ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗುಲಾಬಿ ಕೊಟ್ಟಳು ಜಿಲೇಬಿ ( ಶಾಯರಿ )

ಚಾಲಾಕಿ ಚೆಂದುಳ್ಳಿ ಚೆಲುವೆ ಅವಳು ಒಂದು ಕೆಂಪು ಗುಲಾಬಿ
ಚಾಲಾಕಿ ಚೆಂದುಳ್ಳಿ ಚೆಲುವೆ ಅವಳು ಒಂದು ಕೆಂಪು ಗುಲಾಬಿ
ನನ್ನದೆಲ್ಲವ ದೋಚಿಕೊಂಡು ಕೊನೆಗೆ ಕೊಟ್ಟಳು ಕೈಗೆ ಒಂದು ಜಿಲೇಬಿ!!
- Vರ ( Venkatesha ರಂಗಯ್ಯ )

ವಿ. ಸೂ : ನೆನ್ನೆ Dil chahta hai ಫಿಲ್ಮ್ ನೋಡ್ತಾ ಇದ್ದೆ. ಅದರಲ್ಲಿ ಸೈಫ್ ಹೀಗೇನೆ ಮೋಸ ಹೋಗಿದ್ದು :-)

ಸಂಪದ ಮಿಲನದ ಸವಿ ನೆನಪು

ನಂಗೆ ಈಗ ಶಿವು ಮತ್ತೆ ರೂಪಕ್ಕನ ಮೇಲೆ ಸಿಟ್ಟು ಬರ್ತಿದೆ :( .ಸಂಪದ ಮಿಲನದ ಬಗ್ಗೆ ಏನಾದರು ಬರೆಯೋಣವೆಂದರೆ, ಇವರಿಬ್ಬರೂ ಆಗಲೇ ಎಲ್ಲ ಬರೆದಿದ್ದಾರೆ :) .ನಿನ್ನೆಯೇ ಬರೆಯೋಣವೆಂದರೆ ಆಗಲೇ ಇಲ್ಲ, ಅದಕ್ಕೆ ಇವತ್ತು ಬರೆಯುತಿದ್ದೇನೆ. ಇಲ್ಲೂ ಲೇಟ್ ಎಂಟ್ರಿ :)

ಲಿನಕ್ಸಾಯಣ - ೩೫ - ಉಬುಂಟು ೮.೧೦ ಇಂಟರ್ಪಿಡ್ ಐಬೆಕ್ಸ

 

 

ಉಬುಂಟು ೮.೧೦ ದ ೭ -೮ ಸಿ.ಡಿಗಳು ನನಗೆ ಕೆನಾನಿಕಲ್ ಕಂಪೆನಿಯಿಂದ ಬಂದಿವೆ. ಇದನ್ನ ಉಪಯೋಗಿಸಬೇಕೆಂದು ಕೊಂಡವರು ನನ್ನನ್ನ ಸಂಪರ್ಕಿಸಿ ಸಿ.ಡಿ ಗಳನ್ನ ಪಡೆದುಕೊಳ್ ಬಹುದು. 

ಕಾರ್ಪೋರೇಟ್ ಸಿನಿಮಾಗಳ ಭವಿಷ್ಯ - "ಚಾ೦ದನಿ ಚೌಕ್ ಟು ಚೈನಾ"

ನಿನ್ನೆ ಮು೦ಬಾಯಿಯಲ್ಲಿ ವಿಮಾನ ಹತ್ತುವುದಕ್ಕೆ ನಾಲ್ಕು ಘ೦ಟೆ ಸಮಯವಿತ್ತು. ಹತ್ತಿರವಿದ್ದ

ಕೃಷಿ ಸಾರ್ವಭೌಮತ್ವ

ಅಪ್ಪ ಹಾಗೂ ತಮ್ಮ ಟೇಪು ಹಿಡಿದು ಬಗ್ಗೇ ಬಿಟ್ಟರು. ನಾನು ಮನೆಯಿಂದಲೇ ತೆಗೆದು ಕೊಂಡು ಬಂದಿದ್ದ ಒಂದು ಬಳಿ ಕಾಗದದಲ್ಲಿ ಇವರಿಬ್ಬರು ಹೇಳಿದ ಅಳತೆಯನ್ನು ಅಡಿಗಳಲ್ಲಿ ದಾಖಲಿಸುತ್ತಾ ಹೋದೆ. ಅದು ಬೆಳಗ್ಗೆ 8 ಸುಮಾರಿಗೆ. ಅಯ್ಯೋ ಸದ್ಯ ನಮ್ಮನ್ನು ಯಾರು ನೋಡಲಿಲ್ಲ. ಏಕೆಂದ್ರೆ, ಆ ಹೊಲವಿದ್ದಿದ್ದು ಊರ ಹೊರಗಿನ ದಿಣ್ಣೆ ಮೇಲೆ. ಆ ಸಂದರ್ಭದಲ್ಲಿ ಊರಿನ ಯಾರಾದ್ರೂ ನೋಡಿದ್ರೂ ನಮ್ಮಗೆ ಧರ್ಮದೇಟುಗಳು ಖಂಡಿತ. ಯಾಕಪ್ಪಾ ಅಂದ್ರೆ, ಅದು ನಮ್ಮ ಜಮೀನಲ್ಲ. ಬೇರೆ ಯಾರೋ ಜಮೀನಲ್ಲಿ ಹೀಗೆ ಅಳತೆ ಮಾಡಿದ್ರೆ ಯಾರು ತಾನೆ ಬಿಟ್ಟಾರು ಬೆಳ್ಳಂ ಬೆಳ್ಳಗೆ..

ಹೌದು.. ಇದು ಜನವರಿಯ ಮೊದಲ ವಾರದ ಮಂಗಳವಾರ. ಅದು ನಮ್ಮ ಊರಿನಿಂದ 130 ಕಿಲೋ ಮೀಟರ್‍ ದೂರವಿರುವ ತುಮಕೂರು ಜಿಲ್ಲೆ ಹಾಗೂ ಚಿತ್ರದುರ್ಗಜಿಲ್ಲೆಗಳ ತುದಿಯ ವಾಣಿವಿಲಾಸ ಕಣಿವೆ ಬಳಿ. ಅಲ್ಲೊಂದಷ್ಟು ಭೂಮಿ ಖರೀದಿಸುವ ಆಸೆಯಿಂದ ಅಪ್ಪ ಕಳೆದ 4 ತಿಂಗಳಿನಿಂದ ತಡಕಾಡಿ ಸ್ವಲ್ಪ ಜಮೀನು ನೋಡಿ ಬಂದಿದ್ರು. ನಂತರ ನಾನು ತಮ್ಮ ಅಣ್ಣ ಕೂಡ ಆ ಭೂಮಿಯನ್ನು ಖುದ್ದು ನೋಡಿ ಒಪ್ಪಿ ಬಂದಿದ್ವಿ. ಆದ್ರೆ, ನಮಗೆ ಕಾಡಿದ ಯೋಚನೆ ಅಂದ್ರೆ, ಇದು ಮಾಲೀಕ ಹೇಳಿದಂತೆ ವಿಸ್ತೀರ್ಣದಲ್ಲಿ 8 ಎಕರೆ ಇದೆಯಾ ಅನ್ನೋದು. ಅದನ್ನು ತಿಳಿಯಲೇ ನಾವು ಅಂದು ಅಳತೆ ಟೇಪು ಹಿಡಿದು ಹೊಲಕ್ಕೆ ನುಗ್ಗಿದ್ದು..

ನಕ್ಸಲ್ ನಾಯಕರಿಂದ ನನ್ನ ಪತ್ರಕ್ಕೆ ಬಂದ ಮಾರೋಲೆ

ಕರ್ನಾಟಕದ ನಕ್ಸಲ್ ನಾಯಕರಿಂದ ಜನವರಿ 4, 2009 ರಂದು ಕರ್ನಾಟಕದ ಹಲವು ಮಾಧ್ಯಮ ಕೇಂದ್ರಗಳಿಗೆ ಮತ್ತು ಕನ್ನಡದ ಹಲವಾರು ಲೇಖಕರಿಗೆ ಇ-ಮೇಯ್ಲ್ ಪತ್ರ ಬಂದಿತ್ತು. ಹಾಗೆ ಅದು ನನಗೂ ಬಂದಿತ್ತು.

ಕನ್ನಡದ ಪರವಾಗಿ ದನ್ನಿ ಎತ್ತಕ್ಕೇ ಜನ ಬೇಕಂತೆ!

ಕ ರ ವೆ ನಡೆಸಿದ ವಿಶ್ವ ಕನ್ನಡಿಗರ ಸಮ್ಮೇಳನದಲ್ಲಿ ರಾಜಕಾರಣಿಯೊಬ್ಬರು ಹೇಳಿದ್ದಾರೆ.. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ನಾರಯಣ ಗೌಡರನ್ನ ಎಮ್.ಎಲ್.ಸಿ ಮಾಡುವರಂತೆ.. ಕನ್ನಡದ ಪರ ಧ್ವನಿ ಎತ್ತಲು ಶಕ್ತಿ ಬೇಕಂತೆ..

ಅಮ್ಮನ ಕೋಪ...

ತುಂಟಾಟ ತಾಳದೆ ಮುನಿದು, ದುರುದುರನೆ ದೂರ ಸರಿದಳು ಅಮ್ಮ
ಒಲವೇ ಕಂಡ ಕಂದನಿಗೆ ಅವಳ ಕಂಗಳಲೂ ಕಂಡಿತು ಗುಮ್ಮ

ಅಮ್ಮನವತಾರವ ಕಂಡು ಬೆದರಿ ಥರಥರನೆ ನಡುಗಿದನು ಪುಟ್ಟ
ಚೆನ್ನಿಲ್ಲದಾ ಕೋಪ ಬೇಡವು ಎಂದು ನಿಂತ ನೆಲದೀ ತಾನು ನೆಟ್ಟ

ತಣಿಯದಮ್ಮನ ಕೋಪ, ಬರಳು ಅಮ್ಮನು ಬಳಿಗೆ, ಸರಿಯಿತು ವಿರಸದಾ ಗಳಿಗೆ
ಮುನಿದ ಅಮ್ಮನಾ ಒಲಿಸುವುದು ಹೇಗೆಂದು ಎಣಿಸುತಾ ನಿಂತನೊಂದುಗಳಿಗೆ

ಟಾಪ್ ಟೆನ್ ಬ್ಯಾಟ್ಸ್ಮನ್‌ಗಳು

ನನ್ನುಸಿರೇ ಕ್ರಿಕೆಟ್. ಹಗಲು ರಾತ್ರಿ ಕ್ರಿಕೆಟ್‌ಗಾಗಿ ಜೀವತೇದಿದ್ದೇನೆ:

ಸ್ಕೂಲ್-ಕಾಲೇಜು ಕಲಿಯುವಾಗ ಪಾಠಕ್ಕಿಂತ ಜಾಸ್ತಿ ಕಮೆಂಟರಿ ಕೇಳಿದೆ. ಮಾರ್ಕ್ಸ್ ಕಮ್ಮಿ ಸಿಕ್ಕಿತು. ಒಳ್ಳೆ ಉದ್ಯೋಗ ಸಿಗಲಿಲ್ಲ.
ಹೀಗೆ ಕ್ರಿಕೆಟ್‌ಗಾಗಿ ತ್ಯಾಗ ಮಾಡಿದ ನಾನು ‘ಟಾಪ್ ಟೆನ್’ ಹೇಳಬೇಕಾದವನೋ,
ಅಥವಾ-ಸಂಪಾದನೆಗಾಗಿ ಕ್ರಿಕೆಟ್ ನಂಬಿರುವ ಸ್ಕೋರರ್-ಸ್ಟಾಟೀಟೀಷನ್ಸ್,