ಸ್ಟೇಟಸ್ ಕತೆಗಳು (ಭಾಗ ೧೨೭೨) - ಭಗವಂತ

ಸ್ಟೇಟಸ್ ಕತೆಗಳು (ಭಾಗ ೧೨೭೨) - ಭಗವಂತ

ಅವನು ಎತ್ತರಕ್ಕೇರಿದ ಕಾರಣ ನಾವೆಲ್ಲರೂ ಅವನ ದೃಷ್ಟಿಗೆ ಬಿದ್ದಿದ್ದೇವೆ. ಗದ್ದೆ, ಕಾಡುಗಳಿಂದಲೇ ತುಂಬಿದ್ದ ಆ ಊರಿಗೆ ಜನರ ಸಂಚಾರ ಬರಬೇಕಿತ್ತು. ಭಗವಂತನಿಗೆ ಆ ಊರಲ್ಲಿ ಜನರ‌ ನಡುವೆ ಬದಕಬೇಕೆನ್ನುವ ಆಸೆ. ಹಾಗಾಗಿ ಜನರನ್ನ ತನ್ನ ಬಳಿಗೆ ಕರೆಸಿಕೊಳ್ಳಲು ಆರಂಭ ಮಾಡಿದ. ಒಂದೊಂದು ವೃತ್ತಿಯ ಒಂದೊಂದು ಮನಸ್ಥಿತಿಯ ಎಲ್ಲರೂ ಒಟ್ಟುಗೂಡಿ ಬದುಕಬೇಕೆನ್ನುವ ಆಸೆ ಇರುವ ಜನರನ್ನು ಆ ಊರಿಗೆ ಕರೆಸಿಕೊಂಡ. ಜನ ಬಂದ್ರು ಯಾರು ಕೂಡ ಆ ದೇವರನ್ನ ಮಾತನಾಡಿಸಲಿಲ್ಲ ಗಮನಿಸಲೇ ಇಲ್ಲ. ಊರಲ್ಲಿ ಒಂದಷ್ಟು ಸಮಸ್ಯೆ ಆರಂಭವಾಯಿತು ಎತ್ತರದ ಜಾಗದಲ್ಲಿ ಕುಳಿತವನ್ನು ಬಳಿ ಯಾರೋ ಒಂದಿಬ್ಬರು ಕೈ ಮುಗಿದು ಪ್ರಾರ್ಥಿಸಿದರು ಸಮಸ್ಯೆ ಪರಿಹಾರ ಆದ ಸುದ್ದಿ ಊರಲ್ಲಿ ಹಬ್ಬಿತು. ಎಲ್ಲರೂ ಸೇರಿ ಅವನನ್ನ ಭಕ್ತಿಯಿಂದ ಪ್ರಾರ್ಥಿಸುವುದಕ್ಕೆ ಪ್ರಾರಂಭ ಮಾಡಿದರು. ಊರು ಗಟ್ಟಿಯಾಗುತ್ತಾ ಹೋಯಿತು. ಭಗವಂತ  ಎಲ್ಲವನ್ನು ಗಮನಿಸುವುದಕ್ಕೆ ಆರಂಭ ಮಾಡಿದ. ಪುಟ್ಟದಾಗಿದ್ದ ದೇವರ ಆ ವಾಸಸ್ಥಾನ ಸಣ್ಣ ವಿಶಾಲವಾದ ಪ್ರಾಂಗಣಕ್ಕೆ ತೆರಳಿತು. ಸುತ್ತಮುತ್ತ ಹಸಿರು ತುಂಬಿದ ಜಾಗದಲ್ಲಿ ಭಗವಂತ ಜನರ ದರ್ಶನಕ್ಕೆ ಕಾಯುತ್ತಿದ್ದ. ಜನ ಎಲ್ಲರೂ ಸೇರಿ ಕೈ ಹಿಡಿದು ಉತ್ಸವ ಮಾಡಿದ್ರು ಪೂಜೆ ಮಾಡುದ್ರು. ಸಮಸ್ಯೆಗಳನ್ನ ಪರಿಹರಿಸಿಕೊಂಡ್ರು ಗಟ್ಟಿಯಾಗಿ ನಿಂತು ಬಿಟ್ರು. ಊರಲ್ಲಿ ಜಗಳವಿಲ್ಲ ದ್ವೇಷವಿಲ್ಲ ಮೇಲುಕೀಳಿನ ಭೇದಭಾವವಿಲ್ಲ. ಎಲ್ಲರೂ ಒಂದಾಗಿ ಬದುಕುವುದಕ್ಕೆ ಆರಂಭ ಮಾಡಿದರು. ಭಗವಂತನಿಗೆ ಖುಷಿಯಾಯಿತು ಈಗ ಭಗವಂತ ತನ್ನ ಆಸೆಗಳನ್ನು ನೆರವೇರಿಸಿಕೊಂಡಿದ್ದ. ಇನ್ನೂ ಆ ಜಾಗದಲ್ಲಿ ಬದುಕುತ್ತಿರುವ ಮನುಷ್ಯರು ತಮ್ಮ ಕನಸುಗಳನ್ನು ನೆರವೇರಿಸಿಕೊಳ್ಳಬೇಕು. ಭಗವಂತ ಆಶೀರ್ವಾದ ಮಾಡಿದ್ದಾನೆ ಈಗಲೂ ಎತ್ತರದಲ್ಲಿ ನಿಂತು ಕಾಯುತ್ತಿದ್ದಾನೆ. ಆಂಜನೇಯನಾಗಿ ಜನರ ಕಷ್ಟಕಾರ್ಪಣ್ಯಗಳನ್ನು ಕಳೆದು ಎಲ್ಲರೂ ನಗುವಿನಿಂದ ಬದುಕುವುದಕ್ಕೆ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ