ವೇದೋಕ್ತ ಜೀವನಪಥ-೧

ವೇದೋಕ್ತ ಜೀವನಪಥ-೧

ಪಂಡಿತ ಸುಧಾಕರ ಚತುರ್ವೇದಿಯವರು ನಾಲ್ಕೂ ವೇದಗಳನ್ನು   ಇಪ್ಪತ್ತೈದು ವರ್ಷಗಳು ಸತತ ಅಭ್ಯಾಸ ಮಾಡಿ ಗಳಿಸಿದ ಹೆಸರು " ಚತುರ್ವೇದಿ". ಇಂದಿಗೂ ನಮ್ಮೊಡನೆ ಬದುಕಿರುವ ಅತ್ಯಂತ ಹಿರಿಯರು.ವೇದಗಳ ಬಗ್ಗೆ ಅವರು ಅತ್ಯಂತ ಸರಳವಾಗಿ ಬರೆಯುವ ಅವರ ಪುಸ್ತಕಗಳನ್ನು ಓದಿದಾಗ ನಾಲ್ಕು ಜನರಿಗೆ ತಿಳಿಸಬೇಕೆನಿಸದೆ ಇರದು. ಅದರಂತೆ ನಾನೀಗ ಓದುತ್ತಿರುವ "ವೇದೋಕ್ತ ಜೀವನಪಥ" ಪುಸ್ತಕದ ಕೆಲವು ಶ್ಲೋಕಗಳನ್ನು ಸಂಪದಿಗರಿಗಾಗಿ ಬರೆಯಲಿರುವೆನು. ಸಂಸ್ಕೃತ ಜ್ಞಾನವಿರದ ನಾನು ಪುಸ್ತಕದಲ್ಲಿ ಮುದ್ರಣದೋಷವಿದ್ದರೂ ಹಾಗೆಯೇ ಓದುವವನು. ಕನ್ನಡ ತಪ್ಪಾಗಿದ್ದರೆ ನನಗೆ ತಿಳಿಯಬಹುದು. ಸಂಸ್ಕೃತ ಪದಗಳು ತಪ್ಪಾಗಿ ಬರೆದರೆ ಹಂಸಾನಂದಿಯಂತವರು ದಯಮಾಡಿ ತಿದ್ದಿ. ಒಟ್ಟಿನಲ್ಲಿ ನಾನು ಓದಿದ್ದನ್ನು ನಿಮ್ಮಲ್ಲಿ ಹಂಚಿಕೊಳ್ಳುವೆ.

------------------------------------------------------------

- ೧-

-:ಮನೆಯಲ್ಲೇ ಸ್ವರ್ಗ:-

ಯತ್ರಾ  ಸುಹಾರ್ದ: ಸುಕೃತೋಮದಂತಿ

ವಿಹಾಯ ರೋಗಂ ತಂಟ: ಸ್ಟಾಯಾ:|

ಅಶ್ಲೋಣಾ ಅಂಗೈರಹ್ರುತಾ:

ಸ್ವರ್ಗೇ ತತ್ರ ಪಶ್ಯೇಮ ಪಿತರೌಚ ಪುತ್ರಾನ್||

[ಅಥರ್ವ-೬.೧೨೦.೩]

ಅರ್ಥ:

ಎಲ್ಲಿ ಉತ್ತಮ ಹೃ‍ದಯ ಉಳ್ಳವರೂ,ಉತ್ತಮ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರೂ, ತಮ್ಮ ಶರೀರವನ್ನು ರೋಗರಹಿತವನ್ನಾಗಿ ಇಟ್ಟುಕೊಂಡವರೂ,ಇರುತ್ತಾರೋ ಅಲ್ಲಿ ಅವರು ಆನಂದವನ್ನು ಅನುಭವಿಸುತ್ತಾರೆ.ಅವರು ಅಂಗವಿಕಲತೆಗಳಿಲ್ಲದವರಾಗಿ , ವಕ್ರತೆಗಳಿಲ್ಲದವರಾಗಿ,ತಂದೆ ತಾಯಿ ಹಾಗೂ ಮಕ್ಕಳು-ಮರಿಗಳೊಂದಿಗೆ ಸ್ವರ್ಗ ಸಮಾನ ಮನೆಯಲ್ಲಿರುವುದನ್ನು ನೋಡೋಣ. 

ಇದಕ್ಕೆ ವಿವರಣೆ ಬೇರೆ ಬೇಕೆ?

Rating
No votes yet

Comments