ಅದುವೇ ನನ್ನ ಕನ್ನಡ ,ಅದುವೇ ನಿನ್ನ ಕನ್ನಡ
ಬರಹ
ಯಾವ ಭಾಷೆ ಎಲ್ಲರ ಹೃದಯವನ್ನು ತಟ್ಟಿತೋ
ಯಾವ ಭಾಷೆ ವೀರಮಾತೆಯರ ಮಡಿಲನ್ನು ಮುಟ್ಟಿತೋ
ಯಾವ ಭಾಷೆ ಕರ್ಣಗಳಿಗೆ ಇಂಪನ್ನು ಕೊಟ್ಟಿತೋ
ಯಾವ ಭಾಷೆ ಮನಗಳಿಗೆ ಮನೆಗಳಿಗೆ ಹಸಿರು ತೋರಣವ ಕಟ್ಟಿತೋ
ಯಾವ ಭಾಷೆ ಶಿಲೆಗಳಿಗೆ ಜೀವ ಕೊಟ್ಟಿತೋ
ಯಾವ ಭಾಷೆ ಅನ್ಯರಿಂದ ಪುರಸ್ಕರಿಸಲ್ ಪಟ್ಟಿತೋ
ಯಾವ ಭಾಷೆ ಒಂದು ಸುಂದರ ಸಾಮ್ರಾಜ್ಯ ಕಟ್ಟಿತೋ
ಅದುವೇ ನನ್ನ ಕನ್ನಡ ,ಅದುವೇ ನಿನ್ನ ಕನ್ನಡ
ಎಲ್ಲರಿಗೂ ಸುಂದರ ಸುವರ್ಣ ಕರ್ನಾಟಕ ರಾಜ್ಯೋತ್ಸವದ ಶುಭಾಶಗಳು
--ಭಾಷಪ್ರಿಯ