ದೂರ್ ಶಾಸ್ತ್ರಿಗಳಂತಹ ಸೇವಾ ಮನೋಭಾವದ ನಿಷ್ಟಾವಂತ ವ್ಯಕ್ತಿಗಳು ಆಯ್ಕೆಯಾಗುವುದು ದುಸಾಧ್ಯವೇ ಸರಿ. ಇದಕ್ಕೆಲ್ಲಾ ಯಾರು ಹೊಣೆ? ನಮ್ಮ ದೇಶದ ಸಂವಿಧಾನವೇ? ಕಾನೂನೇ? ಭಾವಿ ಸತ್ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಣ ಸಂಸ್ಥೆಗಳೇ? ಇವರಿಗೆ ಶಿಕ್ಷಣ ನೀಡುವ ಮೇಷ್ಟ್ರುಗಳೇ? ಇವರನ್ನು ಹೆತ್ತು-ಹೊತ್ತು ಬೆಳೆಸಿದ ಸಂಸ್ಕಾರ ಕಲಿಸಬೇಕಾದ ಇವರ ತಂದೆ-ತಾಯಿಗಳದ್ದೇ? ಈ ಬಗ್ಗೆ ನೀವೇನಂತೀರಿ .......????????????

Comments