ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜೀವನಕ್ಕೆ ವಿವರಣೆ ಬೇಡ

ಜೀವನವೆನ್ನುವುದು ಸು೦ದರ, ಸುಮಧುರ. ಅದು ವರ್ಣಿಸಲಸದಳ. ಆದ್ದರಿ೦ದಲೇ ಜೀವನ ಸು೦ದರವೆನಿಸುತ್ತದೆ. ಒ೦ದು ವೇಳೆ ಎಲ್ಲದಕ್ಕೂ ವಿವರಣೆಯೆನ್ನುವುದು ಇದ್ದಿದ್ದರೆ ಜೀವನವೆ೦ಬುದು ಒ೦ದು ದುರ೦ತಮಯ ವಿಷಯವಾಗುತ್ತಿತ್ತು.

ಹರಿದಾಸ.ಇನ್ ನಲ್ಲಿ ಈಗ ದಾಸರ ಏಳುನೂರು ಹಾಡುಗಳು

ಹರಿದಾಸ.ಇನ್ ( http://haridasa.in ) ದಾಸಸಾಹಿತ್ಯ ಸಂಬಂಧ ಪಟ್ಟ ’ಸಂಪದ’ ಇನ್ನೊಂದು ತಾಣ ; ನಿಮಗೆ ಗೊತ್ತಿದೆಯೇ ?
ಈಗ ಸದ್ಯ ಅಲ್ಲಿ ಪುರಂದರದಾಸ ಸಾಹಿತ್ಯ ಏ/ಸೇ/ಪೇರಿಸುತ್ತಿದ್ದೀನಿ .

ರಾಮಕೃಷ್ಣ ಜಯಂತಿ!!!

ಇವತ್ತಿಗೆ--ಸುಮಾರು ೧೭೩ ವರ್ಷಗಳ ಹಿಂದೆ "ಭಾರತದಲ್ಲಿ ಆದ್ಯಾತ್ಮಿಕ (ಸ್ಸ್ಪಿರುಚುಯಲ್) ವಿಷಯದ ಕುರಿತು ಜ್ಞಾನೋದಯ ಜನಸಾಮಾನ್ಯರಲ್ಲಿ ಹುಟ್ಟಿಸಿದ್ದು " ರಾಮಕೃಷ್ಣರ ತತ್ವ ಪ್ರಭಾವದಿಂದ--ಈ ದಿನ ರಾಮಕೃಷ್ಣ ಜಯಂತಿ ಎಂದು ಆಚರಿಸಲ್ಪಡುತ್ತಾ ಬಂದಿದೆ.

ಮಚ್ಛಾ...ಎನ್ನಲು ....??

ಮೈಕ್ರೊಪ್ರೊಸೆಸರ್ ಲ್ಯಾಬ್‍ನಲ್ಲಿ ನನ್ನ ಸಹಪಾಠಿ ೮ ಬಿಟ್ ನ ಬದಲು ೪ ಬಿಟ್ ನ ದತ್ತಾಂಶ ನೀಡಿದಳು. ಪ್ರೊಸೆಸರ್ ತಪ್ಪು ಉತ್ತರ ತೋರಿಸಿತು. "ಓಹ್! ಶಿಟ್!" ಎಂದಳು.

"ಏನು ಹಾಗೆಂದರೆ ?" ಎಂದೆ.

ಮುಖ ಕೆಂಪಾಗಿ ಹೋಯಿತು ಅವಳದು.

"ಗೊತ್ತು" ಎಂದಳು

" ಎನು ಗೊತ್ತು? " ಎಂದೆ.

"ಶಿಟ್ ಎಂದರೇನು ಅಂತ ಗೊತ್ತು"

"ನನಗೆ ಗೊತಿಲ್ಲ ಹೇಳು"

"ಅದು ಹೇಳೋಕಾಗಲ್ಲ"

"ಅಂಥ ಕೆಟ್ಟ ಪದಾನ ಅದು?"

ಇದೂ ಮುಗಿಯುತ್ತೆ

ಸೋಲೆಂಬುದು ಪದೇ ಪದೇ ಕಂಗೆಡಿಸತೊಡಗಿದಾಗ ಕುಚೇಲ ಕುಗ್ಗಿ ಹೋಗಿದ್ದ. ಅಪ್ಪ ಅಮ್ಮ, ಶಿಕ್ಷಕರು, ಗೆಳೆಯರ ಮೂದಲಿಕೆಯ ದಾಳಿಗೆ ಈಡಾಗಿಯೂ ಅಳಿದುಳಿದ ಆತನ ಆತ್ಮವಿಶ್ವಾಸ ಸರ್ಕಾರಿ ಇಂಜಿನಿಯರುಗಳು ಕಟ್ಟಿದ ಸೇತುವೆಯ ಹಾಗೆ ಕುಸಿದು ಬೀಳತೊಡಗಿತ್ತು. ಜೀವನದಲ್ಲಿ ಉತ್ಸಾಹವೇ ಇಲ್ಲವಾಗಿ ದುಃಖದ ಸಾಗರದಲ್ಲಿ ಬಿದ್ದಂತೆ ಭಾಸವಾಗುತ್ತಿತ್ತು. ಇನ್ನಷ್ಟು ದಿನ ಇದೇ ಮನಸ್ಥಿತಿಯಲ್ಲಿದ್ದರೆ ಒಂದೋ ಹುಚ್ಚು ಹಿಡಿಯಬಹುದು ಇಲ್ಲವೇ ತನ್ನ ಕಣ್ಣೀರಿನ ಸುನಾಮಿಗೆ ಇಡೀ ಜಗತ್ತೇ ಬಲಿಯಾಗಬಹುದು ಅನ್ನಿಸಿದ್ದರಿಂದ ಕುಚೇಲ ತನ್ನ ಜಗತ್ತೇ ಆಗಿದ್ದ ನಾಲ್ಕು ಗೋಡೆಗಳ ಪುಟ್ಟ ಕೋಣೆಯಿಂದ ಹೊರಬಂದ. ದೇಶದಲ್ಲೇ ಖ್ಯಾತಿಯನ್ನು ಗಳಿಸಿದ್ದ ಯಶಸ್ಸಿನ ರಹಸ್ಯ ಬೋಧಿಸುವ ಗುರು, ವ್ಯಕ್ತಿತ್ವ ವಿಕಸನದ ಪಿತಾಮಹ, ಕತ್ತೆಯನ್ನು ಕುದುರೆ ಮಾಡುವ ಮಾಂತ್ರಿಕ ಮಂಡಿಯೂರಿ ರವೀಂದ್ರನಾಥರ ಬಳಿಗೆ ಹೋದ. ತಿಂಗಳ ಸಂಬಳದ ಅರ್ಧ ಭಾಗವನ್ನು ಮರೆತು ಅಪಾಯಿಂಟ್ ಮೆಂಟು ಪಡೆದು ಅವರ ಕೋಣೆಯೊಳಗೆ ಹೋದ.

ಮಂಡಿಯೂರಿ ರವೀಂದ್ರನಾಥರು ಆಪ್ತ ಸಮಾಲೋಚನೆಯಲ್ಲಿ ಭಾರಿ ಪರಿಣಿತಿಯನ್ನು ಸಾಧಿಸಿದ್ದರು. ಮನುಷ್ಯನ ಮನಸ್ಸನ್ನು ಅವರು ಉಡುಪಿ ಹೋಟೆಲಿನ ಮೆನು ಓದಿದಷ್ಟೇ ಸರಾಗವಾಗಿ ಓದುತ್ತಾರೆ ಎಂಬ ಮಾತು ಜನಜನಿತವಾಗಿತ್ತು. ಅವರ ಸ್ಪೂರ್ತಿದಾಯಕ ಮಾತುಗಳನ್ನು ಕೇಳುತ್ತಿದ್ದರೆ ಪ್ರತಿಯೊಬ್ಬ ಗಂಡಸೂ ಪುರುಷ ಸಿಂಹವಾಗುತ್ತಿದ್ದ, ಪ್ರತಿ ಹೆಣ್ಣು ಮಗಳೂ ಒನಕೆ ಓಬವ್ವಳಾಗುತ್ತಿದ್ದಳು ಎನ್ನುತ್ತಾರೆ ಜನರು. ಅವರ ಪ್ರತಿಯೊಂದು ಭಾಷಣಗಳು ಮನುಷ್ಯನ ಆಳದಲ್ಲಿರುವ ಶಕ್ತಿಯನ್ನು ಹೊರಗೆ ತೆಗೆಯುವ ಬೋರ್ ವೆಲ್ ಗಳು ಎನ್ನುತ್ತಾರೆ ಅವರ ಅಭಿಮಾನಿಗಳು. ನಿಜಕ್ಕೂ ಅವು ಬೋರ್ ವೆಲ್ ಗಳೇ ಎಂದು ಕುಹುಕವಾಡುವ ವಿಮರ್ಶಕರ ಮಾತಿಗೆ ಬೆಲೆ ಕೊಡುವುದು ಬೇಡ. ಇಂಥವರೆದುರು ನಮ್ಮ ಕುಚೇಲ ತಲೆ ಕೆಳಗೆ ಹಾಕಿ ಕುಳಿತಿದ್ದ.

ನಿನಗಾಗಿ ಕಾದಿರುವೆ

ಹುಚ್ಚೆದ್ದು ಕುಣಿಯುತಿರುವ
ಆಸೆಗಳನೆಲ್ಲ ತಡೆದಿಟ್ಟುಕೊಂಡು
ಹಾರಾಡುತಿರುವ ಮನಸನ್ನು
ತಹಬಂದಿಗೆ ತಂದುಕೊಂಡು
ತಪ್ಪದೆ ನೀ ಬಂದೆ ಬರುವೆಯೆಂದು
ಗೆಳೆಯ ನಾ ನಿನಗಾಗಿ ಕಾದಿರುವೆ ||

ನಿನ್ನಿಷ್ಟದ ಕೆಂಪು ದಿರಿಸನ್ನು ಧರಿಸಿ
ಕಾಳಜಿಯಿಂದ ಸಿಂಗರಿಸಿಕೊಂಡು
ಮನದಾಳದಲ್ಲಿ ನಿನ್ನ
ನೆನಪುಗಳನ್ನೇ ತುಂಬಿಕೊಂಡು
ನಿರಾಸೆಗೊಳಿಸದೆ ನೀ ಬಂದೆ ಬರುವೆಯೆಂದು

ಉತ್ಸುಕ ಒಬಾಮಾ

ಓ ಒಬಾಮಾ
ಆಗುವೆಯಾ ನೀ ಜಗಕೆ ರಾಮಾ?

ನಿನ್ನ ಬೆನ್ನೇರಿವುದು ಭರವಸೆಗಳ ಗಂಟು
ನೀನೇನು ಮಾಡುವೆಯೆಂದು ಯಾರಿಗೆ ಗೊತ್ತುಂಟು?

ಜಗಕೆ ಒಳಿತು ಮಾಡಲೆಂದೇ, ಸಿಕ್ಕಿದೆ ನಿನಗೆ ಗೆಲುವು
ಸಾಮಾನ್ಯರೆಡೆಗೆ ಹರಿದು ಬರಲಿ ನಿನ್ನ ಒಲವು

ನಿನ್ನ ಹಿಸ್ಟರಿ ಕೇಳೀಯೆ ನಾವಾದೆವು ಉತ್ಸುಕ
ಸದಾಶಯದಿಂದ ಕೂಡಿರಲಿ ನೀನು ಮಾಡುವ ಪ್ರತಿ ಕಾಯಕ

ಇತರ ದೇಶಗಳೊಂದಿಗೆ ಇರಲಿ ಸಾಮ’ರಷ್ಯಾ’