ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬೂದಿಯಾಗುವವರು!!!

ಸಖೀ,
ಕಂಡಿರಬಹುದು
ನೂರಾರು ಬಗೆಯ
ನಗುವ ಹೂಗಳನು ನೀನು;
ಆದರೆ,
ಆ ನಗೆಯ ಹಿಂದಡಗಿರುವ
ನೋವ ನೀ ಅರಿತಿರುವೆಯೇನು?

ಅವುಗಳೊಳಗೂ ಇವೆ ಬಯಕೆಗಳು,
ಅಸಹಾಯಕತೆಯಿಂದಾಗಿ
ಸುಡುತ್ತಿರುವ ಬೇಗೆಗಳು;

ದೇಗುಲದಿ ಹರಿಯ ಪಾದ
ಸೇರಿ ಮುಕ್ತರೆನಿಸಿಕೊಂಬ
ಬಯಕೆಗಳಿರುವಂತೆಯೇ,
ಮುತ್ತೈದೆಯರ ಮುಡಿಯೇರಿ
ಹೆಮ್ಮೆ ಪಡಬೇಕೆಂಬ
ಬಯಕೆಗಳೂ ಇವೆ.

ಆದರೆ,

ನಲ್ಲೆ ಎಂದಾಗ

ನಲ್ಲೆ ಎಂದಾಗಲೆಲ್ಲ
ನಗುವೆ ಗಲ್ಲ ಅರಳಿಸಿ
ಮಲ್ಲಿಗೆ ಮೊಗ್ಗುಗಳ
ಮೇಲೆ ಹಾಲಿನ
ಮಳೆ ಸುರಿದಂತೆ ||
ಮಾಗಿದ ಬಾನಿನ ಕಿರಣವು
ಹೊನ್ನಿನ ಚಿತ್ತಾರ ನೈದಂತೆ ||
ತೊರೆಯಾಗಿ ಬಾ ಬಳಿಗೆ
ಮಳೆಯಾಗಿ ಬಾ ಇಳೆಗೆ
ಮನಕ್ಕೆ ತಂಪೇರೆಯುವ
ತಂಗಾಳಿಯಾಗಿ ಬಾ ನನ್ನ ಬಾಳಿಗೆ||

ಅದೃಷ್ಟವಶಾತ್ ತಪ್ಪಿದ ದುರಂತ!!!

ಮಾರತ್ತಹಳ್ಳಿಯಲ್ಲಿ ಹೊರವರ್ತುಲ ರಸ್ತೆಯಲ್ಲಿರುವ ಇನೋವೇಟಿವ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಕಳೆದ ರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಆಗಿದೆ.
ಎಲ್ಲಾ ದೇಖಾವೆಗಳೂ ಮುಗಿದ ಮೇಲೆ ತಡ ರಾತ್ರಿ ೨ ಘಂಟೆಯ ನಂತರ ಈ ದುರಂತ ಸಂಭವಿಸಿದೆಯಾದ್ದರಿಂದ ಅಪಾರ ಜೀವಹಾನಿಯಾಗುವುದು ತಪ್ಪಿದಂತಾಗಿದೆ.

ಮಾವ ಸತ್ತಾಗ ಬಿಕ್ಕಿ ಬಿಕ್ಕಿ ಅಳುವ ಸೊಸೆಯರು!

ಮೊನ್ನೆ ನನ್ನ ಸ್ನೇಹಿತ ಕಿಟ್ಟಿಯ ತಂದೆ ವಿಧಿವಶವಾದರು. ಆ ತಂದೆಗೆ ಮೂರು  ಜನ ಗಂಡುಮಕ್ಕಳು. ಒಬ್ಬಳು ಹೆಣ್ಣುಮಗಳು. ಕಿಟ್ಟಿಯ ಅಣ್ಣಂದಿರು ತುಂಬಾ ಚೆನ್ನಾಗಿ ಬದುಕಿದ್ದಾರೆ. ಒಬ್ಬ ದಾವಣಗೆರೆಯಲ್ಲಿ ಡಾಕ್ಟರ್. ಮತ್ತೊಬ್ಬ ಬೆಂಗಳೂರಿನಲ್ಲಿ ಒಂದು ಕಂಪನಿಯಲ್ಲಿ ಮ್ಯಾನೇಜರ್.ವಯಸ್ಸಾದ ಕಾಲದಲ್ಲಿ ಪಾಪ ಆ ವೃದ್ಧರು ತಮ್ಮ ಮೂರನೆಯ ಮಗ ಕಿಟ್ಟಿಯ

’ ೨೬ ನೇ ನ್ಯಾಶನಲ್ ಕನ್ನಡ ಕಾನ್ಫರೆನ್ಸ್ ನ ಪ್ರಶಸ್ತಿ, , ಮುಂಬೈ ನ ಡೊಂಬಿವಲಿಯಲ್ಲಿರುವ, ’ ಮೈಸೂರ್ ಸಂಗೀತ ವಿದ್ಯಾಲಯ’ ಕ್ಕೆ !

(26th National Kannada Conference at New-Delhi), ಇತ್ತೀಚೆಗೆ ಹೊಸ- ದೆಹಲಿಯಲ್ಲಿ ' ದೆಹಲಿ ಕನ್ನಡಿಗ' ಪತ್ರಿಕೆ ಏರ್ಪಡಿಸಿದ್ದ, ’’೨೬ ನೆಯ ರಾಷ್ಟ್ರೀಯ ಕನ್ನಡ ಸಮ್ಮೇಳನ,’ ನಡೆದಾಗ, ಮುಂಬೈ ನ " ಉಪನಗರಿಯಲ್ಲಿರುವ ಡೊಂಬವಲಿಯ ಮೈಸೂರು ಸಂಗೀತ ವಿದ್ಯಾಲಯ " ಕ್ಕೆ "ಅತ್ಯುತ್ತಮ ಸಂಗೀತ ಶಿಕ್ಷಣ ಸಂಸ್ಥೆ " ಯೆಂಬ ಪ್ರಶಸ್ತಿಯನ್ನು ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ, ಪ್ರದಾನ ಮಾಡಲಾಯಿತು !

ನೋಡು ಬಾ ನಮ್ಮೂರ!...............೫

ಚಿತ್ರದಲ್ಲಿ ಕಾಣುತ್ತಿರುವುದು "ಚೆರಿ" ಹಣ್ಣುಗಳು ಗೊಂಚಲು, ಗೊಂಚಲಾಗಿ ಮರದಮೇಲೆ ಬಿಟ್ಟಿರುವುದು. ಈಗ ಕೀಳಲು (ಹಾರ್ವೆಸ್ಟ್ ಮಾಡಲು) ರೆಡಿಯಾಗಿದೆ. ಸಲಿನಾಸ್ ಯಿಂದ ಉತ್ತರಕ್ಕಿರುವ (೩೫ - ಮೈಲಿಗಳು) "ಗಿಲ್ರಾಯ್" ಎನ್ನುವ ಊರಲ್ಲಿ "ಚೆರಿ" ಯನ್ನು ತುಂಬಾ ಬೆಳೆಯುತ್ತಾರೆ. ಚೆರಿ ತೋಟದಲ್ಲಿ ಎಲ್ಲ ಮರಗಳೂ ಹೂವು ಬಿಟ್ಟಾಗ ನೋಡಲು ಸುಂದರವಾದ ದೃಶ್ಯ.

ಏನಾಯ್ತು

ಏನಾಯ್ತು
ಹೃದಯಕ್ಕೆ ಏನಾಗಿದೆ ಅವನೇ ಬಲ್ಲ
ಇದೇಕೆ ತಣ್ಣಗಾಗಿದೆ ಅವನೇ ಬಲ್ಲ
ಹೃದಯವು ಕೊಟ್ಟೆ ಮನಸ್ಸು ಕೊಟ್ಟೆ
ಹೇಗೆ ಕಾಣದಾಯ್ತೋ ಅವನೇ ಬಲ್ಲ,.

ನನ್ನ ಹೃದಯ ಕಾಣದಾಗಿದೆ ನಿನಗೆ ಗೊತ್ತು
ನನ್ನ ಪ್ರೀತಿ ಕಾಣದಾಗಿದೆ ನಿನಗೆ ಗೊತ್ತು
ನನ್ನ ಕಣ್ಣು ಕಾಣದಾಗಿದೆ ನಿನಗೆ ಗೊತ್ತು
ನಿನ್ನ ಮನಸ್ಸು ಕಲ್ಲಾಗಿದೆ ' ನನಗೆ ' ಮಾತ್ರ ಗೊತ್ತು.,

ವೃತ್ತಿ/ಕೆಲಸ/ಕಾರ್ಯ, ಕಾಲೇಜಿಂದ ಕ್ಯೂಬಿಗೆ, ವೃತ್ತಿಯ ಮಹತ್ವದ ಪರಿಚಯ ಮತ್ತಿತರ ವಿಚಾರಗಳು

ನಾವೆಲ್ರೂ ಕೆಲ್ಸ ಮಾಡ್ತೀವಿ. ಬೆಳ್ಗೆ ಎದ್ದು ರೆಡಿ ಆಗಿ ಆಫೀಸಿಗೆ ಹೋಗ್ತೀವಿ. ಹತ್ಹನ್ನೊಂದ್ಗಂಟೆ ಆಫೀಸಲ್ಲಿ ಕಳೀತೀವಿ. ಎರ್ಡ್ಮೂರ್ಟೀ/ಕಾಫೀ ಬ್ರೇಕು, ಒಂದ್ಲಂಚ್ಬ್ರೇಕು ಅಂತ ಕಳ್ದು ಕೆಲ್ಸ ಮುಗೀತು ಅಂತ ಬರ್ತೀವಿ ವಾಪಸ್ಸು ಮನೆಗೆ. ಆದ್ರೆ ದಿನಾ ಮನೇಗೆ ಬರೋ ಮುಂಚೆ ದಿನ್ವಿಡೀ ದುಡಿದಿದ್ದರ ಪ್ರತಿಫಲ (tangible end result, at least in part) ಕಾಣ್ತೀವಾ?

ಚೆಂದದ ಹೂ...

ಓಕೆ, ಓದುವವರಿಗೆ ಮುನ್ನೆಚ್ಚರಿಕೆ: ನನಗೆ ಕವನ ಬರೆಯೋಕೆ ಬರದು. ಸುಮ್ಮನೆ ಹಾಗೇ ಏನೋ ಬರೆದದ್ದು. ನಿಮ್ಮೆಲ್ಲರ ಪ್ರಾಮಾಣಿಕ ಅನಿಸಿಕೆ ಖಂಡಿತ ಬರೆದು ತಿಳಿಸಬಹುದು!

ಚೆಂದದ ಹೂ
ಬಾಡದಿರು ನೀ
ಸೊರಗದಿರು
ಮುಳುಗದಿರು
ಭಾವನೆಯಲಿ. ಆ ಮುದ್ದಿನ
ಮಾಸಿದ ನಗು
ಕಳೆದು ಹೋದಂತೆ
ಕಳೆಯದಿರದು ಚೆಲುವು;
ಕಳೆದು ಹೋಗುವೆ ನೀನೆ
ಮನ ತೊಯ್ದು
ಬಣ್ಣದಾಟದಿ.