ಸಂಪದ ಹೊಸ ಮಾದರಿಯಲ್ಲಿ

ಸಂಪದ ಹೊಸ ಮಾದರಿಯಲ್ಲಿ

ಸಂಪದ ಹೊಸ ರೂಪದೊಂದಿಗೆ ರಾಜ್ಯೋತ್ಸವ ಸಮಯದಲ್ಲಿ ಪ್ರಕಟಗೊಂಡಿರುವುದು ಸಂತಸ ತಂದಿದೆ. ಹಲವಾರು ದೇಶಗಳ ಕನ್ನಡ ಅಭಿಮಾನಿಗಳಿಗೆ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತಿರುವ ಸಂಪದ ನಿಜಕ್ಕೂ ಪ್ರಶಂಸನಾರ್ಹವಾಗಿದೆ. ಎಷ್ಟೇ ಹೊಸ ಬ್ಲಾಗ್್ಗಳು ಹಾಗೇ ಕನ್ನಡದ ವೆಬ್ ಸೈಟ್್ಗಳು ಬಂದಿದ್ದರೂ ಸಂಪದ ತನ್ನ ಸೊಗಡನ್ನೇ ಉಳಿಸಿಕೊಂಡು ಹೋಗುತ್ತಿರುವುದೇ ಇಂದು ಅದರ ಪ್ರಸಿದ್ದಿಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಹರಿಪ್ರಸಾದ್ ನಾಡಿಗರ ಶ್ರಮ ಉಪಯುಕ್ತವಾಗಿದೆ.

ಹೊಸ ಮಾದರಿಯ ಸಂಪದದಲ್ಲಿ ಲೇಖನಗಳು ಓದಲು ಹರ್ಷ ಎನಿಸುತ್ತದೆ. ನಮ್ಮ ಅಕೌಂಟ್್ನ ಬಾಕ್ಸ್ ಬಣ್ಣ ಚೆನ್ನಾಗಿದೆ. ಆದರೆ ಬದಿಯಲ್ಲಿನ ಇತರೆ ಪ್ರತಿಕ್ರಿಯಗೆಳು ಕಾಣಿಸುತ್ತಿಲ್ಲ. ಇದು ಇದೆಯೋ ಅಥವಾ ಇಲ್ಲೋ ಎನ್ನುವುದು ಗೊತ್ತಿಲ್ಲ. ಇದನ್ನೊಂದು ಸರಿಪಡಿಸಬೇಕಾಗಿದೆ ಎನ್ನುವುದು ನನ್ನ ಅಭಿಪ್ರಾಯ. ಮುಖ ಪುಟವೂ ಚೆನ್ನಾಗಿದೆ.

ಸಂಪದದ ಹರಿಪ್ರಸಾದ್ ನಾಡಿಗರಿಗೆ, ಕಾರ್ಯ ನಿರ್ವಾಹಕರಿಗೆ ಹಾಗೂ ಸಂಪದದ ಎಲ್ಲಾ ಮಿತ್ರರಿಗೂ

55ನೇ ಕನ್ನಡ ರಾಜ್ಯೋತ್ಸವದ ಶುಭಾಷಯಗಳು

Rating
No votes yet

Comments