ಉತ್ಸುಕ ಒಬಾಮಾ

ಉತ್ಸುಕ ಒಬಾಮಾ

ಬರಹ

ಓ ಒಬಾಮಾ
ಆಗುವೆಯಾ ನೀ ಜಗಕೆ ರಾಮಾ?

ನಿನ್ನ ಬೆನ್ನೇರಿವುದು ಭರವಸೆಗಳ ಗಂಟು
ನೀನೇನು ಮಾಡುವೆಯೆಂದು ಯಾರಿಗೆ ಗೊತ್ತುಂಟು?

ಜಗಕೆ ಒಳಿತು ಮಾಡಲೆಂದೇ, ಸಿಕ್ಕಿದೆ ನಿನಗೆ ಗೆಲುವು
ಸಾಮಾನ್ಯರೆಡೆಗೆ ಹರಿದು ಬರಲಿ ನಿನ್ನ ಒಲವು

ನಿನ್ನ ಹಿಸ್ಟರಿ ಕೇಳೀಯೆ ನಾವಾದೆವು ಉತ್ಸುಕ
ಸದಾಶಯದಿಂದ ಕೂಡಿರಲಿ ನೀನು ಮಾಡುವ ಪ್ರತಿ ಕಾಯಕ

ಇತರ ದೇಶಗಳೊಂದಿಗೆ ಇರಲಿ ಸಾಮ’ರಷ್ಯಾ’
ತಿಳಿದಿರು,ನಿನ್ನ ಈಗಿನ ನಿರ್ಧಾರಗಳಲ್ಲೆ ನಿಂತಿಹಿವುದು ಜಗದ ಭವಿಷ್ಯ....