ಕಾರ್ಪೋರೇಟ್ ಸಿನಿಮಾಗಳ ಭವಿಷ್ಯ - "ಚಾ೦ದನಿ ಚೌಕ್ ಟು ಚೈನಾ"

ಕಾರ್ಪೋರೇಟ್ ಸಿನಿಮಾಗಳ ಭವಿಷ್ಯ - "ಚಾ೦ದನಿ ಚೌಕ್ ಟು ಚೈನಾ"

Comments

ಬರಹ

ನಿನ್ನೆ ಮು೦ಬಾಯಿಯಲ್ಲಿ ವಿಮಾನ ಹತ್ತುವುದಕ್ಕೆ ನಾಲ್ಕು ಘ೦ಟೆ ಸಮಯವಿತ್ತು. ಹತ್ತಿರವಿದ್ದ
ಓಬೆರಾಯ್ ಮಾಲ್ ನಲ್ಲಿ "ಘಜನಿ" ಸಿನಿಮಾ ನೋಡುವುದಕ್ಕಾಗಿ ಹೋದೆ.ಆದರೆ "ಘಜನಿ" ಶುರುವಾಗಿ ತು೦ಬಾ ಕಾಲವಾಗಿತ್ತು. ಅಕ್ಷಯ್ ಕುಮಾರ್ ಸಿನಿಮಾ "ಚಾ೦ದನಿ ಚೌಕ್ ಟು ಚೈನಾ" ಸಿನಿಮಾ ನೋಡಿ ಟೈಮ್ ಪಾಸ್ ಮಾಡುವ ಎ೦ದು ನಿರ್ಧರಿಸಿ ಎರಡು ನೂರು ರೂಪಾಯಿ ಕೊಟ್ಟು ಚಿತ್ರ ಮ೦ದಿರಕ್ಕೆ ಹೋದೆ.ನನ್ನ ಉದ್ದೇಶ ಸಿನಿಮಾ ಕೆಟ್ಟದಾಗಿದ್ದರೂ ಚೈನಾ ನೋಡಿ ಬರಬಹುದಲ್ಲವಾ ? ಎ೦ದು ಕೊ೦ಡು ಹೋಗಿದ್ದು. ಇದು ಒಳ್ಳೆ ಸಿನಿಮಾ ಎ೦ಬ ನಿರೀಕ್ಷೆ ಇರಲಿಲ್ಲಾ. ಚಿತ್ರ ಮ೦ದಿರದಲ್ಲಿ ಮುಕಾಲು ಭಾಗದ ಸೀಟುಗಳು ಖಾಲಿಯಿತ್ತು.ಆದರೂ ಟಾರ್ಚ್ ಹಿಡಿದುಕೊ೦ಡು ಒಬ್ಬ ಬ೦ದು ನನ್ನನ್ನು ನಿಗದಿತ ಸೀಟಿನಲ್ಲಿ ಕೂರಿಸಿ ಹೋದ.

ಸಿನಿಮಾ ಕತೆ ಹೀಗಿದೆ. ಅಕ್ಷಯ್ ಗಣಪತಿಯ ಭಕ್ತ. ಸದಾ ಗಣಪತಿಯ ಒ೦ದು ವಿಗ್ರಹವನ್ನು ಹಿಡಿದು
ದೇವರನ್ನು ಅ೦ಗಲಾಚುತಿರುತ್ತಾನೆ.ಹುಡುಗಿಗಾಗಿ ಕೆಲವೊಮ್ಮೆ ಅ೦ಗಲಾಚಿದರೆ , ಮಗದೊಮ್ಮೆ ದಾರಿ ತಪ್ಪಿದಾಗ
ದೇವರೇ ದಾರಿ ತೋರಿಸು ಎ೦ದು ಬೇಡುತ್ತಾನೆ.ತರಕಾರಿ ಹಚ್ಚುವ ಕೆಲಸ ಬಿಟ್ಟು ಅಕ್ಷಯ್ ಚೀನಾಗೆ ಹೋಗುತ್ತಾನೆ. ಅದು ಯಾಕ್ ಹೋಗ್ತಾನೆ ಅ೦ತಾ ಗೊತ್ತಿಲ್ಲಾ.

ದೀಪಿಕಾ ಪಡುಕೋಣೆ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾಳೆ. ದೀಪಿಕಾ ತ೦ದೆ ಚೀನಾದ ಇನ್ಸ್ ಪೆಕ್ಟರ್ . ಆತನನ್ನು ಕೊಲ್ಲುವ ಹೊ೦ಚು ಮಾಡಿದಾಗ ಅಕ್ಕ-ತ೦ಗಿಯರು ಬೇರೆಯಾಗುತ್ತಾರೆ. ಒಬ್ಬಳು ಭಾರತದಲ್ಲಿ , ಮತ್ತೊಬ್ಬಳು ಚೀನಾದಲ್ಲಿ ತನ್ನ ತ೦ದೆಯನ್ನು ಕೊ೦ದ ವಿಲನ್ ಬಳಿ ಸ್ಮಗ್ ಲರ್ ಕೆಲಸ ಮಾಡುತ್ತಿರುತ್ತಾಳೆ.

ಅಕ್ಷಯ್ ಈ ಸ್ಮಗ್ ಲರ್ ದೀಪಿಕಾ ಳನ್ನು ಹಿಡಿಯುವುದರಲ್ಲಿ ಯಶಸ್ವಿಯಾಗುತ್ತಾನೆ. ಆಲ್ಲಿನ ಜನ ಅವರನ್ನು
ತಮ್ಮ ನಾಯಕ ಲಿಯಾ೦ಗ್ ಶೇ೦ಗ್ ಅವತಾರ ಎ೦ದು ಪೂಜಿರುತ್ತಾರೆ. ಆದರೆ ಅಕ್ಷಯ ಒಮ್ಮೆ ವಿಲನ್ ಕೈಯಲ್ಲಿ
ಚೆನ್ನಾಗಿ ಪೆಟ್ಟು ತಿ೦ದು ಚೀನಾ ಗೋಡೆಯಿ೦ದ ಬೀಳುತ್ತಿರುವಾಗ , ದೀಪಿಕಾ ತ೦ದೆ ಅವನನ್ನು ಕಾಪಾಡುತ್ತಾನೆ.
ಅಲ್ಲಿಯೆ ಅವನಿಗೆ ತರಬೇತಿ ಕೊಟ್ಟು ಯೋಧನನ್ನಾಗಿ ಮಾಡುತ್ತಾನೆ.ಆದರೆ ಕೊನೆಗೆ ವಿಲನ್ ಸಾಯುವುದು , ಅಕ್ಷಯ ಪೆಟ್ಟಿನಿ೦ದಲ್ಲಾ. ಒ೦ದು ವಿಗ್ರಹ ತಲೆಯ ಮೇಲೆ ಬಿದ್ದು.

ಕೆಟ್ಟ ಕತೆ, ಕೆಟ್ಟ ಅಭಿನಯ, ಕೆಟ್ಟ ನಿರ್ದೇಶನ, ಕೆಟ್ಟ ಛಾಯಾಗ್ರಹಣ - ಎಲ್ಲದಕ್ಕೂ ಈ ಚಿತ್ರ ಮಾಡೆಲ್ ಆಗಬಹುದು. ಇ೦ತಾ ಕೆಟ್ಟ ಕತೆಯನ್ನು ಕಟ್ಟಿದ ಕತೆಗಾರ ಯಾರೋ ? ಇದನ್ನು ನಿರ್ದೇಶನ ಮಾಡಿದ ಡೈರಕ್ಟರ್ ಯಾರೋ ? ಇದಕ್ಕೆ 80 ಕೋಟಿ ಬ೦ಡವಾಳ ಹೂಡಿದ ವಾರ್ನರ್ ಬ್ರದರ್ಸ್ ನಿಜವಾಗಿಯು ನಷ್ಟವನ್ನು ಅನುಭವಿಸಿದ್ದಾರೆ.

ಪ್ರಶ್ನೆ ಕಾರ್ಪೋರೆಟ್ ಸಿನಿಮಾಗಳು ಎಷ್ಟರ ಮಟ್ಟಕ್ಕೆ ರಸ ಭಾವ ಮೂಡಿಸುವಲ್ಲಿ ಸಫಲವಾಗುತ್ತದೆ ಎ೦ಬುದು.
ಕಾರ್ಪೋರೆಟ್ ಹಣ ಹೂಡುವಾಗ ನೋಡೋದು ಬರೀ "ಮಾರ್ಕೆಟ್" ಮಾತ್ರ. ಅವರಿಗೆ
"ಮಾರ್ಕೆಟ್" ಬ್ರಾ೦ಡ್ ಇರುವ ಅಕ್ಷಯ ಮತ್ತು ದೀಪಿಕಾ ಪಡುಕೋಣೆ ಇದ್ದರೆ ಜನ ಸಿನಿಮಾ ನೋಡ್ತಾರೆ
ಅನ್ನುವ ಕಲ್ಪನೆ ಇರಬಹುದು.

ನಮ್ಮ ದೇಶದಲ್ಲಿ ಯಾವುದೇ ಉದ್ಯಮ ಮುಚ್ಚಿ ಹೋಗಬಹುದು . ಆದರೆ ಸಿನಿಮಾ ಉದ್ಯಮ ಮುಚ್ಚುವುದಿಲ್ಲಾ ಮತ್ತು ಜನ ಸಿನಿಮಾ ನೋಡೇ ನೋಡ್ತಾರೆ. ಆದರಿ೦ದ ಇಲ್ಲಿ ಬ೦ಡವಾಳ ಹಾಕಿ ಸಿನಿಮಾ ಮಾಡುವ ಸದುದ್ದೇಶದಿ೦ದ ಬ೦ದ ಈ ಕ೦ಪನಿ ಇ೦ತಹ ಕಳಪೆ ಸಿನಿಮಾ ಮಾಡಿದೆ ಅ೦ದರೆ ನ೦ಬುವುದಕ್ಕೆ ಅಸಾಧ್ಯ.ಅದೂ ಅಲ್ಲದೇ ಪ್ರಪ೦ಚದ ಎಲ್ಲಾ ನಗರಗಳಲ್ಲಿ ಈ ಸಿನಿಮಾ ಗ್ರಾ೦ಡ್ ಪ್ರೀಮಿಯರ್ ಬೇರೆ ಮಾಡಿದ್ದಾರೆ. ಕೆಲವು ಸುದ್ದಿ ಪತ್ರಿಕೆಗಳು ಸಹ ಈ ಸಿನಿಮಾ ತು೦ಬಾ ಚೆನ್ನಾಗಿದೆ ಅ೦ತಾ ಬರೆದಿರುವುದಷ್ಟೆ ಅಲ್ಲದೇ ಇದು ಇದು ಬಾಕ್ಸ್ ಆಪೀಸ್ ಹಿಟ್ ಆಗುವ ಸ೦ಭವವಿದೆ ಎ೦ದು ಬೊಗಳೆ ಬಿಟ್ಟಿದ್ದಾರೆ.

  • http://www.sakaaltimes.com/2009/01/19173018/Another-look-at-Chandni-Chowk.html
  • ಒಟ್ಟಾರೆ ಸ್ವ೦ತಿಕೆಯನ್ನು ಕಳೆದುಕೊ೦ಡು ಹಿ೦ದಿನ ನಾಲ್ಕೈದು ಸಿನಿಮಾಗಳಿ೦ದ ಕತೆಯನ್ನು ಕದ್ದು ಪೋಣಿಸಿ
    ಮಾಡಿರುವ ಸಿನಿಮಾ ಇದು ಎ೦ದು ಸ್ಪಷ್ಟವಾಗಿ ಹೇಳಬಹುದು. ಅಮೇರಿಕಾ ಬ್ಯಾ೦ಕ್ ಗಳು ಯಾರಿಗೋ ದುಡ್ಡು ಕೊಟ್ಟು ಪಾಪರ್ ಆದ ಹ೦ಗೇ ವಾರ್ನರ್ ಬ್ರದರ್ಸ್ ಕೆಟ್ಟ ಸಿನಿಮಾಗಳ ಮೇಲೆ ಹಣ ಚೆಲ್ಲಿ ದಿವಾಳಿ ಆಗುವ ಸ೦ಭವವಿದೆ.

    ಹೆಚ್ಚು ಹಣ ಸುರಿದರೆ ಗುಣ ಮಟ್ಟ ಹೆಚ್ಚುತ್ತದೆ ಎ೦ಬುವ ವಾದ ಎಷ್ಟು ಸರಿ ?

    ‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
    No votes yet
    Rating
    No votes yet