ಅರಿವಿಲ್ಲದೆಯೇ ಹಾಡುತಿದೆ ಇಂದು ನನ್ನ ಮನವ್ಯಾಕೋ

ಅದ್ಯಾರೋ ಹೇಳಿರುವ ಅನುರಾಗದ ಸ್ವರ ಇದುವೇ ಏನೋ ...
ಮೊಗ್ಗು ಬಿರಿಯುವ ಶಬ್ದಕೆ ಮಧುಮಾಸ ಬಂದಂತಿದೆ
ಕಣ್ಣ ಮುಚ್ಚಿ ಅನುಭವಿಸುವ ಮಂದಹಾಸ ನಿನ್ನದೇ
ಗೀಚ ಹೋರಾಟ ಚಿತ್ರದಲ್ಲೂ ನಿನ್ನ ನಗೆ ಮೂಡಿದೆ
ಕಥೆಗಾರ ನಾನಲ್ಲದಿದ್ದರೂ ನೀ ಪಾತ್ರ ತುಂಬಿದ ಪ್ರಣಯ ಕಥೆ ಹೆಣೆದಾಗಿದೆ
ಅರಿವಿಲ್ಲದೆಯೇ ಹಾಡುತಿದೆ ಇಂದು ನನ್ನ ಮನವ್ಯಾಕೋ
ಅದ್ಯಾರೋ ಹೇಳಿರುವ ಅನುರಾಗದ ಸ್ವರ ಇದುವೇ ಏನೋ ...
ಶಾಂತ ವೀಣೆ ಇಂದು ಪುನಃ ಮದುರ ಧಣಿ ಮಿಡಿದಿದೆ
ಮೂಕ ಸಂಜ್ಞೆಯಲ್ಲೂ ನಿನ್ನ ಕರೆ ಕೇಳಿದೆ
ಮಳೆಬಿಲ್ಲಿಗೆ ಲಗ್ಗೆ ಹಾಕ ಹೊರಟ ಪಟವು ನಿನ್ನ ಫಟ ದಂತಿದೆ
ಗೊತ್ತಿ೮ಲ್ಲದ ದಿಕ್ಕಿಗೆ ಹಾರುವ ಪತಂಗವು ನಿನ್ನ ಬಣ್ಣ ಕದ್ದಂತಿದೆ
ಅರಿವಿಲ್ಲದೆಯೇ ಹಾಡುತಿದೆ ಇಂದು ನನ್ನ ಮನವ್ಯಾಕೋ
ಅದ್ಯಾರೋ ಹೇಳಿರುವ ಅನುರಾಗದ ಸ್ವರ ಇದುವೇ ಏನೋ ...
ದಡಬಿಟ್ಟ ದೋಣಿಯೊಂದು ತನ್ನ ದಡ ಈಗ ಸೇರಿದೆ
ಮೇಘ ತುಂಬಿದ ಬಾನೊಳು ನಿನ್ನ ನಗೆಯ ಬೆಳದಿಂಗಳು ಮೂಡಿದೆ
ಯಾರಿಲ್ಲದೂರಿನಲಿ ಪ್ರೀತಿಯ ಮಾರಾಟ ಮಳಿಗೆ ಬಾಗಿಲು ತೆರೆದಿದೆ
ತಲೆ ಏರಿ ಕೂತ ನಿನ್ನ ಬಗೆಗಿನ ವರ್ಣನೆಗೆ ಪದಗಳ ಬೇಡಿಕೆ ಹೆಚ್ಚಾಗಿದೆ
ಅರಿವಿಲ್ಲದೆಯೇ ಹಾಡುತಿದೆ ಇಂದು ನನ್ನ ಮನವ್ಯಾಕೋ
ಅದ್ಯಾರೋ ಹೇಳಿರುವ ಅನುರಾಗದ ಸ್ವರ ಇದುವೇ ಏನೋ ...
ನಿನ್ನ
ಕಾಮತ್ ಕುಂಬ್ಳೆ
Rating