ಎಂತ ಆಯ್ದು ಕೂಸೆ
ಎಂತ ಆಯ್ದು ಹೇಳಿ ಹೇಳ್ತಾ ಇಲ್ಲೆಯೊ ಎನ್ನ ಮುದ್ದು ಕೂಸೆ
- Read more about ಎಂತ ಆಯ್ದು ಕೂಸೆ
- Log in or register to post comments
ಎಂತ ಆಯ್ದು ಹೇಳಿ ಹೇಳ್ತಾ ಇಲ್ಲೆಯೊ ಎನ್ನ ಮುದ್ದು ಕೂಸೆ
ಬೆಟಗೇರಿ ಕೃಷ್ಣಶರ್ಮರ ಕಾವ್ಯನಾಮ-ಆನಂದಕಂದ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ೧೯೦೦ರ ಏಪ್ರಿಲ್ ೧೬ರಂದು ಜನಿಸಿದರು. ತಂದೆ ಶ್ರೀನಿವಾಸರಾಯರು; ತಾಯಿ ರಾಧಾಬಾಯಿ..
ಎಲ್ಲರ ಭವಿಷ್ಯವಾಣಿ ಸುಳ್ಳಾಗಿದೆ. ಮಾಧ್ಯಮಗಳ ಎಕ್ಸಿಟ್ ಪೋಲ್ ಗಳು ಠುಸ್ಸೆಂದಿವೆ. ಹರ್ಯಾಣದಲ್ಲಿ ಬಿಜೆಪಿ ಬಹುಮತ ಗಳಿಸಲು ಶಕ್ತವಾಗುವುದರೊಂದಿಗೆ ಸರಕಾರ ರಚನೆಯಲ್ಲಿ ಹ್ಯಾಟ್ರಿಕ್ ಸಾಧನೆಗೈದಿದೆ. ಆ ಮೂಲಕ ಆಡಳಿತ ವಿರೋಧಿ ಅಲೆ ತನ್ನನ್ನು ಬಾಧಿಸಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಇದು ಬಿಜೆಪಿಯ ಅಮೋಘ ಸಾಧನೆ ಎಂಬುದರಲ್ಲಿ ಅನುಮಾನವಿಲ್ಲ.
ದರ್ಶನ್ ಜಾಮೀನು ಅರ್ಜಿಯ ವಾದ ಪ್ರತಿವಾದ ಮಂಡನೆಯ ನೇರ ಪ್ರಸಾರ ಮಾಡಬಹುದಾದ ಪರಿಣಾಮಗಳ ಹಿನ್ನೆಲೆಯಲ್ಲಿ ಅದನ್ನು ಸಾಂಕೇತಿಕವಾಗಿ, ಉದಾಹರಣೆಯಾಗಿ ತೆಗೆದುಕೊಂಡು ಆ ಬಗ್ಗೆ ಒಂದಷ್ಟು ಚಿಂತನೆ. ನ್ಯಾಯಾಲಯದ ಕಾರ್ಯಕಲಾಪಗಳನ್ನು ನೇರವಾಗಿ ಪ್ರಸಾರ ಮಾಡುತ್ತಿರುವುದರಿಂದ ಸಮಾಜದ ಸಾಮಾನ್ಯ ಜನರ ಮನಸ್ಥಿತಿಯ ಮೇಲೆ ಆಗುತ್ತಿರುವ ಪರಿಣಾಮಗಳನ್ನು ಸ್ವಲ್ಪ ಗಮನಿಸಬೇಕಾಗುತ್ತದೆ.
ಜೀವವಿಲ್ಲದ ಕಟ್ಟಡವೊಂದು ತಲೆ ಎತ್ತಿ ನಿಂತಿದೆ. ಇನ್ನೂ ಜೀವ ತುಂಬುವವರನ್ನ ನಿರೀಕ್ಷಿಸುತ್ತಿದೆ. ಆ ಮಗುವಂತಹ ಕಟ್ಟಡವೊಂದು ಇನ್ನೂ ಜೀವವಿಲ್ಲದೆ ಎಲ್ಲಾ ಶಕ್ತಿಯನ್ನ ತನ್ನೊಳಗೆ ತುಂಬಿಕೊಂಡು ಆತ್ಮ ಶಕ್ತಿ ನೀಡುವವರನ್ನ ಕಾಯುತ್ತಿದೆ. ಬಣ್ಣಗಳನ್ನು ಜೊತೆಗೆ ತರಗತಿಯೊಳಗೆ ಆಗತ್ಯವಾದದ್ದನ್ನ ತುಂಬಿಕೊಂಡು ಕಾಯುತ್ತಿದೆ.
ಖ್ಯಾತ ತತ್ವ ಶಾಸ್ತ್ರಜ್ಞ ಲಿಯೋ ಟಾಲ್ ಸ್ಟಾಯ್ ಜೊತೆ, ವೈವಾಹಿಕ ಜೀವನದ ಹೊಸ್ತಿಲಿನ ಒಂದು ದಿನ ಅವರ ಪತ್ನಿ ಸೊಫಿಯಾ ಮಾತನಾಡುತ್ತಾ, “ನಮಗೆ ಹುಟ್ಟುವ ಮಗುವಿಗೆ ನನ್ನ ರೂಪ ಮತ್ತು ನಿಮ್ಮ ಜಾಣ್ಮೆಯಿರಬೇಕಲ್ಲವೇ?” ಎಂದರಂತೆ. ಲಿಯೋ ಟಾಲ್ ಸ್ಟಾಯ್ ಅಷ್ಟೇ ಹಗುರವಾಗಿ ಗಹಗಹಿಸಿ ನುಗುತ್ತಾ, “ಒಂದೊಮ್ಮೆ ನನ್ನ ರೂಪ ಮತ್ತು ನಿನ್ನ ಜಾಣ್ಮೆಯನ್ನು ಭಗವಂತ ನಮ್ಮ ಮಗುವಿಗೆ ಅನುಗ್ರಹಿಸಿದರೆ....!” ಎಂದು ಹೇಳಿದರಂತೆ.
ಅತಿಯಾದ ಗೌರವ ಕೊಡಬಾರದು ತೆಗೆದುಕೊಳ್ಳಲೂ ಬಾರದು
ಸುಮಾರು ೨೫ ವರ್ಷಕ್ಕೆ ಹಿಂದೆ ಶಿವಮೊಗ್ಗ, ಭದ್ರಾವತಿ ಸುತ್ತಮುತ್ತ ತಾಳೆ ಬೆಳೆಗೆ ಭಾರೀ ಭವಿಷ್ಯವಿದೆ ಎಂದು ಬೆಳೆ ಬೆಳೆದಿದ್ದ ರೈತರು ಕೊನೆಗೆ ಮರವನ್ನು ಜೆ ಸಿ ಬಿ ಮೂಲಕ ಕಿತ್ತು ಹಾಕಿದ್ದರು. ಕೆಲವರು ಉಳಿಸಿಕೊಂಡಿದ್ದರು. ಹಾಗೆಯೇ ಮೈಸೂರಿನ ಕೆಲವು ಪ್ರದೇಶಗಳಲ್ಲಿ, ಚಾಮರಾಜ ನಗರದ ಕೆಲವು ಪ್ರದೇಶಗಳಲ್ಲಿ ಸಹ ಬಹಳಷ್ಟು ಜನ ತಾಳೆ ಬೆಳೆ ಬೆಳೆಸಿದ್ದರು.
ಹೊಸ ಬಗೆಯ, ಹೊಸತನದ ಪುಸ್ತಕಗಳನ್ನು ಕನ್ನಡದ ಓದುಗರಿಗೆ ಪರಿಚಯಿಸುವ ಕಾಯಕವನ್ನಾಗಿ ಮಾಡಿಕೊಂಡ ಛಂದ ಪುಸ್ತಕ ಪ್ರಕಾಶನದವರು ‘ಸತ್ತವರ ಸೊಲ್ಲು' ಎಂಬ ನಕ್ಸಲ್ ನಾಡಿನ ಮರೀಚಿಕೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಅಶುತೋಷ್ ಭಾರದ್ವಾಜ್ ಎನ್ನುವ ಪತ್ರಕರ್ತ ಕಂಡ ನಕ್ಸಲ್ ಬದುಕಿನ ಅನಾವರಣವೇ ಈ ಕೃತಿ.
ದಸರಾ ಉದ್ಘಾಟನೆ ಸಂದರ್ಭದಲ್ಲಿ ಅದನ್ನು ಉದ್ಘಾಟಿಸಿದ ಖ್ಯಾತ ಸಾಹಿತಿ ಸನ್ಮಾನ್ಯ ಶ್ರೀ ಹಂ. ಪಾ. ನಾಗರಾಜಯ್ಯನವರು ಈಗಿನ ಸರ್ಕಾರ ಮತ್ತು ಮುಖ್ಯಮಂತ್ರಿಗಳ ಪರವಾಗಿ ಆ ಸಮಾರಂಭದಲ್ಲಿ ಮಾತನಾಡಿದ ಬಗ್ಗೆ ಒಂದಷ್ಟು ಟೀಕೆಗಳು, ಹಾಗೆಯೇ ದಸರಾ ಕವಿಗೋಷ್ಠಿಯ ಕವಿಗಳ ಆಯ್ಕೆಯಲ್ಲಿ ಸ್ವಜನ ಪಕ್ಷಪಾತ ಮತ್ತು ತಾರತಮ್ಯದ ಬಗ್ಗೆ ಒಂದಷ್ಟು ಚರ್ಚೆಗಳು ನಡೆಯುತ್ತಿವೆ. ಇದು ಹೊಸದೇನು ಅಲ್ಲ.