ಸಣ್ಣ ರತ್ನ
ಕುಡುದ್ಬುಟ್ ಆಡ್ದ್ರೆ ತೋಲ್ತಾದಣ್ಣ
ನಾಲ್ಗೆ - ಬಾಳ ಗೋಳು
/**********************************************/
ಹಿಂಗೆ ನಮ್ಮ ಎಂಡ್ಕುಡ್ಕ ರತ್ನನ್ ಮಗ ಸಣ್ಣ ರತ್ನ ಹಾಡ್ ಯೋಳ್ಕಂಡ್ ತೂರಾಡ್ಕೊಂಡು ಬರ್ತಿದ್ನಾ, ಅವನ್ಗೆ ಕಾಣಿಸ್ತು ರಾಜಕಾರ್ಣಿದ್ ಗೋಡೆ ಮ್ಯಾಲ್ ಅಂಟ್ಸಿದ್ ಚಿತ್ರ
ಹಾಡಿಂಗ್ ಮುಂದ್ವರೀತು
/**********************************************/
ಕುಡುದ್ಬುಟ್ ಆಡದ್ರೆ ತೋಲ್ತಾದಣ್ಣ
ನಾಲ್ಗೆ - ಬಾಳ ಗೋಳು
ಎಲ್ಲ ಒಂದೇ ತಪ ಕಾಣ್ತಾದಣ್ಣ
ಕೇಡಿ- ಕಂತ್ರಿ ಮುಖ್ಗೋಳು
ಹೆಸ್ರಿನರ್ಚ್ನೆ ಮಾಡ್ಬಿಡ್ತೀನಿ
ಯೆಡ್ಡಿಸ್ವಾಮಿ ಕುಮಾರಪ್ಪ
ಈಸ್ವರಣ್ಣ ರೇವಪ್ಪ
ಜನಾರ್ದ್ನ ಗೌಡ
ಬಚ್ಚೆ ರೆಡ್ಡಿ
ಕುಡ್ಕಾಯಿವ್ನು ಹೆಸ್ರಗಳ್ನೆಲ್ಲಾ ತೆಪ್ಪಾಗ್
ಯೋಳ್ತವನ್ ಅಮ್ತೀರಾ
ಅವ್ರ್ಗೆ ಇವ್ರ್ಗೆ ಇವ್ರ್ಗೆ ಅವ್ರ್ಗೆ
ವ್ಯತ್ಯಾಸ್ ಏನೈತೆ ನೀವ್ಯೋಳ್ತೀರಾ
- Read more about ಸಣ್ಣ ರತ್ನ
- Log in or register to post comments