ಮೌನ ಪಯಣ
ಕವನ
ಮೌನವಾಯಿತು ಪಯಣವಿಂದು
ಸೋತುಹೋಗುತ ಮನವುಯಿಂದು
ತನುವಿನಾಳಕೆ ನೋವೆ ಕಾಣಲು
ಧರೆಗೆ ಕುಸಿಯಿತು ಜೀವವು
ಹುಟ್ಟು ಜೀವನ ಪಾಠವಲ್ಲವು
ಕಲಿಕೆ ಬಂಡಿಲಿ ಇಹುದುಯೆಲ್ಲವು
ಬದುಕ ಚೆಲುವಲಿ ಅರಳಿ ಸಾಗಲು
ಮುರಿಯ ಬಾರದು ಬಾಳ ಚಕ್ರವು
ತನ್ನ ತಪ್ಪನು ಮುಚ್ಚಿ ಮರೆಸುತ
ಇತರ ತಪ್ಪನು ಎತ್ತಿ ಹಿಡಿಯುತ
ಸಾಗುತಿರಲದು ಇಹುದೆ ಒಲುಮೆ
ಹೃದಯ ಭಾವನೆ ಸೋಲದೆ
ಕಲಿತು ಬೆಳೆವರು ಆಸ್ತಿ ಎನಿಪರು
ಕನಸು ಇರುತಲಿ ಬೆಳಗುತಿಹರು
ಬರಿದೆ ಬರೆಯುತ ಸಾಗುತಿಹರೆ
ತಿರುಳು ಇಲ್ಲದೆ ಬದುಕುತಿಹರೆ
ಮರೆಯಲಾರದ ಮಾತುಗಳಿಗೆ
ಮರೆಯ ಬಾರದ ಸ್ವಾರ್ಥಿಗಳಿಗೆ
ಮರೆತು ಹೋಗದ ದ್ವೇಷಿಗಳಿಗೆ
ಪಾಠ ಕಲಿಸದೆ ಹೋದೆನೆ ?!
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
