ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಎರಡು ಬೆರ‍ಳು ತೋರಿಸುತ್ತಾ...

ಆಸನದ ಅನುಮಂತ ನಿನ್ನೆ ಸಿಕ್ಕಿದಾಗ ಈಗೆ ಅಂದ :

"ಸಾರ್! ಟೀವಿ ನೋಡುತ್ತಾ ಇದ್ದೆ. ಇಸೇಸ ಹೇನೂಂದ್ರೆ : ಡಾಕಟರ್ ಹೆಡ್ಯೂರಪ್ಪ ಮತ್ತು ಸಂಗಡಿಗರು ಎರಡು ಬೆರ‍ಳು ತೋರಿಸುತ್ತಾ ಅವಸರದಲ್ಲಿ ಹೆಲ್ಲಿಗೋ ಮಾಯ ಆದರು."

(ಚಿಕ್ಕಮಗಳೂರಿನ ಸ್ನೇಹಿತರೊಬ್ಬರು ಕಳಿಸಿದ ಇಮೇಲ್‌ನಿಂದ)

ವಿರಹಿ ನಾನಲ್ಲ , ವಿರಹ ಎನಗಿಲ್ಲ

ನಾ ಬರೆದೆ ಅವಳಿಗೆ ಒಲವಿನ ಬರಹ
ಒಪ್ಪಿದಳವಳು ಸಿಕ್ಕಂತಾಯಿತು ಸಾವಿರ ವರಹ
ಅವಳೆಂದಳು, ಪ್ರಿಯ
ನೀನೆ ನನ್ನ ಪ್ರಾಣ, ನನ್ನ ಉಸಿರು
ನೀ ಇಲ್ಲದೆ ಬದುಕುವುದೇ ವಿರಹ
ನಾನೆಂದೆ, ಪ್ರಿಯೆ
ಅದು 'ವಿರಹ'ವಲ್ಲ ನಿನ್ನ 'ಹಣೆ ಬರಹ'!

ಬಿಟ್ಟು ಹೋದವಳ ನೆನೆಯುತ್ತ
ಕೊರಗುವುದು 'ವಿರಹ'
ಕೊರಗಿ ಕೊರಗಿ ಸಾಯುವುದು 'ಹಣೆ ಬರಹ'

ಹೊಸ ವರ್ಷದ ಶುಭಾಷಯಗಳು

ಎಲ್ಲಾ ಸಂಪದ ಬಳಗಕ್ಕೆ ಹೊಸ ವರ್ಷದ ಶುಭಾಷಯಗಳು

 "ಈ ಹೊಸ ಋತುಮಾನದಲ್ಲಿ ಸಂತಸದ ಅನೇಕ ಕ್ಷಣಗಳು ನಿಮ್ಮದಾಗಲಿ"

ಈ ಹೊಸ ವರುಷದಂದು 

ನಿಮ್ಮ ದಾರಿಗಳ ಗುರಿ ಒಂದೇ ಇರಲಿ

ಒಂದು ಯಶಸ್ವಿ  ವರುಷದ ಹಾರೈಕೆಯೊಂದಿಗೆ 

ನವಕಾಲದ ಹಾರ್ದಿಕ ಶುಭಾಷಯಗಳು......

 

 

ಇಂತಿ ನಿಮ್ಮ ಗೆಳೆಯ 

ನಾಗರಾಜ್

ಸಂಪದಕ್ಕೆ ಸೆರಿದ್ದು ಈಗಾದರೂ ಆಗಿದ್ದು ನೂರು ದಿನಗಳ ಅನುಭವ

ನಾನು ಮೊನ್ನೆಯಷ್ಟೆ ಸಂಪದಕ್ಕೆ ಸೇರಿದೆ ಅದರೆ ಇಲ್ಲಿನ ಪ್ರಿತಿಯ ಗೆಳೆಯರ ಜೊತೆ ಬರಹ ರೂಪದಲ್ಲಿ ಮಾತನಾಡುತಿದ್ದರೆ ಅವರನ್ನ ನೋಡಿದ್ದಷ್ಟೆ ಅನುಭವ.

ಅವರ ಮನಸ್ಸಿನ ಬರಹಗಳು ,ಕವನಗಳು,ಅನುಭವದ ಮಾತುಗಳು .................. ಎಲ್ಲಾ ಮನಸ್ಸಿಗೆ ತುಂಬನೆ ಮುದಕೊಡುತ್ತಾಯಿದೆ.

ಈ ವರುಷ ಅಂದರೆ ೨೦೦೮ ಮುಗಿಯುತ್ತಾಯಿದೆ ಇನ್ನೂ ಕೆಲವೆ ಅವದಿಯಲ್ಲಿ ೨೦೦೯ ಕ್ಕೆ ಕಾಲನ್ನು ಇಡ್ತಾವಿ

ನನ್ನ ಗುಬ್ಬಚ್ಚಿ....

ನನ್ನ ಭ್ರಾಮಕ ಸುಪ್ರಭಾತದಲಿ
ಕಲರವಗುಟ್ಟಿದ ಗುಬ್ಬಚ್ಚಿ
ಅತ್ತು ಬಿಟ್ಟಿತ್ತು, ತುಟಿಗಳನು ಕಚ್ಚಿ
ಯಾರಿಗೂ ಹೇಳದೆ ಕಣ್ಣೀರು
ಸುರಿಸಿತ್ತು ರೆಕ್ಕೆಯನು ಮುಚ್ಚಿ....

ಸಂಧ್ಯಾ ಸ್ನಾನಕ್ಕೆ ಜಾರಿದ್ದ ರವಿಯು
ಮತ್ತೊಮ್ಮೆ ಇಣುಕಿ ನೋಡಿದ್ದ
ಆಗಸವು ಕೆಂಪೇರಿರಲು
ಗುಬ್ಬಚ್ಚಿ ಹಾರಿತ್ತು
ತನ್ನ ಪುಟ್ಟ ಗೂಡಿನತ್ತ

ರಾತ್ರಿ ವೇಳೆಯಲಿ ತರುಲತೆಯು

ಸಂಪದ ಮಿತ್ರರ ಸ್ನೇಹ ಮಿಲನ

ಸಂಪದದ ಮಿತ್ರವೃಂದದವರಿಗೆ

 

ಹೊಸವರ್ಷದ ಹಾರ್ದಿಕ ಶುಭಾಶಯಗಳು

ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಹೊಸವರ್ಷದ ಸಂಭ್ರಮಾಚರಣೆಯಲ್ಲಿ ಸಂಪದದ ಎಲ್ಲಾ ಮಿತ್ರವೃಂದದವು ಮುಖತಃ ಭೇಟಿ ಮಾಡುವ ಕಾರ್ಯಕ್ರಮವನ್ನು ಆಯೋಜಿಸೋಣವೆಂಬ ಅಭಿಲಾಷೆ, 

ಸ್ಥಳ : ಬೆಂಗಳೂರಿನ ಬಸವನಗುಡಿ,

ನಿಮ್ಮಗಳ ನಿಷ್ಠೆಯೂ ಭಾರತಕ್ಕಿಲ್ಲ

(ಗುಜರಾತಿನ ಧೇಡ್ ಜಾತಿಗೆ ಸೇರಿದ) ದಲಿತ ಕುಟುಂಬವೊಂದು ಮೊದಲ ಬಾರಿಗೆ ಸತ್ಯಾಗ್ರಹ ಆಶ್ರಮದಲ್ಲಿ ಇರಲು ಬಂದಾಗ ಅದನ್ನು ಕಸ್ತೂರಬಾ ಸಹ ಒಪ್ಪಿಕೊಂಡಿರಲಿಲ್ಲ.

ಗಾಂಧಿ, ಸಾವರ್ಕರ್, ಪ್ರಚೋದಕರು...

ಈಗ ಓದುತ್ತಿರುವ "Gandhi - The Man, His People, and the Empire" ನಲ್ಲಿ ಲೇಖಕ ರಾಜ್‌ಮೋಹನ್ ಗಾಂಧಿ, ಸಾವರ್ಕರ್ ಮತ್ತು ಮೋಹನ್‌ದಾಸ್ ಗಾಂಧಿಯ ನಡುವಿನ ಎರಡು ಭೇಟಿಗಳ ಬಗ್ಗೆ ಬರೆಯುತ್ತಾರೆ. ಆ ಭಾಗಗಳನ್ನು ಓದುವ ಒಂದೆರಡು ದಿನಗಳ ಹಿಂದೆಯಷ್ಟೆ ನಾನು ಇಲ್ಲಿ ಒಬ್ಬ ಮಂಡ್ಯದ ಯುವಕನನ್ನು ಭೇಟಿಯಾಗಿದ್ದೆ. ಬುದ್ಧಿವಂತ.

ಶತಮಾನದ ಹಿಂದೆ ಗಾಂಧಿ ಹೇಳಿದ್ದು...

ವಿಚಾರ ಮಂಟಪದ basic ಕೆಲಸ ಮುಗಿದ ತಕ್ಷಣ, ಈ ಒಂದು ಮೂರು ದಿನದಿಂದ ಗಾಂಧಿಯ ಮೊಮ್ಮಗ ರಾಜ್‌ಮೋಹನ್ ಗಾಂಧಿ ಬರೆದಿರುವ "Gandhi - The Man, His People, and the Empire" ಹಿಡಿದುಕೊಂಡು ಕುಳಿತಿದ್ದೇನೆ.

ಕ್ಯಾಲೆಂಡರ್‌ ಬದಲಿಸುವ ಮುನ್ನ

ರಾತ್ರಿಗಿನ್ನೂ ಸಮಯವಿದೆ ಮಿತ್ರಾ
ಮುಸ್ಸಂಜೆಯಲ್ಲೇಕೆ ಮಲಗುತ್ತಿರುವೆ

ಕಸ ಗುಡಿಸಬೇಕು, ದೀಪ ಹಾಕಬೇಕು
ಶ್ರದ್ಧೆ ಇದ್ದರೆ ಗೂಡಿನೊಳಗೊಂದು ಪಣತಿ
ಬಾಗಿಲ ಸಂದಿಯಲ್ಲೊಂದು ಊದುಬತ್ತಿ
ಕೈಮುಗಿಯದಿದ್ದರೂ ನಡೆಯುತ್ತದೆ

ಒಳ ಬಾ, ಟೇಬಲ್‌ ಸರಿಪಡಿಸು
ಪತ್ರಿಕೆ-ಪುಸ್ತಕಗಳನ್ನು ಜೋಡಿಸಿಡು
ಬರೆಯುವುದಿದ್ದರೆ ಹೊಸ ಹಾಳೆಗಳಿರಲಿ
ಹಸನಾದ ಪೆನ್ನಿದ್ದರೆ ಒಳಿತು