ವೃತ್ತಿ/ಕೆಲಸ/ಕಾರ್ಯ, ಕಾಲೇಜಿಂದ ಕ್ಯೂಬಿಗೆ, ವೃತ್ತಿಯ ಮಹತ್ವದ ಪರಿಚಯ ಮತ್ತಿತರ ವಿಚಾರಗಳು

ವೃತ್ತಿ/ಕೆಲಸ/ಕಾರ್ಯ, ಕಾಲೇಜಿಂದ ಕ್ಯೂಬಿಗೆ, ವೃತ್ತಿಯ ಮಹತ್ವದ ಪರಿಚಯ ಮತ್ತಿತರ ವಿಚಾರಗಳು

ನಾವೆಲ್ರೂ ಕೆಲ್ಸ ಮಾಡ್ತೀವಿ. ಬೆಳ್ಗೆ ಎದ್ದು ರೆಡಿ ಆಗಿ ಆಫೀಸಿಗೆ ಹೋಗ್ತೀವಿ. ಹತ್ಹನ್ನೊಂದ್ಗಂಟೆ ಆಫೀಸಲ್ಲಿ ಕಳೀತೀವಿ. ಎರ್ಡ್ಮೂರ್ಟೀ/ಕಾಫೀ ಬ್ರೇಕು, ಒಂದ್ಲಂಚ್ಬ್ರೇಕು ಅಂತ ಕಳ್ದು ಕೆಲ್ಸ ಮುಗೀತು ಅಂತ ಬರ್ತೀವಿ ವಾಪಸ್ಸು ಮನೆಗೆ. ಆದ್ರೆ ದಿನಾ ಮನೇಗೆ ಬರೋ ಮುಂಚೆ ದಿನ್ವಿಡೀ ದುಡಿದಿದ್ದರ ಪ್ರತಿಫಲ (tangible end result, at least in part) ಕಾಣ್ತೀವಾ? ಒಂದು ರೀತಿಯ surreal ವ್ಯವಸ್ಥೆಯ ಚೌಕಟ್ಟಿನಲ್ಲಿ ಬೆಳೆದ ನಮಗೆ ಈ ವಿಚಾರಗಳು ಅಸ್ಪಷ್ಟ/ರಗ್ಳೆ /ಅಸಮಂಜಸ ಅನ್ನಿಸಬಹುದು.

ಇಂದಿನ ಬಿಳೀಕಾಲರ್ ಕೆಲಸದ ದಿನಗಳಲ್ಲಿ ಇದೊಂದು ಯೋಚಿಸುವ ವಿಚಾರ. ಅಮೇರಿಕದಲ್ಲೀಗ ಹೊರಗುತ್ತಿಗೆ ವಿರುದ್ಧ ಇರುವ ಅಲೆಯ ಹಿನ್ನೆಲೆಯಲ್ಲಿ ಬಹಳಷ್ಟು ಜನ ವೃತ್ತಿಯ ಭದ್ರತೆಯ ಬಗ್ಗೆ ಮಾತಾಡುವುದನ್ನು ಎಲ್ರೂ ನೋಡಿರ್ಬೋದು. ಅಲ್ಲಿ ಇಂದಾಗುವುದು ನಾಳೆ ಇಲ್ಲೂ ಆಗುತ್ತೆ. (ಚೀಪಾಗ್ಸಿಗತ್ತೇಂತಾ ಇಲ್ಲಿದನ್ಬಿಟ್ಟು ಚೈನಾ ಸೆಟ್ಟನ್ನ ಜನ ತಗಳಲ್ವೇ, ಅದು ಅಷ್ಟೇ ಸಹಜ. ಇದು ಬಿಡಿ, ಬರ್ಯಕ್ಹೊರ್ಟ್ರೆ ಭಾಳ ದೊಡ್ವಿಚಾರ. ಇದ್ಬಿಟ್ಟು ಮುಕ್ಯವಾದ್ವಿಷ್ಯಕ್ಬರ್ತೀನಿ)

ಕೆಲಸದ ಗುಣ (ಹಾಗೂ ಮಹತ್ವದ) ಬಗ್ಗೆ ಚರ್ಚೆ ಅಷ್ಟಾಗಿ ನಡೆದಿರುವುದು ನನಗೆಲ್ಲೂ ಕಂಡು ಬಂದಿಲ್ಲ. (ಇದ್ಬದ್ಕಡೆ ಎಲ್ಲಾ ಕೆಲಸ, ಸಂಬಳ, ರೂಲ್ಸು-ರೆಗ್ಯುಲೇಷನ್ಗಳ ಬಗ್ಗೆ ಆಗತ್ತೇ ಹೊರ್ತು ಇವ್ಗಳ್ಬಗ್ಗೆ ಅಲ್ಲ). ಒಬ್ಬ ವ್ಯಕ್ತಿ ಯಾವುದರಲ್ಲಿ ತನಗೆ ಆಸಕ್ತಿ ಇರತ್ತೋ, ಹಾಗೂ ಆ ಆಸಕ್ತಿಯ ಪ್ರೇರಣೆಯಿಂದ ಆ ವಿಷಯದ ಬಗೆಗಿನ ಅಧ್ಯಯನ ಮಾಡಿ, ಅದರಲ್ಲಿ ಉನ್ನತ ಮಟ್ಟದ ಸ್ವಕ್ಷಮತೆಯನ್ನು ಪಡೆದವನು ಖಂಡಿತವಾಗಿಯೂ ಆ ವೃತ್ತಿಯಲ್ಲಿ ಯಶಸ್ವಿಯಾಗುತ್ತಾನೆ. ಹಾಗೆಯೇ ಯಶಸ್ವಿಯಾಗಲು ಒಬ್ಬ ವ್ಯಕ್ತಿ ತನ್ನ ಕ್ಷಮತೆ/ಆಸಕ್ತಿ ನೋಡಿಯೇ ತಾನೇನು ಕೆಲಸ ಮಾಡಬೇಕು ಎಂಬುದನ್ನು ತೀರ್ಮಾನಿಸಬೇಕು. ಈಗಿನ ಶಿಕ್ಷಣಾ ವಿಧಾನ (ಹಾಗೂ ಮುಖ್ಯವಾಗಿ ನಮ್ಮ ಸಮಾಜ) ಇದಕ್ಕೆ ಖಾತ್ರಿಯನ್ನು ನೀಡುವುದಿಲ್ಲ.

ಮ್ಯಾತ್ಯೂ ಕ್ರಾಫೋರ್ಡ್ ಎನ್ನುವ ಒಬ್ಬನು ರಾಜಕೀಯ ಸಿದ್ಧಾಂತದಲ್ಲಿ ಉನ್ನತ ವ್ಯಾಸಂಗ (ನಾವೆಲ್ಲ ಅಂತೀವಲ್ಲ ಡಾಕ್ಟ್ರೇಟು, ಅದೇರಿ ಪೀಎಚ್ಡೀ) ಮಾಡಿ ಸದ್ಯಕ್ಕೆ ತನ್ನದೇ ಬೈಕ್ರಿಪೇರಿ ಅಂಗ್ಡಿ ಇಟ್ಕೊಂಡಿದಾನೆ. 'ಕೈಯಿಂದ ಸಾಧಿಸುವ ಕೆಲಸದ ವಿಚಾರ'ದ ಬಗ್ಗೆ ಇದೇ ಮ್ಯಾತ್ಯೂ ಕ್ರಾಫರ್ಡ್ ನ್ಯೂಯಾರ್ಕ್ ಟೈಂಸ್ನಲ್ಲಿ ಬರೆದ ಬಹಳ ಒಳ್ಳೇ ಲೇಖನದ ವಿಳಾಸವನ್ನ ನಮ್ಮ ಗುರುಗಳೊಬ್ಬರು ಮೊನ್ನೆ ಹಂಚಿಕೊಂಡಿದ್ದರು. ಸಮಯ ಮಾಡಿಕೊಂಡು ದಯವಿಟ್ಟು ನೋಡಿ, ಈಗಿನ ದಿನಗಳಲ್ಲಿ ಅನ್ವಯವಾಗುವ ಬಹಳಷ್ಟು ವಿಷಯಗಳ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದಾರೆ.

ತಮಿಚ್ಛೆಯ ವಿರುದ್ಧವಾಗಿಯೂ ಹಲವರು ಮನೆಯಿಂದ ಸ್ಕೂಲಿಗೆ->ಸ್ಕೂಲಿಂದ ಕಾಲೇಜಿಗೆ->ಕಾಲೇಜಿಂದ ಕ್ಯೂಬಿಗೆ ಪ್ರಯಾಣ ಮಾಡುತ್ತಾರೆ; ತಮಗಿಲ್ಲದಿರುವ ಅನುಭವ/ಕ್ಷಮತೆಗಳನ್ನೇ ಅಪೇಕ್ಷಿಸುವ ಕೆಲಸಗಳನ್ನು ಸೇರಿ ಕೊರಗುತ್ತಾರೆ. ಇದರ ವಿಚಾರವಾಗಿಯೂ ಮೇಲೆ ಲಿಂಕಿಸಿರುವ ಲೇಖನದಲ್ಲಿ ಇದೆ. ಒಮ್ಮೆ ನೋಡಿ.

/* ಬರೀಬೇಕಂತಿರೋ ವಿಚಾರವೆಲ್ಲಾ ಸರಿಯಾಗಿ ಬರೆಯಲಾಗುತ್ತಿಲ್ಲ, ಸದ್ಯಕ್ಕಿರ್ಲಿ. */

PS: ನಮ್ಗುರುಗಳು ಅಂತ ಹೇಳಿದೆನಲ್ಲ ಮೇಲೆ, ಅವರೂ ಒಬ್ಬ ಗಣಕ ಕಲಾವಿದರು. ಅವರ ಕೃತಿಯೊಂದು ಇದು, ಇಲ್ಲಿದೆ. ಬೇರೆ ಭಾರತೀಯ ಭಾಷೆಗಳ್ನ ಕನ್ನಡದಲ್ಲಿ ಬರೆದು ಓದಬೇಕೆಂದಲ್ಲಿ ಈ ಕೃತಿಯನ್ನು ಬಳಸಬಹುದು.

Rating
No votes yet

Comments