ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಓಲವೆ

ಒಲವಿನ ಊರಲಿ ನನ್ನದೊಂದು ಒಲವಿದೆ
ಓಲುಮೆಯ ತೇರಲಿ ಎದೆಗೆಬಂದು ಒಲಿದಿದೆ
ಒಲವಿನ ಮಾತಲಿ......
ಓಲುಮೆಯ ಎದೆಯಲಿ.....
ಒತ್ತಾಯದ ಒಂಪ್ಪಂದ ಒದಗಿಇಂದು ಒಲಿದಿದೆ
ಓ ಓಲವೆ ನನ್ನೊಲವೆ ಒಲ್ಲದ ಒಲವಿಗಾಗಿ ಎಕೆ ನೀ ಒಣಗಿರುವೆ


ಎದೆಯ ದುಗುಡವ ಕೇಳದೆ ಹೋದ
ಮನದ ನೋವಿಗೆ ಜೊತೆಯಾಗಿರದ
ಎಳೆಯ ಒಲವನು ಚಿವುಟಿ ಅಂದು
ಮರೆತು ಹೋದ ನೆನಪಲಿ ಬಂದು
ಕೊನೆಇಲ್ಲದ ಕಲರವ ಕೇಳೋ............ಮರುಳೋ..........


ಒಲವಿನ ಊರಲಿ ನನ್ನದೊಂದು ಒಲವಿದೆ
ಓಲುಮೆಯ ತೇರಲಿ ಎದೆಗೆಬಂದು ಒಲಿದಿದೆ
ಒಲವಿನ ಮಾತಲಿ......
ಓಲುಮೆಯ ಎದೆಯಲಿ.....
ಒತ್ತಾಯದ ಒಂಪ್ಪಂದ ಒದಗಿಇಂದು ಒಲಿದಿದೆ
ಓ ಓಲವೆ ನನ್ನೊಲವೆ ಒಲ್ಲದ ಒಲವಿಗಾಗಿ ಎಕೆ ನೀ ಒಣಗಿರುವೆ


ಒಲವ ಕನಸ ತುಳಿದ ಮನಕೆ
ಓಲುಮೆ ಇಲ್ಲದ ದೇಹದ ತಡಿಕೆ
ಕೊನೆಯ ಕರೆಯ ಕೋಗಿ ಕರೆದು
ಉಸಿರೆ ಇಲ್ಲದ ದೇಹವ ಬಸಿದು
ಒಲವ ಕುಲುಮೆಯ ಮುಗಿಸೋ.........ಮರೆಸೋ.......


 

ಕೊಂಕಣಿ ಭಾಷಾ ಮಾಲಿಕೆ 4

ಸಾಮಾನ್ಯ ಸಂಬಾಷಣೆ
ನಮಸ್ಕಾರ : ನಮಸ್ಕಾರು
ನಿನ್ನ ಹೆಸರೇನು ? : ತುಗೆಲೇ ನಾವ್ ಕಸಲೇ?
ನನ್ನ ಹೆಸರು ವೆಂಕಟೇಶ್ .: ಮಿಗೆಲೇ ನಾವ್ ವೆಂಕಟೇಶ್
ನಿಮ್ಮ ಉರು ಯಾವುದು ? : ತುಮ್ಗೆಲೇ ಗಾಂವು ಕಂಚೆ ?
ನಾವು ಮಂಗಳೂರಿನವರು : ಅಮ್ಮಿ ಕೊಡಿಯಾಲ್ ಛೆ (ಮಂಗಳೂರಿಗೆ ಕೊಂಕಣಿಯಲ್ಲಿ ಕೊಡಿಯಾಲ್ ಎಂದೂ ಕರೆಯುತ್ತಾರೆ)
ಏನು ಮಾಡ್ತಾ ಇದ್ದಿಯಾ ?: ಕಸ್ಸ್ ಕರ್ಥಾ ಅಸ್ಸ ?
ನಾನು ಕೆಲಸದಲ್ಲಿದ್ದೇನೆ : ಹಾವ್ ಕಾಮಾರಿ ಅಸ್ಸ
ಈಗ ನೀವು ಎಲ್ಲಿ ಇರುವುದು: ಅತ್ತ ಕಂಹಿ ಅಸ್ಚೆ ತುಮ್ಮಿ ?
ಈಗ ನಾನು ಬೆಂಗಳೂರಿನಲ್ಲಿ ಇದ್ದೇನೆ : ಅತ್ತ ಹಾವ್ ಬೆಂಗಳುರಾನ್ತು ಅಸ್ಸ.
ಯಾವಾಗ ಊರಿಗೆ ಬಂದಿದ್ದು ? : ಕೆದನ ಗಾವಾಂಕ್ ಅಯಿಲೋ ?

ಲಿನಕ್ಸಾಯಣ: UEFI – ನಿಮ್ಮ ಪಿ.ಸಿ ಬೇಗ ಶುರುವಾಗುವಂತೆ ಮಾಡಬಲ್ಲದು..

೨೫ ವರ್ಷಗಳಿಂದ ಪ್ರತಿಯೊಂದು ಕಂಪ್ಯೂಟರ್ ಮತ್ತು ಅದರಲ್ಲಿನ ಆಪರೇಟಿಂಗ್ ಸಿಸ್ಟಂ ಶುರುವಾಗಲಿಕ್ಕೆ ಕಾರಣವಾಗಿರುವ ಸಣ್ಣದೊಂದು ತಂತ್ರಾಂಶ ಬಯೋಸ್ (BIOS – Basic Input Output System) ಇಷ್ಟು ದಿನ ಇದ್ದದ್ದೇ ಒಂದು ಅಚ್ಚರಿ. ಈ ತಂತ್ರಾಂಶದ ಆಯುಷ್ಯ ಇಷ್ಟು ದೊಡ್ಡದಿರಬಹುದೆಂದು ಯಾರೂ ಊಹಿಸಿರಲೂ ಇಲ್ಲ, ಜೊತೆಗೆ ಇಂದು ನಿಮ್ಮ ಹೊಸ ಕಂಪ್ಯೂಟರ್ ಬೂಟ್ ಆಗಲಿಕ್ಕೆ ಸ್ವಲ್ಪ ಸಮಯ ತೆಗೆದು ಕೊಳ್ಳುತ್ತಿದೆ ಎಂದರೆ.. ಅದಕ್ಕೆ ಈ ಬಯೋಸ್ ಕಾರಣ. ೨ ಜಿ.ಬಿ ರಾಂ ಇದ್ದರೂ ಸ್ವಲ್ಪ ಹೊತ್ತು ತೆಗೆದುಕೊಳ್ಳುತ್ತಿದೆಯಲ್ಲ ಹಳೆಯ ಸಿಸ್ಟಂನಂತೆಯೇ ಎಂದು ನಿಮಗೂ ಅನಿಸಿರಬೇಕಲ್ಲವೆ?

 

ಐದೂವರೆ ಅಡಿ ಎತ್ತರದ ಸೌತೆಕಾಯಿ ಬೆಳೆದ ಚೀನಾ ರೈತ

ಸೌತೆಕಾಯಿ ಹೆಚ್ಚಿನ ಎಲ್ಲಾ ದೇಶಗಳ ನೆಚ್ಚಿನ ತರಕಾರಿ. ಇದನ್ನು ಬೆಳೆಯಲು ಬಿಡದೇ ಎಳತಿರುವಾಗಲೇ ತಿಂದರೆ ರುಚಿ ಹೆಚ್ಚು. ಆದರೆ ಕೆಲವನ್ನಾದರೂ ಬೀಜಕ್ಕಾಗಿ ರೈತರು ಕೊಯ್ಲು ಮಾಡದೇ ಹಾಗೇ ಬಿಡುತ್ತಾರೆ. ಅವುಗಳಲ್ಲಿ ಕೆಲವು ಮಾತ್ರ ಅತಿದೊಡ್ಡದಾಗಿ ಬೆಳೆಯುತ್ತವೆ.

 

“ಯಡಿಯೂರಪ್ಪ ಅತಂತ್ರ” - ಪ್ರಜಾಸತ್ತಾ ವ್ಯವಸ್ಥೆ “ಸುತಂತ್ರವೇ?”

‘ಯಡಿಯೂರಪ್ಪ ಅತಂತ್ರ’ - ಇದು ಅಕ್ಟೋಬರ್ 7ರ ಪ್ರಜಾವಾಣಿ  ಧ್ವಜ ಶೀರ್ಷಿಕೆ.


ಅದೇ ಸಂಪಾದಕೀಯದಲ್ಲಿ ವರ್ಣಿಸಿದ್ದಾರೆ, ಇದು ಯಡಿಯೂರಪ್ಪನವರ ಸ್ವಯಂಕೃತ ಅಗ್ನಿ ಪರೀಕ್ಷೆ ಅಂತೆ. ಇರಬಹುದು ಆದರೆ ಗೆಲ್ಲುವುದು, “ಕುದುರೆ ಕೊಳ್ಳುವ” ಬಲ-ಚಾಣಾಕ್ಷತೆಯ ಮೇಲಲ್ಲದೆ, ಉದಾತ್ತ ತತ್ವ-ಸಿದ್ಧಾಂತದ ಮೇಲಲ್ಲ, ಅಲ್ಲವೇ?


ವೋಟು ಹಾಕಿ ಕಳಿಸಿದವರ ರಕ್ತ ಕುದಿಯಿತೇನೋ; ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು ಮೈ ಪರಚಿಕೊಂಡರೇನೋ. ಪಾಪ, ಅದು ಬಡವನ ಕೋಪ! ನಮ್ಮೀ ಪ್ರಜಾಪ್ರಭುತ್ವದಲ್ಲಿ, ನಮ್ಮ ವೋಟಿನಿಂದ ನಮ್ಮ ಸಂಕಲ್ಪ-ನಿರ್ಧಾರಗಳು ಸಾಕಾರವಾಗುವುದು ಎಂದಾದರೂ ಉಂಟೇ?!


ಹಿಂದೆ Underworld ಎಂದು ತಿರಸ್ಕಾರದಿಂದ ಕರೆಯಲಾಗುತ್ತಿದ್ದ ನರಕದ ಬಹಿರಂಗ ರೂಪವಷ್ಟೇ ಇಂದಿನ ರಾಜಕೀಯ! ಧ್ಯೆಯ, ಸಿದ್ಧಾಂತ, ಸಮಾಜಸೇವೆಗಳಿಂದ ಇದು ಗಾವುದ-ಗಾವುದ ದೂರ!

ಪಾತ್ರಗಳಿಗೆ ಜೀವ ತುಂಬಿದ ಗೆಳೆಯರು

ನಾನು ಸಂಪದಕ್ಕೆ ಬರುವ ಮುನ್ನ ಯಾವ ರೀತಿಯ ಹಾಸ್ಯ ಬರೆದರೆ ಅಲ್ಲಿನ ಗೆಳೆಯರಿಗೆ ತಲುಪುತ್ತದೆ ಎನ್ನುವ ಚಿಂತನೆ ಕಾಡುತ್ತಿತ್ತು. ಇದಕ್ಕೆ ಮಡದಿ ಹಾಗೂ ನನ್ನ ಕೆಲ ಸ್ನೇಹಿತರು, ಪಾತ್ರಗಳನ್ನು ಸೃಷ್ಟಿಸಿ ಅದರ ಮುಖಾಂತರ ಕಥೆ ಹೆಣೆದರೆ ಅದೂ ಒಂದಕ್ಕೊಂದು ಜೊತೆಗೂಡಿದರೆ ಖಂಡಿತಾ ವರ್ಕ್ ಔಟ್ ಆಗುತ್ತದೆ ಎಂದಿದ್ದರು. ಅವಾಗ ಹುಟ್ಟಿಕೊಂಡಿದ್ದೇ ಒಂದು ಹಳ್ಳಿ, ಅಲ್ಲಿನ ವಾಸನೆ ಗೌಡಪ್ಪ, ಸುಬ್ಬ, ಸೀನ, ಕಟ್ಟಿಗೆ ಒಡೆಯೋ ಕಿಸ್ನ, ತಂತಿ ಪಕಡು ಸೀತು, ಸುಬ್ಬಿ ಹೀಗೆ ಹಲವರು. ಕೆಲವೊಮ್ಮೆ ಲೇಖನಗಳನ್ನು ಬರೆಯುವಾಗ ನಾನೇ ಸಾಕಷ್ಟು ಬಾರಿ ನಕ್ಕಿದ್ದೂ ಇದೆ. ಏನ್ರೀ ಒಬ್ಬರೇ ನಗ್ತಾ ಇದೀರಾ ಅಂತಿದ್ಲು ನನ್ನ ಹೆಂಡರು.