ಸ್ಟೇಟಸ್ ಕತೆಗಳು (ಭಾಗ ೧೨೬೯) - ಮಾರಾಟ

ಸ್ಟೇಟಸ್ ಕತೆಗಳು (ಭಾಗ ೧೨೬೯) - ಮಾರಾಟ

ಹೌದು ಇಲ್ಲಿ ಮಾರಾಟವಾಗಲೇಬೇಕು. ತೆಗೆದುಕೊಳ್ಳುವವನಿಗೆ ಬೇಕಾದುದು ನಿನ್ನ ಬಳಿ ಇಲ್ಲವೆಂದಾದಾಗ ನೀನು ಅವನ ತೆಗೆದುಕೊಳ್ಳುವ ಪಟ್ಟಿಯಲ್ಲಿ ಇರುವುದಿಲ್ಲ. ಹಾಗಾಗಿ ನೀನು ಮಾರಾಟವಾಗದ ಸರಕಾಗಿ ಅಲ್ಲೇ ಉಳಿದು ಬಿಡ್ತೀಯ. ಅಥವಾ ಬೆಲೆ ಕಳೆದುಕೊಂಡು ಬಿಕರಿಯಾಗದೆ ವ್ಯರ್ಥವಾಗುತ್ತೀಯ.

ಬೇಡಿಕೆಗೆ ತಕ್ಕಂತೆ ನಿನ್ನೊಳಗೆ ಬದಲಾವಣೆಗಳನ್ನು ಮಾಡಿಕೊಂಡು ಹೆಚ್ಚು ಹೆಚ್ಚು ಜನ ನಿನ್ನನ್ನೇ ಕೇಳಿ ಪಡೆದುಕೊಳ್ಳುವ  ರೀತಿಯಲ್ಲಿ ನೀನು ಮಾರಾಟವಾಗಬೇಕು. ಹಾಗೆ ಮಾರಾಟವಾಗುವಾಗ  ನಿನ್ನದು ಒಂದಷ್ಟು ಮೌಲ್ಯವನ್ನು ಉಳಿಸಿಕೊಂಡುಬಿಡಬೇಕು. ನಿನ್ನನ್ನ ಪೂರ್ತಿಯಾಗಿ ಪಡೆದುಕೊಳ್ಳುವ ಅವನಿಗೆ ಜೀತದಾಳಾಗಿ ಬಿಟ್ಟರೆ ಮುಂದೊಂದು ದಿನ ನೀನು ಮೌಲ್ಯ ಕಳೆದುಕೊಂಡು ಎಲ್ಲೂ ಮಾರಾಟವಾಗದ ಸ್ಥಿತಿಗೆ ತಲುಪ್ತಿಯಾ. ಹಾಗಾಗಿ ನಿನ್ನ ಮಾರಾಟಕ್ಕೆ ತಕ್ಕದಾಗ ಕೌಶಲ್ಯಗಳನ್ನು ಅಳವಡಿಸಿಕೊಂಡು ಸಿದ್ಧವಾಗಿರು. ಬೆಲೆ ಖಂಡಿತಾ ಸಿಗ್ತದೆ ಖಂಡಿತ ನೀನು ಮಾರಾಟವಾಗ್ತೀಯಾ, ಕಾಯಬೇಕು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ