ರಾಜ್ಯೋತ್ಸವದ ಶುಭಹಾರೈಕೆಗಳು!!
ಕರ್ನಾಟಕವೇ ಸುಂದರ
ಕನ್ನಡವೇ ಸುಮಧುರ
ಎಲ್ಲಾದರೂ ಇರು,ಎಂತಾದರು ಇರು
ಎಂದೆಂದಿಗೂ ನೀ ಕನ್ನಡಿಗನಾಗಿರು!
ಎಲ್ಲರಿಗೂ ೫೫ನೇ ರಾಜ್ಯೋತ್ಸವದ ಶುಭಹಾರೈಕೆಗಳು!!
- Read more about ರಾಜ್ಯೋತ್ಸವದ ಶುಭಹಾರೈಕೆಗಳು!!
- Log in or register to post comments
ಕರ್ನಾಟಕವೇ ಸುಂದರ
ಕನ್ನಡವೇ ಸುಮಧುರ
ಎಲ್ಲಾದರೂ ಇರು,ಎಂತಾದರು ಇರು
ಎಂದೆಂದಿಗೂ ನೀ ಕನ್ನಡಿಗನಾಗಿರು!
ಎಲ್ಲರಿಗೂ ೫೫ನೇ ರಾಜ್ಯೋತ್ಸವದ ಶುಭಹಾರೈಕೆಗಳು!!
ಅಕ್ಟೋಬರ್ ೨೯ರ ಈ ಸುದ್ದಿ ಓದಿ: (<a href="http://www.vijaykarnatakaepaper.com/svww_zoomart.php?Artname=20101029a_014101003&ileft=51&itop=54&zoomRatio=130&AN=20101029a_014101003">ವಿಜಯ ಕರ್ನಾಟಕ</a>
<blockquote><strong><u>ಕೈ ಕತ್ತರಿಸಿದಾತ ಈಗ ಜನಪ್ರತಿನಿಧಿ.</u></strong>
ರಾಜ್ಯೋತ್ಸವಕ್ಕೆಂದು ಎರಡು ವಾರಗಳ ಹಿಂದೆ ಇಲ್ಲೊಂದು ವಿಶೇಷ ಸಂಗೀತ ಕಚೇರಿ ನಡೆಯಿತು. ಕರ್ನಾಟಕ ಸಂಗೀತದ ಕಚೇರಿ ಎಂದರೆ ಸಾಧಾರಣವಾಗಿ ಮೂರು ನಾಲ್ಕು ಭಾಷೆಗಳ ರಚನೆಗಳನ್ನು ಹಾಡುವುದು ರೂಢಿ. ಆದರೆ ಇದು ರಾಜ್ಯೋತ್ಸವಕ್ಕಾದ್ದರಿಂದ ಒಳ್ಳೆಯ ಕನ್ನಡ ರಚನೆಗಳನ್ನೇ ಆಯ್ದು ಹಾಡಿದವರು ಶ್ರೀ ರಾಘವನ್ ಮಣಿಯನ್. ಇದರಲ್ಲಿ ಈ ಸಂದರ್ಭಕ್ಕೆಂದೇ ರಚಿಸಿದ ವಿಶೇಷ ರಾಗ-ತಾನ-ಪಲ್ಲವಿಯೂ ಇತ್ತು.
ಪಲ್ಲವಿಯ ಸಾಹಿತ್ಯ ಹೀಗಿತ್ತು:
ಕನ್ನಡದ ಕಾವೇರಿ
ಶಾರದೆಯ ಶೃಂಗೇರಿ
ನವರಸದಿ ಮಿನುಗುತಲಿ
ಕನ್ನಡಮ್ಮ ಭುವನೇಶ್ವರಿ!
ಎರಡು ರಾಗಗಳಲ್ಲಿ ಮೂಡಿದ ಈ ಪಲ್ಲವಿ ಕನ್ನಡ - ಮತ್ತೆ ನವರಸ ಕನ್ನಡ ರಾಗಗಳಲ್ಲಿದ್ದು ಈ ಸಂದರ್ಭಕ್ಕೆ ಬಲು ತಕ್ಕದ್ದಾಗಿತ್ತು.
ಯಾವ ಭಾಷೆ ಎಲ್ಲರ ಹೃದಯವನ್ನು ತಟ್ಟಿತೋ
ಯಾವ ಭಾಷೆ ವೀರಮಾತೆಯರ ಮಡಿಲನ್ನು ಮುಟ್ಟಿತೋ
ಯಾವ ಭಾಷೆ ಕರ್ಣಗಳಿಗೆ ಇಂಪನ್ನು ಕೊಟ್ಟಿತೋ
ಯಾವ ಭಾಷೆ ಮನಗಳಿಗೆ ಮನೆಗಳಿಗೆ ಹಸಿರು ತೋರಣವ ಕಟ್ಟಿತೋ
ಯಾವ ಭಾಷೆ ಶಿಲೆಗಳಿಗೆ ಜೀವ ಕೊಟ್ಟಿತೋ
ಯಾವ ಭಾಷೆ ಅನ್ಯರಿಂದ ಪುರಸ್ಕರಿಸಲ್ ಪಟ್ಟಿತೋ
ಯಾವ ಭಾಷೆ ಒಂದು ಸುಂದರ ಸಾಮ್ರಾಜ್ಯ ಕಟ್ಟಿತೋ
ಅದುವೇ ನನ್ನ ಕನ್ನಡ ,ಅದುವೇ ನಿನ್ನ ಕನ್ನಡ
ಎಲ್ಲರಿಗೂ ಸುಂದರ ಸುವರ್ಣ ಕರ್ನಾಟಕ ರಾಜ್ಯೋತ್ಸವದ ಶುಭಾಶಗಳು
--ಭಾಷಪ್ರಿಯ
ಅಷ್ಟಬಂಧ
ಸಂಪದಿಗ ಸಹೃದಯರು ನಾವು
ಸ್ನೇಹಿತರೆ, ನಾವೆಲ್ಲ ಕನ್ನಡಿಗರು
ಕರ್ನಾಟಕ ಸದಾ ಹೆಮ್ಮೆ
ರಾಜ್ಯೋತ್ಸವದ ಸಂತಸ ಪಡೋಣ
ಶುಭಾಶಯ ಹಾರೈಸೋಣ ಇಂದು
(ಎಡದಿಂದ ಬಲಕ್ಕೆ ಐದು ವಾಕ್ಯ
ಮೇಲಿನಿಂದ ಕೆಳಕ್ಕೆ ಮೂರು ವಾಕ್ಯ
ರಾಜ್ಯೋತ್ಸವದ ಈ ದಿನ ಇಲ್ಲುಂಟು
ಎಂಟು ಭಾವಗಳ ನಂಟು)
ಕೆಂಪು ಪಟ್ಟಿ, ಹಳದಿ ಪಟ್ಟಿ ನಮ್ಮ ಧ್ವಜವು, ಕನ್ನಡ;
ಮೇಲಿಂದ ಮೇಲೆ ನೀ ಹಾರಿಸದನ.
ಕಾವೇರಿ, ಕೃಷ್ಣ, ತುಂಗ, ನಮ್ಮ ನದಿಗಳು, ಕನ್ನಡ;
ತೀರ್ಥವೆಂದು ಎಣಿಸಿ ನೀ ಸೇವಿಸದನ.
ಗಂಗ, ಚೋಳ, ಕದಂಬರು ನಮ್ಮ ರಾಜರು , ಕನ್ನಡ;
ಹೆಮ್ಮೆಯಿಂದ ಸ್ಮರಿಸು ನೀ ಅವರನ.
ರನ್ನ, ಪಂಪ, ಹರಿಹರ ನಮ್ಮ ಕವಿಗಳು, ಕನ್ನಡ;
ಶ್ರಧ್ಧೆಯಿಂದ ಓದು ನೀನವರ ಕಾವ್ಯ ಕವನ.
ಆಗಿರಬೇಡ ನೀ ನಿರಾಭಿಮಾನಿ,
ಸಂಪದಿಗರೇ,
ನಮಗೆಲ್ಲಾ ಪ್ರೊಫೈಲ್ ಶಬ್ದ ಗೊತ್ತು, ಅದಕ್ಕೆ ಕನ್ನಡದಲ್ಲಿ ಸಮಾನವಾದ ಶಬ್ದಗಳು ಏನಾದರೂ ಬಳಕೆಯಲ್ಲಿ ಇವೆಯೇ?
ಈ ಕುರಿತು ಯೋಚಿಸಿದಾಗ "ಪ್ರವರ" ಶಬ್ದ ಬಳಸ ಬಹುದೇನೊ; ಪ್ರೊಫೈಲ್ ನಂತೆ ಪ್ರವರವೂ ಕೂಡ ತಾನೇ ತನ್ನ ಕುರಿತು ಓರ್ವ ಹೇಳಿಕೊಳ್ಳುವ ಪರಿಚಯ.
ಆದ್ದರಿಂದ ಸಮಂಜಸವಾಗಬಹುದು ಎಂದು ಕೊಂಡಿರುವೆ.
ತಮ್ಮ ಅನಿಸಿಕೆ, ಬೇರೆ ಶಬ್ದ ತಿಳಿಸಿ; "ಪ್ರವರ" ಸೂಕ್ತ ಎನಿಸಿದರೆ ಬಳಸಿ.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಷಯಗಳು!!!
ನಮಸ್ಕಾರಗಳೊಂದಿಗೆ...
ಆತ್ರೇಯ.