ವಿರಹಿ ನಾನಲ್ಲ , ವಿರಹ ಎನಗಿಲ್ಲ

ವಿರಹಿ ನಾನಲ್ಲ , ವಿರಹ ಎನಗಿಲ್ಲ

ನಾ ಬರೆದೆ ಅವಳಿಗೆ ಒಲವಿನ ಬರಹ
ಒಪ್ಪಿದಳವಳು ಸಿಕ್ಕಂತಾಯಿತು ಸಾವಿರ ವರಹ
ಅವಳೆಂದಳು, ಪ್ರಿಯ
ನೀನೆ ನನ್ನ ಪ್ರಾಣ, ನನ್ನ ಉಸಿರು
ನೀ ಇಲ್ಲದೆ ಬದುಕುವುದೇ ವಿರಹ
ನಾನೆಂದೆ, ಪ್ರಿಯೆ
ಅದು 'ವಿರಹ'ವಲ್ಲ ನಿನ್ನ 'ಹಣೆ ಬರಹ'!

ಬಿಟ್ಟು ಹೋದವಳ ನೆನೆಯುತ್ತ
ಕೊರಗುವುದು 'ವಿರಹ'
ಕೊರಗಿ ಕೊರಗಿ ಸಾಯುವುದು 'ಹಣೆ ಬರಹ'
ವಿರಹಿ ನಾನಲ್ಲ, ವಿರಹ ಎನಗಿಲ್ಲ
ಅದ ಹೇಳಲು ಬರೆದಿರುವೆ ಈ ಬರಹ

'ಅಖಿಲ ಭಾರತ ವಿರಹ ಪ್ರೇಮಿಗಳ ಸಂಘ'ವನ್ನು ಮಾನ್ಯ ಅರವಿಂದ್ ಅವರು ಸ್ಥಾಪಿಸಿ ಅದಕ್ಕೆ ನನ್ನನ್ನು ಅದಕ್ಷನನ್ನಾಗಿ ವೋ ಸಾರಿ ಸಾರಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ :)
'ವಿರಹ'ವಿಲ್ಲದವ ಅದ್ಹೇಗೆ 'ವಿರಹಿಗಳ' ಸಂಘಕ್ಕೆ ಅಧ್ಯಕ್ಷನಾಗುತ್ತಾನೆ ಅಂತ ತಲೆಗೆ ಹತ್ತಲಿಲ್ಲ, ಆದ ಕಾರಣದಿಂದ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತಿದ್ದೇನೆ ;)

ಒಂದು ವಿಸ್ಯ ಅರ್ಥ ಆಗ್ಲಿಲ್ಲ ನಂಗೆ, ಅಲ್ಲಾ ಸ್ವಾಮೀ ಹುಡ್ಗಿ ಕೈ ಕೊಟ್ರೆ 'ವಿರಹಿ' ಯಾಕೆ ಆಗ್ಬೇಕು ಅಂತೀನಿ? ಹೋದ್ರೆ ಹೋಯ್ತಾರೆ ನನ್ನಂತ ಒಳ್ಳೆ ಹುಡ್ಗನ (?) ಜೊತೆ ಬಾಳೋದು ಅವಳ  ಹಣೆಲಿ ಬರೆದಿಲ್ಲ ಅನ್ಕೊಂಡ್ರೆ ಆಯ್ತು ;) ಅದು ಬಿಟ್ಟು ಕುಡಿದು,ಸಿಗರೇಟ್ ಸೇದಿ ನಮ್ಮನ್ನು ನಾವೇ ಸುಟ್ಟುಕೊಳ್ಳೋದಾ? ಅವಳಿಗಿಂತ ಹೆಚ್ಚು ನಮ್ಮನ್ನು ನಾವೇ ಪ್ರೀತಿಸೋಣ, ನಮ್ಮನ್ನೇ ನಂಬಿಕೊಂಡ ನಮ್ಮ ಕುಟುಂಬವಿರುತ್ತಲ್ಲ ಅವರನ್ನ ಪ್ರೀತಿಸೋಣ.
ಕಳೆದು ಹೋದ 'ನಿನ್ನೆ'ಯ ನೆನೆಯುತ ಸುಂದರವಾದ 'ಇಂದು ,ನಾಳೆ'ಯ ಕಳೆಯುವುದೇಕೆ? ಒಂದು ಹಾಡ ಐಯ್ತೆ ಗೊತ್ತಲ್ಲ "ಇರುವುದೆಲ್ಲವಾ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ" ಅಂತ, ಹಂಗೆಯ ನಮ್ಮ ಮಂಗ್ಯ ಮನಸು ಅದು ಬೇಕು ಇದು ಬೇಕು ಅಂತಾನೆ ಇರುತ್ತೆ, ಆದ್ರೆ ಮನಸಿನ ಮಾತು ಕೇಳಿದ್ರೆ ನಾವ್ ಮಂಗ್ಯಾ ಆಗೋದು ಗ್ಯಾರಂಟಿ. ಸ್ವಲ್ಪ ಜಾಸ್ತಿನೇ ಕುಯ್ತಾ ಇದ್ದೀನಿ ಅನ್ನಿಸುತ್ತೆ  :) ,ಬ್ಯಾಸ್ರ ಮಾಡ್ಕಬೇಡಿ.

 
(ನಾನು ಬರಿ ಕೈ ಕೊಟ್ಟ ಹುಡ್ಗಿ ಅಂತ ಹುಡುಗರಿಗೆ ಬರೆದೆ, ಹುಡ್ಗೀರು ನಿಮಗೆ ಹೆಂಗ್ ಬೇಕೋ ಹಂಗೆ ಚೇಂಜ್ ಮಾಡ್ಕಂಡು ಓದ್ಕಳ್ಳಿ ;) )


                                                                                           - ರಾಕೇಶ್ ಶೆಟ್ಟಿ :)  

  

Rating
No votes yet

Comments