ಸ್ಪೆಷಲ್ ಗೊಜ್ಜವಲಕ್ಕಿ
ಅವಲಕ್ಕಿಯನ್ನು ತೊಳೆದು ಬಸಿದು ಹುಣಸೆ ರಸ, ರಸಮ್ ಪೌಡರ್, ಬೆಲ್ಲದ ತುರಿ ಸೇರಿಸಿ ಚೆನ್ನಾಗಿ ಕಲಕಿ ಅರ್ಧ ಗಂಟೆ ನೆನೆಯಲು ಬಿಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ - ಇಂಗಿನ ಒಗ್ಗರಣೆ ಮಾಡಿ.
ದಪ್ಪ ಅವಲಕ್ಕಿ ೨ ಕಪ್, ಹುಣಸೆ ರಸ - ಅರ್ಧ ಕಪ್, ಬೆಲ್ಲದ ತುರಿ - ೨ ಚಮಚ, ಕರಿಬೇವಿನ ಎಲೆಗಳು ೧೨, ರಸಮ್ ಪೌಡರ್ - ೩ ಚಮಚ, ಕಡಲೇ ಕಾಯಿ ಬೀಜ - ಕಾಲು ಕಪ್, ಎಣ್ಣೆ - ೩ ಚಮಚ, ಸಾಸಿವೆ - ೧ ಚಮಚ, ಇಂಗು - ಕಾಲು ಚಮಚ, ತೆಂಗಿನ ತುರಿ - ೩ ಚಮಚ, ರುಚಿಗೆ ತಕ್ಕಷ್ಟು ಉಪ್ಪು
ರಸಮ್ ಪೌಡರ್ ಮಾಡುವ ವಿಧಾನ: ಕೊಬ್ಬಂಬರಿ ಬೀಜ - ೨ ಕಪ್, ಒಣಮೆಣಸಿನ ಕಾಯಿ - ೧ ಕಪ್, ಕಾಳು ಮೆಣಸು ಕಾಲು ಕಪ್, ಜೀರಿಗೆ ಅರ್ಧ ಕಪ್, ಮೆಂತ್ಯೆ ೩ ಚಮಚ, ಸಾಸಿವೆ ೨ ಚಮಚ (ಮಸಾಲೆ ಸಾಮಾನುಗಳನ್ನು ಎಣ್ಣೆಯಲ್ಲಿ ಹುರಿದು ಹುಡಿ ಮಾಡಿ)
- Read more about ಸ್ಪೆಷಲ್ ಗೊಜ್ಜವಲಕ್ಕಿ
- Log in or register to post comments