ಸಂಪದ ಮಿಲನದ ಸವಿ ನೆನಪು

ಸಂಪದ ಮಿಲನದ ಸವಿ ನೆನಪು

ನಂಗೆ ಈಗ ಶಿವು ಮತ್ತೆ ರೂಪಕ್ಕನ ಮೇಲೆ ಸಿಟ್ಟು ಬರ್ತಿದೆ :( .ಸಂಪದ ಮಿಲನದ ಬಗ್ಗೆ ಏನಾದರು ಬರೆಯೋಣವೆಂದರೆ, ಇವರಿಬ್ಬರೂ ಆಗಲೇ ಎಲ್ಲ ಬರೆದಿದ್ದಾರೆ :) .ನಿನ್ನೆಯೇ ಬರೆಯೋಣವೆಂದರೆ ಆಗಲೇ ಇಲ್ಲ, ಅದಕ್ಕೆ ಇವತ್ತು ಬರೆಯುತಿದ್ದೇನೆ. ಇಲ್ಲೂ ಲೇಟ್ ಎಂಟ್ರಿ :)

ನಿನ್ನೆ ಊಟ ಮಾಡುವ ಸಮಯದಲ್ಲಿ ಒಂದು ಕಾಲ್ ಬಂತು ಯಾರ್ದು ಅಂತ ನೋಡಿದರೆ ಶ್ರೀಧರ್ ಸರ್, 'ರಾಕೇಶ್ ನಾನು ಇಲ್ಲಿ ಬಂದಿದ್ದೇನೆ' ಅಂದಾಗ, ಊಟ ಹಾಗೆ ಗಂಟಲಲ್ಲೇ ಸಿಕ್ಕಿಕೊಳ್ತು.ಅವರು ಬಂದು ಕಾಯ್ತಾ ಇದ್ದರೆ ನಾನಿನ್ನು ಹೊರಟೆ ಇಲ್ಲ ಅಂತ ನಂಗೆ ನಾನೇ ಬೈದುಕೊಂಡೆ.

ರೂಪಕ್ಕ ಅವರ ಬ್ಲಾಗ್ನಲ್ಲಿ ಬರೆದಿದ್ದಾರಲ್ಲ, ಅರವಿಂದನಿಗೆ ಕರೆ ಮಾಡಿ ವಿಳಾಸ ಕೇಳಿದ್ರೆ ಮತ್ಯಾರಿಗೋ ಕರೆ ಮಾಡಿ ಕೇಳ್ತಾ ಇದ್ದ ಅಂತ. ಆ ಮತ್ಯಾರೋ ನಾನೇ.ನಂಗೆ ವಿಳಾಸವಷ್ಟೇ ಗೊತ್ತಿತ್ತು ಅದನ್ನೇ ಅರವಿಂದ್ ಅವರಿಗೆ ಹೇಳಿ ನಾನು ಆಫೀಸಿನ ಕೀಲಿ (ಕಾರ್ಯಕ್ರಮ ನಡೆಯು ಸ್ಥಳ, ಹರಿಯವರ ಸ್ನೇಹಿತರ ಆಫೀಸ್ ) ತರಲು ಮಹಾತ್ಮ ಗಾಂಧೀ ರಸ್ತೆಗೆ ಹೊರಟೆ. ಅಲ್ಲಿಂದ ಬರುವಷ್ಟರಲ್ಲಿ ಗೇಟಿನ ಬಳಿ ಪಾಲ ಹಾಗು ಅರವಿಂದ್ ನಿಂತಿದ್ರು. ಅರವಿಂದ್ ಬಳಿ ಆಫೀಸು ಎಲ್ಲಿದೆ ಅಂತ ಕೇಳ್ಕೊಂಡು ಹೊರಟವ ಬಿಲ್ಡಿಂಗ್ನ ಇನ್ನೊಂದು ಬ್ಲಾಕ್ಗೆ ಹೋಗಿ ಹುಡುಕಿದರೆ ಅಡ್ರೆಸ್ ಸಿಗುತ್ತಲೇ ಇಲ್ಲ. ಅಲ್ಲೊಬ್ಬ ಘಜಿನಿ ಸ್ಟೈಲ್ ಕಟಿಂಗ್ ಮಾಡಿಸಿಕೊಂಡ ಸೆಕ್ಯೂರಿಟಿ ಅತ್ರ ಅಡ್ರೆಸ್ಸ್ ಕೇಳಿದ್ರೆ, ಅವನೋ 'Short time memory loss' ಆಗಿರೋ ತರಾನೆ ನೋಡಿದ ;) .ಯಾಕೋ ಇವ್ನ ಅತ್ರ ಕೇಳೋದು ಬೇಡ ಅನ್ನಿಸಿ ಕೆಳಗಿಳಿದು ಅರವಿಂದನಿಗೆ ಫೋನಾಯಿಸಿ ಈ ಬಾರಿ ಸರಿಯಾದ ಜಾಗಕ್ಕೆ ಹೊರಟೆ.ಮೆಟ್ಟಿಲು ಹತ್ತುವಾಗ ಆಪರೇಷನ್ ಥಿಯೇಟರ್ ಬಳಿ (ವೋಕಾರ್ಡ್ ಆಸ್ಪತ್ರೆ)ಹೆಣ್ಣು ಮಗಳೊಬ್ಬಳು ಯಾವುದೋ ಮಂತ್ರ ಪಠಿಸುತ್ತಾ ಕುಳಿತಿದ್ದರು.ಮನದಲ್ಲೇ ಅವರಿಗೆ ಒಳ್ಳೆಯದಾಗಲಿ ಎಂದುಕೊಂಡು ಕಾರ್ಯಕ್ರಮ ನಡೆಯುವ ಫ್ಲೋರ್ ತಲುಪಿದರೆ, ಅಲ್ಲಿ ಆಗಲೇ ಶ್ರೀಧರ್,ಸುರೇಶ್ ಹೆಗ್ಡೆ,ಎಂ.ಏನ್.ಎಸ್ ರಾವ್, ರೂಪಕ್ಕ,ರಶ್ಮಿ ,ಯಷಿತ ಕಾಯ್ತಾ ಇದ್ರು.

ರೂಪಕ್ಕ ನನ್ನ ನೋಡಿದ ತಕ್ಷಣ ಗುರುತು ಹಿಡಿದರು. ನಂತರ ಎಲ್ಲ ಒಳ ನಡೆದೆವು. ಒಬ್ಬೊಬ್ಬರಾಗಿ ಬರುತ್ತಿದ್ದಂತೆ ಮಾತು ಶುರು. ಫೋಟೋ ಇದ್ದವರ ಗುರುತು ಸಿಕ್ಕರೆ ಉಳಿದವರ ಹೆಸರು ಕೇಳಿ ತಿಳಿದು ಕೊಳ್ಳುವುದು ಇದೆ ನಡೆದಿತ್ತು. ಗಂಟೆ ನಾಲ್ಕಾದರೂ ಇನ್ನು ಬರ್ತಾನೆ ಇದ್ದಿದ್ದರಿಂದ ಹೆಗ್ಡೆ ಸರ್ ತಮಾಷೆಯಾಗಿ ಕೇಳಿದ್ರು "ಏನ್ ರಾಕೇಶ್ ಒಳ ಒಪ್ಪಂದವೆನಾದ್ರು ಮಾಡ್ಕೊಂಡಿದ್ದಿರ? ಇನ್ನು ಬರ್ತಾನೆ ಇದ್ದಾರೆ" :)

ಎಲ್ಲರೂ ಬಂದು ಸೇರುವಷ್ಟರಲ್ಲಿ ಸಮಯ ೪.೩೦ ಹತ್ತಿರವಾಗಿತ್ತು.ಆಮೇಲೆ ಒಂದು ರೌಂಡ್ ಎಲ್ಲರದು ಕಿರುಪರಿಚಯವಾಯಿತು. ಅಷ್ಟರಲ್ಲಿ ಎಲ್ಲ 'ಮೀಟಿಂಗ್ನ ಅಜೆಂಡಾ ಏನು' ಅಂತ ಕೇಳಿದ್ರು, ಆಗ ಹರಿ ರಾಕೇಶ್ನನ್ನೇ ಕೇಳಿ ಅಂತ ಅವರ ಕುಳಿತಿದ್ದ ಜಾಗಕ್ಕೆ ನನ್ನ ಕೂರಿಸಿ ಅವರು ಹಿಂದೆ ಬಂದು ಕುಳಿತರು. ನಾನ್ ಏನಪ್ಪಾ ಹೇಳೋದು ಅಂತ ತಲೆಗೆ ಹುಳ ಬಿಟ್ಕೊಳ್ತಾ ಇರುವಷ್ಟರಲ್ಲಿ ಶ್ರೀಧರ್ ಅವರು "ಪರಿಚಯ ಮಾಡ್ಕೊಳ್ಳೋದು, ಹರಟೆ ಹೊಡೆಯೋದು ಅಷ್ಟೆ" ಅಂತ ಹೇಳಿದಾಗ ನಾನಂತೂ ಫುಲ್ ಖುಷ್.

ಶಿವು ಅವರು 'ಲಿನಕ್ಸಾಯಣ' ಮಾಡಿದರು, ನಂತರ ಹರಿಯವರಿಂದ 'ಸಂಪದಾಯಣ'ವಾಯ್ತು.ಕಡೆಗೆ ಎಲ್ಲರೂ ತಾವು ಸಂಪದಕ್ಕೆ ಬಂದ ಅನುಭವಗಳನ್ನು ಹೇಳಿಕೊಂಡರು ಹಾಗೆ ಸಂಪದದಲ್ಲಿ ಹೊಸದಾಗಿ ಏನಾದರು ಮಾಡಬಹುದಾ? ಅನ್ನುವ ಮಾತುಗಳು ಕೇಳಿ ಬಂದವು. ಅಷ್ಟರಲ್ಲಾಗಲೇ ಸಮಯ ೭ ದಾಟಿತ್ತು ಎಲ್ಲರನ್ನು ಬೀಳ್ಕೋಟ್ಟು, ನಮ್ಮ ಬೆಂಗಳೂರು ರೌಂಡ್ ಮುಗಿಸಿ ಮನೆ ಸೇರಿದಾಗ ಸಮಯ ಹನ್ನೆರಡಾಗಿತ್ತು :)

ಸಂಪದ ಮಿಲನಕ್ಕೆ ಬಂದವರ ಪಟ್ಟಿ :
೧.ಅರವಿಂದ್ .ಎಚ್
೨.ನಾಗರಾಜ್ .ಜಿ
೩.ಮಧುಸೂದನ್ ಗೌಡ .ಎಂ.ಸಿ
೪.ಸುನೀಲ ವಾಲೀಕಾರ
೫.ಓಹಿಲ್ ಕವಾಸಿ
೬.ವಿಕಾಸ್ ಹೆಗ್ಗಡೆ
೭.ರಾಘವೇಂದ್ರ ಪ್ರಸಾದ್
೮.ಅನೀಲ್ ರಮೇಶ್
೯.ಸವಿತ .ಎಸ್.ಆರ್
೧೦.ರಶ್ಮಿ ಪೈ. ಕಾಸರಗೋಡು
೧೧.ರೂಪ. ಬಿ
೧೨.ರಘುರಾವ್. ಡಿ
೧೩.ಕಿರಣ್ ಜೆ ದೇಸಾಯಿ
೧೪.ಚಾಮರಾಜ ಸವಡಿ
೧೫.ವೆಂಕಟೇಶ ಮೂರ್ತಿ
೧೬.ಹರಿಹರಪುರ ಶ್ರೀಧರ್
೧೭.ಹರಿಪ್ರಸಾದ್ ನಾಡಿಗ್
೧೮.ಓಂ ಶಿವಪ್ರಕಾಶ್
೧೯.ಎಂ.ಎನ್.ಎಸ್. ರಾವ್
೨೦.ಶ್ರೀನಿಧಿ. ಎನ್
೨೧.ಪಾಲಚಂದ್ರ
೨೨.ಆಸು ಹೆಗ್ಡೆ
೨೩.ಸತೀಶ್ ನಾಯಕ್ ಬೆಳ್ಳರ್ಪಾಡಿ
೨೪.ಉಮೇಶ್ ದೇಸಾಯಿ
೨೫.ಗುರುಪ್ರಸಾದ್. ಎಸ್.ವಿ
೨೬.ರಾಮನಾಥ್ ಭಟ್ ( ಮರ )
೨೭.ರಾಕೇಶ್ ಶೆಟ್ಟಿ

(ಸ್ನೇಹ ಮಿಲನಕ್ಕೆ ಬಂದವರ ಪಟ್ಟಿಯನ್ನು 'ನಾಗರಾಜ್' ಅವರ ಡೈರಿಯಿಂದ ಹಾಗೂ ಫೋಟೋವನ್ನು ಶಿವು ಅವರ ಅಲ್ಬಮ್ನಿಂದ ಕದ್ದಿದ್ದೇನೆ ;) ಬರೆಯಲು ಇನ್ನು ಬಹಳಷ್ಟು ವಿಷಯಗಳಿದ್ದವು ಮತ್ತೆ ಮತ್ತೆ ಅದನ್ನೇ ಬರೆದ್ರೆ ಓದಿ ಬೈಕೊತಿರ ಅಂತ ಬರೆದಿಲ್ಲ :) )

Rating
No votes yet

Comments