ಐದೂವರೆ ಅಡಿ ಎತ್ತರದ ಸೌತೆಕಾಯಿ ಬೆಳೆದ ಚೀನಾ ರೈತ

ಐದೂವರೆ ಅಡಿ ಎತ್ತರದ ಸೌತೆಕಾಯಿ ಬೆಳೆದ ಚೀನಾ ರೈತ

ಸೌತೆಕಾಯಿ ಹೆಚ್ಚಿನ ಎಲ್ಲಾ ದೇಶಗಳ ನೆಚ್ಚಿನ ತರಕಾರಿ. ಇದನ್ನು ಬೆಳೆಯಲು ಬಿಡದೇ ಎಳತಿರುವಾಗಲೇ ತಿಂದರೆ ರುಚಿ ಹೆಚ್ಚು. ಆದರೆ ಕೆಲವನ್ನಾದರೂ ಬೀಜಕ್ಕಾಗಿ ರೈತರು ಕೊಯ್ಲು ಮಾಡದೇ ಹಾಗೇ ಬಿಡುತ್ತಾರೆ. ಅವುಗಳಲ್ಲಿ ಕೆಲವು ಮಾತ್ರ ಅತಿದೊಡ್ಡದಾಗಿ ಬೆಳೆಯುತ್ತವೆ.

 

ಆದರೆ ದಕ್ಷಿಣ ಚೀನಾದ ಹೇಫೈ ಪ್ರಾಂತದ ಅಕೇಲೇ ಹೈ ಎಂಬ ರೈತನ ಜಮೀನಿನಲ್ಲಿ ಬರೋಬ್ಬರಿ ಐದೂವರೆ ಅಡಿ ಎತ್ತರದ ಸೌತೆಕಾಯಿಯೊಂದು ಬೆಳೆದು ಅಚ್ಚರಿ ಮೂಡಿಸಿದೆ. ಇದಕ್ಕಿಂತ ಮುನ್ನ ಬ್ರಿಟನ್ನಿನ ಫ್ರಾಂಕ್ ಡಿಮ್ಮಾಕ್ ಎಂಬ ಕೃಷಿಕರು ಬೆಳೆದಿದ್ದ ಮೂರು ಅಡಿ ಐದಿಂಚು ಎತ್ತರದ ಸೌತೇಕಾಯಿಯೇ ವಿಶ್ವದ ಅತಿದೊಡ್ಡ ಸೌತೆಕಾಯಿ ಎಂಬ ದಾಖಲೆ ಪಡೆದಿತ್ತು.

 

ಇಂದು ಈ ದಾಖಲೆ ಅಕೇಲೇ ಪಾಲಾಗಿದೆ. ಇದು ಬೆಳೆಯಲು ಯಾವ ಗೊಬ್ಬರ ಬಳಸಿದ್ದಿರಿ ಎಂದು ಕೇಳಿದರೆ ಆತ ನಗುತ್ತಾ ನೀಡುವ ಉತ್ತರ 'ಕುದುರೆ ಲದ್ದಿ'.  ಆದರೆ ಅದೇ ಗದ್ದೆಯಲ್ಲಿ ಅದೇ ಬಳ್ಳಿಯಲ್ಲಿ ಅದೇ ಗೊಬ್ಬರವುಂಡ ಇತರ ಸೌತೇಕಾಯಿಗಳು ಸಾಮಾನ್ಯಗಾತ್ರವನ್ನು ಪಡೆದಿವೆ. ಆದರೆ ಈ ಸೌತೇಕಾಯಿ ಮಾತ್ರ ದಿನೇ ದಿನೇ ದೊಡ್ಡದಾಗುತ್ತಾ ಹೋಗುತ್ತಿತ್ತು. ಕುತೂಹಲಕ್ಕೆ ಎಷ್ಟು ದೊಡ್ಡದಾಗಿ ಬೆಳೆಯುತ್ತದೆ ನೋಡೋಣ ಎಂದು ಕೊಯ್ಲು ಮಾಡದೇ ಹಾಗೇ ಬಿಟ್ಟೆ. ಕಡೆಗೆ ಐದಡಿ ಏಳು ಇಂಚು ಎತ್ತರವಾದ ಬಳಿಕ ಇದರ ಬೆಳೆಯುವಿಕೆ ನಿಂತಿತು. ಬೆಳೆಯುವಿಕೆ ನಿಂತಿತು ಎಂದು ಖಾತ್ರಿಯಾದ ಬಳಿಕವೇ ಇದನ್ನು ಕೊಯ್ದು ತಂದೆ ಎಂದು ವಿವರಿಸುತ್ತಾನೆ.

 

ಈಗ ಈ ಸೌತೆಕಾಯಿಯನ್ನು ದಾಖಲೆ ಬೆಲೆಕೊಟ್ಟು ಕೊಂಡುಕೊಳ್ಳಲು ಯಾರಾದರೂ ಮುಂದೆ ಬರುವವರಿಗಾಗಿ ಆತ ಕಾಯುತ್ತಿದ್ದಾನೆ. ಸೌತೇಕಾಯಿ ಬೇಕೇ ಸೌತೆಕಾಯಿ??

 

ಅರ್ಶದ್ ಹುಸೇನ್ ಎಂ.ಹೆಚ್, ದುಬೈ. 

 

 

Rating
No votes yet

Comments