ಜೀವಾತ್ಮ ಪರಮಾತ್ಮ
ಕವನ
ನೀಯೆಲ್ಲಿ ಎಲ್ಲಿ ಎಲ್ಲಿರುವೆ
ಅಲ್ಲೆಲ್ಲ ಸೊಗಸು ಕಾಣುವೆ
ಮನದಲ್ಲಿ ಅಲ್ಲಿ ಸೇರಲು
ತನುವಲ್ಲಿ ಸುಖವು ತುಂಬಲು
ಬಾನಲ್ಲಿ ಹಕ್ಕಿ ಹಾರಿದೆ
ಹೃದಯದಲಿ ಒಲುಮೆ ಹರಡಿದೆ
ಭಾವನೆಯು ಪುಟಿದು ಹಾರಲು
ತುಟಿಯೊಂದು ನಗುವ ಬೀರಲು
ನೀರಂತೆ ಒಲುಮೆ ಹರಿದಿದೆ
ಹೂವಂತೆ ಅರಳಿ ನಲಿದಿದೆ
ಪನ್ನೀರ ನಡುವೆ ಮೀಯಲು
ತಣ್ಣೀರ ಸ್ನಾನ ಮಾಡಲು
ಸವಿಯಾಳವೆಲ್ಲ ಕಂಡಿದೆ
ಸಿಹಿತಿನಿಸಿನಂತೆ ಬಂದಿದೆ
ಜೀವನದಿ ಗುರಿಯು ಕಾಣಲು
ಜೀವಾತ್ಮ ದೂರ ಹೋಗಲು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
