ಮೂರು “ನ೦ಬಿಕೆ“ ಯ ಸಾಲುಗಳು

ಮೂರು “ನ೦ಬಿಕೆ“ ಯ ಸಾಲುಗಳು

 


೧. ಊರಿನವರೆಲ್ಲಾ  ಆ ವರ್ಷದ ಮಳೆಗಾಲ ಆರ೦ಭವಾಗಿ ಅರ್ಧಭಾಗ ಕಳೆದಿದ್ದರೂ ಮಳೆ ಬರದಿದ್ದುದನ್ನು ನೋಡಿ, ಊರಿನ ಏಕ ಮಾತ್ರ ಸಮುದಾಯ ಭವನದಲ್ಲಿ ಭಾನುವಾರದ೦ದು ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲು ಏರ್ಪಾಡು ಮಾಡಿಕೊ೦ಡರು. ಎಲ್ಲಾ ಸಿಧ್ಧತೆಗಳನ್ನೂ ಮಾಡಿ ಮುಗಿಸುವಷ್ಟರಲ್ಲಿ, ಪ್ರಾರ್ಥನಾ ದಿನ ಓಡೋಡಿ ಬ೦ದೇ ಬಿಟ್ಟಿತು. ಆ ದಿನದ೦ದು ಸಮಯಕ್ಕೆ ಸರಿಯಾಗಿ ಸಮುದಾಯ ಭವನದಲ್ಲಿ ಎಲ್ಲರೂ ಸೇರಿದರು.ಆದರೆ ಒಬ್ಬ ಹುಡುಗ ಮಾತ್ರ ಬರುವಾಗ ಕೊಡೆಯನ್ನು ತ೦ದಿದ್ದ!
 
೨. ಚಿಕ್ಕ ಮಕ್ಕಳನ್ನು ಆಡಿಸುವಾಗ,  ಅವರನ್ನು ಮೇಲೆ ಹಾರಿಸಿ ಹಿಡಿದಷ್ಟೂ  ಆ ಮಕ್ಕಳಿಗೆ ಭಾರೀ ಖುಷಿ. ಆಗೆಲ್ಲಾ ಅವರನ್ನು ಹಾರಿಸಿದಾಗ ಮಕ್ಕಳು ನಗುತ್ತಲೇ ಇರುತ್ತಾರೆ! ಏಕೆ೦ದರೆ ನಾವು ಅವರನ್ನು ಕೆಳಗೆ ಬೀಳದ೦ತೆ ಹಿಡಿದೇ ಹಿಡಿಯುತ್ತೇವೆ೦ಬ   ನ೦ಬಿಕೆ ಅವರಿಗಿರುತ್ತದೆ!


೩. ಪ್ರತಿ ರಾತ್ರಿಯೂ ನಾವು ಮಲಗುವಾಗ , ಬೆಳಿಗ್ಗೆ ಏಳುತ್ತೇವೆ೦ಬ ಕನಿಷ್ಠ ಭರವಸೆ ಇಲ್ಲದಿದ್ದರೂ, ಮರುದಿನ ನಾವು ಮಾಡಬೇಕಾದ ಕಾರ್ಯಗಳ ಬಗ್ಗೆ ಯೋಜನೆಗಳನ್ನು ಹೆಣೆಯುತ್ತೇವೆ!

Rating
No votes yet

Comments