ಟಾಪ್ ಟೆನ್ ಬ್ಯಾಟ್ಸ್ಮನ್‌ಗಳು

ಟಾಪ್ ಟೆನ್ ಬ್ಯಾಟ್ಸ್ಮನ್‌ಗಳು

ನನ್ನುಸಿರೇ ಕ್ರಿಕೆಟ್. ಹಗಲು ರಾತ್ರಿ ಕ್ರಿಕೆಟ್‌ಗಾಗಿ ಜೀವತೇದಿದ್ದೇನೆ:

ಸ್ಕೂಲ್-ಕಾಲೇಜು ಕಲಿಯುವಾಗ ಪಾಠಕ್ಕಿಂತ ಜಾಸ್ತಿ ಕಮೆಂಟರಿ ಕೇಳಿದೆ. ಮಾರ್ಕ್ಸ್ ಕಮ್ಮಿ ಸಿಕ್ಕಿತು. ಒಳ್ಳೆ ಉದ್ಯೋಗ ಸಿಗಲಿಲ್ಲ.
ಹೀಗೆ ಕ್ರಿಕೆಟ್‌ಗಾಗಿ ತ್ಯಾಗ ಮಾಡಿದ ನಾನು ‘ಟಾಪ್ ಟೆನ್’ ಹೇಳಬೇಕಾದವನೋ,
ಅಥವಾ-ಸಂಪಾದನೆಗಾಗಿ ಕ್ರಿಕೆಟ್ ನಂಬಿರುವ ಸ್ಕೋರರ್-ಸ್ಟಾಟೀಟೀಷನ್ಸ್,
ಕ್ರಿಕೆಟ್‌ಗಿಂತ ಕಲೆಕ್ಷನ್ ಮೇಲೆ ಕಣ್ಣಿಟ್ಟಿರುವ ಆಡಳಿತಮಂಡಳಿಯವರೋ?

ಅವರ ಸ್ಕೋರ್‌ಬುಕ್‌ನಲ್ಲಿ/ಕಂಪ್ಯೂಟರ್‌ನಲ್ಲಿ ಸಚಿನ್‌ನನ್ನು ಎಷ್ಟು ಸಲ ಮೋಸದಿಂದ ಔಟು ಮಾಡಿದರು, ಬಿಳಿಯ ಮತ್ತು ಪಾಕ್ ಅಂಪೈರ್‌ಗಳು ಮಾಡಿದ ಪಾರ್ಷಾಲಿಟಿ, ಇತ್ಯಾದಿ ವಿವರ ಇದೆಯಾ? ಸಚಿನ್ ಇಂಡಿಯಾಕ್ಕೆ ಗೆಲುವು ಕೊಡಲಿಲ್ಲವಂತೆ...
ಜಗತ್ತನ್ನೇ ಮೋಡಿ ಮಾಡಿದ ಭಾರತದ ಸ್ಪಿನ್ ಮಾಂತ್ರಿಕರು ಇವರ ೫೦ ಟಾಪ್ ಬೌಲರ್‌ಗಳ ಲಿಸ್ಟ್‌ನಲ್ಲಿ ಇಲ್ಲ!!

ಅದಕ್ಕೆ ಇವರ ಲಿಸ್ಟ್ ಹರಿದು ಬಿಸಾಕಿ ನನ್ನ ಲಿಸ್ಟ್ ತಯಾರು ಮಾಡುತ್ತಿದ್ದೇನೆ.
ಸದ್ಯಕ್ಕೆ ಟಾಪ್ ಟೆನ್ ಬ್ಯಾಟ್ಸ್‌ಮೆನ್‌ಗಳ ಪಟ್ಟಿ ಇಲ್ಲಿದೆ-
೧.ಬ್ರಾಡ್ಮನ್
೨.ಸಚಿನ್
೩.ಸೋಬರ್ಸ್
೪.ಲಾರಾ
೫.ರಿಚರ್ಡ್ಸ್
೬.ಗವಾಸ್ಕರ್
೭.ಲಾಯ್ಡ್
೮.ಅರವಿಂದ್ ಡಿ ಸಿಲ್ವಾ
೯.ಬಾರ್ಡರ್
೧೦.ಮಿಯಾನ್‌ದಾದ್

ನಿಮ್ಮ ಬಳಿ ಸರಿಯಾದ ಪ್ರೂಫ್ ಇದ್ದರೆ ನೀವೂ ಈ ಲಿಸ್ಟ್‌ನಲ್ಲಿ ಬದಲಾವಣೆಗೆ ಪ್ರಯತ್ನಿಸಬಹುದು.
ಪ್ರೂಫ್: ೧. ಶಾಲೆಗೆ ಚಕ್ಕರ್,ಕ್ರಿಕೆಟ್ಗೆ ಹಾಜರ್
೨. ಪಾಠ ಪುಸ್ತಕ ಕಮ್ಮಿ-ಕಮೆಂಟರಿ ಜಾಸ್ತಿ.
೩.ರಾತ್ರಿ ನಿದ್ರೆ ಬಿಟ್ಟು ಟಿ.ವಿ.ಯಲ್ಲಿ ಕ್ರಿಕೆಟ್ ನೋಡಿದ್ದು.
೪. ಅನಾರೋಗ್ಯದ ನೆಪ ಹೇಳಿ ರಜೆ ಹಾಕಿ ಮ್ಯಾಚ್ ನೋಡಿದ್ದು.
ಇಲ್ಲವಾದಲ್ಲಿ ನನ್ನ ಟಾಪ್ ಟೆನ್ನೇ ಫೈನಲ್. :)

-ಗಣೇಶ.

Rating
No votes yet

Comments