ಸಣ್ಣ ರತ್ನ
ಕುಡುದ್ಬುಟ್ ಆಡ್ದ್ರೆ ತೋಲ್ತಾದಣ್ಣ
ನಾಲ್ಗೆ - ಬಾಳ ಗೋಳು
/**********************************************/
ಹಿಂಗೆ ನಮ್ಮ ಎಂಡ್ಕುಡ್ಕ ರತ್ನನ್ ಮಗ ಸಣ್ಣ ರತ್ನ ಹಾಡ್ ಯೋಳ್ಕಂಡ್ ತೂರಾಡ್ಕೊಂಡು ಬರ್ತಿದ್ನಾ, ಅವನ್ಗೆ ಕಾಣಿಸ್ತು ರಾಜಕಾರ್ಣಿದ್ ಗೋಡೆ ಮ್ಯಾಲ್ ಅಂಟ್ಸಿದ್ ಚಿತ್ರ
ಹಾಡಿಂಗ್ ಮುಂದ್ವರೀತು
/**********************************************/
ಕುಡುದ್ಬುಟ್ ಆಡದ್ರೆ ತೋಲ್ತಾದಣ್ಣ
ನಾಲ್ಗೆ - ಬಾಳ ಗೋಳು
ಎಲ್ಲ ಒಂದೇ ತಪ ಕಾಣ್ತಾದಣ್ಣ
ಕೇಡಿ- ಕಂತ್ರಿ ಮುಖ್ಗೋಳು
ಹೆಸ್ರಿನರ್ಚ್ನೆ ಮಾಡ್ಬಿಡ್ತೀನಿ
ಯೆಡ್ಡಿಸ್ವಾಮಿ ಕುಮಾರಪ್ಪ
ಈಸ್ವರಣ್ಣ ರೇವಪ್ಪ
ಜನಾರ್ದ್ನ ಗೌಡ
ಬಚ್ಚೆ ರೆಡ್ಡಿ
ಕುಡ್ಕಾಯಿವ್ನು ಹೆಸ್ರಗಳ್ನೆಲ್ಲಾ ತೆಪ್ಪಾಗ್
ಯೋಳ್ತವನ್ ಅಮ್ತೀರಾ
ಅವ್ರ್ಗೆ ಇವ್ರ್ಗೆ ಇವ್ರ್ಗೆ ಅವ್ರ್ಗೆ
ವ್ಯತ್ಯಾಸ್ ಏನೈತೆ ನೀವ್ಯೋಳ್ತೀರಾ
ದ್ಯಾವ್ಲೋಕ್ದಲ್ಲಿ ಅಮ್ರುತದ್ ಯಾಪಾರಾ
ಹಂಗಿಲ್ಲಿ ಕುಡ್ಕರ್ದು ಯೆಂಡ್ದ್ಯಾಪಾರಾ
ಸತ್ರೂನುವೆ ಮಾಡಕ್ಕಿಲ್ಲ ಕತ್ತೆ
ಕುದ್ರೆ ಯಾಪಾರ
ಇವ್ರಂಗ್ ಪಕ್ಸ ಗಿಕ್ಸ ಬದ್ಲಾಯಸಕಿಲ್ಲ
ನಮ್ಗೆಲ್ಲ ಒಬ್ಬನೆ ಲೀಡ್ರು ಅವ್ನೆ ಮುನಿಯ
ಗೌಡಪಟೇಲ ಮಠದ್ಸ್ವಾಮಿ ನೋಟಿನೊಡೆಯ
ಇವ್ರಲೀಡ್ರುಗಳ್ ಲಿಸ್ಟ ಮುಗಿಯಾಕಿಲ್ಲ
ಕುಡ್ಕರ್ದೆಲ್ಲಾ ಒಂದೆ ನಾಲ್ಗೆ
ಒಂದೆ ಜಾತಿ
ಅರ್ತ ಆಗಾಕಿಲ್ಲ
ಜಾತಿಗೀತಿ ಫಜೀತಿ
ಎಲ್ಲಾರ್ ಕೈನು
ಮೀರೋಗೈತೆ
ಬಡ್ವರ್ ಕತೆ
ಮುಗ್ದೋಗ್ತೈತೆ
ಹಾಲ್ನ್ ಸಮುದ್ರದಲ್ ಎಲ್ಲಮರ್ತು
ನಿನ ಗಂಡ ತೇಲ್ತವ್ನೆ
ನೀನಾರ್ ಒಸಿ ಯೆಬ್ಸು ಲಕ್ಸಮಮ್ಮೊ
ಹಂಗೆ ಕಾಸ್ ಯೆಣ್ಸ್ತಾನೆ
ಮುನಿಯಂಗ್ ಬರೋ ಲಾಬ್ದಲ್
ಒಸಿ ಕಾಸಿಸ್ಕೊಡ್ತೀನಿ
ನಿನ್ ಗಂಡನ ಸಾಲ
ಬೇಗ ತೀರ್ಲಂತ್ ಬೇಡ್ಕೋತೀನಿ