ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಓದುಗರೇ ನಿಮಗೆ ಈ ಮನ ಕಲಕುವ , 'ಮಾಯಾ' ರಾಕ್ಚಸಿಯ, ರಕ್ಕಸ ರಾಜ್ಯದ / ಪ್ರಜೆಗಳ ದೌರ್ಭಾಗ್ಯದ ಕಥೆ ಗೊತ್ತೇ?

ನಿಮಗೆ (ನೀವು ಈ ಎರಡು ದಿನಗಳ ಹಿಂದಿನ ಪೇಪರ್ ಓದಿದ್ದರೆ, ಟಿ ವಿ ನೋಡಿದ್ದರೆ ಇದು ಖಂಡಿತ ಗೊತ್ತಿರುತ್ತೆ)..
ಈ ಸುದ್ಧಿ ಓದಿ ಏನನಿಸುತ್ತೆ ಖಂಡಿತ ತಿಳಿಸಿ...
ಇದು 'ಮಾಯಾವತಿ' ಎನ್ನುವ ದುರುಳ ಹೆಂಗಸಿನ ಕಥೆ...
ಈ ಮಾಯಾ ಕನ್ಯೆ( ಅವರು ಇನ್ನು ಕುಮಾರಿ ಮಾಯಾವತಿ)

ಕ್ರಿಸ್ತಜಯಂತಿಯ ಮೆಲುಕು


"ದ್ಯಾವರಿಗೆ ರಾಜರ ಪಟ್ಟ ಕಟ್ಟಿ ಊರು ತುಂಬಾ ಮೆರವಣಿಗೆ ಮಾಡಿದ್ದಾಯ್ತು, ಇನ್ನು ಒಂದು ತಿಂಗಳಿಗೆ ಸ್ವಾಮಿ ಹುಟ್ಟೋ ಹಬ್ಬ, ನಾಳೆಯಿಂದ ಕೊರೆತ ಒಸಿ ಜಾಸ್ತಿ" ಇವು ನಮ್ಮ ತಾತನ ಮಾತುಗಳನ್ನು ಕೇಳಿದಾಗ "ಸ್ವಾಮಿ ಹುಟ್ಟೋದು" ಅನ್ನೋ ಪದ ಮನಸ್ಸಿಗೆ ಲಗತ್ತಾಗಿ ಓ ಅದು ಕ್ರಿಸ್ಮಸ್ ಅಲ್ಲವೇ ಎಂಬುದು ಹೊಳೆದು ಮನ ಪ್ರಫುಲ್ಲವಾಗುತ್ತದೆ. ಈ ಕ್ರಿಸ್ಮಸ್ ಅನ್ನೋ ಪದವೇ ವಿಶ್ವದೆಲ್ಲೆಡೆ ಎಲ್ಲರ ಮನಸಿನಲ್ಲೂ ಸಂತಸದ ಭಾವ ಮೂಡಿಸುತ್ತದೆ. 

ಕ್ರಿಸ್ಮಸ್ಸು ಅಂತ ನಾವು ಹೇಳೋ ಪದ ತಾತನ ಬಾಯಲ್ಲಿ ಕಿಸ್‌ಮಿಸ್ಸು ಆಗುವಾಗ ಮರೆಯಲ್ಲೇ ಕಿಸಕ್ಕನೆ ನಕ್ಕು ರಾತ್ರಿ ಅಮ್ಮನೊಟ್ಟಿಗೆ ಈ ಮಾತು ಹೇಳುತ್ತಾ ನಗುತ್ತಿದ್ದುದು ಕನಸೆಂಬಂತೆ ಕ್ರಿಸ್ಮಸ್ ಬಂದ ಕೂಡಲೇ ಮನಸಿನಲ್ಲಿ ಹಾಯ್ದುಹೋಗುತ್ತದೆ.

ಅದು ಸರಿ ಕ್ರಿಸ್ಮಸ್ಸಿಗೆ ಅಮ್ಮ ಅದೇನೆಲ್ಲ ತಿಂಡಿಗಳನ್ನು ಮಾಡುತ್ತಿದ್ದರಲ್ಲ. ಶಾಲೆ ಕಳೆದು ಮನೆಗೆ ಬರುವಷ್ಟರಲ್ಲಿ ನಾನಾ ತರದ ತಿಂಡಿಗಳನ್ನು ಮಾಡಿ ಡಬ್ಬಿಗಳಿಗೆ ತುಂಬಿ ಅಟ್ಟಕ್ಕೇರಿಸಿ, ಏನೂ ನಡೆದಿಲ್ಲವೆಂಬಂತೆ ಮನೆಯನ್ನು ಒಪ್ಪ ಓರಣವಾಗಿಟ್ಟಿರುತ್ತಿದ್ದರಲ್ಲ. ಹಬ್ಬದ ದಿನವಷ್ಟೇ ಅಷ್ಟೂ ತಿಂಡಿಗಳು ಹೊರಬರುತ್ತಿದ್ದವು. ಕಜ್ಜಾಯ, ಕರ್ಚಿಕಾಯಿ, ಚಕ್ಕುಲಿ, ಕಲ್‌ಕಲ್, ರೋಸ್‌ ಕುಕ್ಕೀಸ್, ಶಕ್ಕರ್‍ ಪೊಳೆಯಂಥ ಬಿಸ್ಕತ್ತು, ರವೆಉಂಡೆ, ನಿಪ್ಪಟ್ಟು, ಕೋಡುಬಳೆ, ಕಾರಸೇವೆ ಇನ್ನೂ ಏನೇನೋ? ನೆರೆಹೊರೆಯವರಿಗೆಲ್ಲ ಅವನ್ನು ಹಂಚಿದಾಗ ಅಪರೂಪದ ತಿಂಡಿಗಳನ್ನು ಕಂಡ ಅವರ ಮುಖಗಳು ಅರಳುವುದನ್ನು ನೋಡುವುದೇ ಒಂದು ಚೆಂದವಾಗಿತ್ತು.

ಲಿನಕ್ಸಾಯಣ - ೩೪ - ಪಾಸ್ವರ್ಡ್ ಮರೆತು ಹೋಯಿತೆ? ರಿಕವರಿ ಮೋಡ್ ಬಳಸಿ

ನಿಮ್ಮ ಲಿನಕ್ಸ್ ಸಿಸ್ಟಂ ಬೂಟ್ ಆಗದೇ ಇದ್ದಾಗ ನೀವು  ರಿಕವರಿ ಮೋಡ್ (RecoveryMode) ಬಳಸ ಬಹುದು. ಇದು ಲಿನಕ್ಸ್ ನ ಕೆಲ ಅವಶ್ಯಕ ಸರ್ವೀಸ್ ಗಳನ್ನ ಪ್ರಾರಂಭಿಸಿ ನಿಮ್ಮನ್ನು ಲಿನಕ್ಸ್ ಕಮ್ಯಾಂಡ್ ಲೈನಿಗೆ ಕೊಂಡೊಯ್ಯುತ್ತದೆ. ಈಗ ನೀವು ಲಿನಕ್ಸ್ ನ root ಯೂಸರ್ ಆಗಿರುತ್ತೀರಿ (ಅಂದರೆ ಲಿನಕ್ಸ್ ನ ಮುಖ್ಯ ಅಡ್ಮಿನ್ ಬಳಕೆದಾರ ಅಥವಾ ಸೂಪರ್ ಯೂಸರ್). ಇಲ್ಲಿಂದ ನೀವು ಕಮ್ಯಾಂಡ್ ಲೈನ್ ಟೂಲ್ ಗಳನ್ನು ಬಳಸಿ ನಿಮ್ಮಆಪರೇಟಿಂಗ್ ಸಿಸ್ಟಂ ಸರಿ ಪಡಿಸಿಕೊಳ್ಳಬಹುದು. ಮುಖ್ಯವಾಗಿ ಬೂಟಿಂಗ್ ಮತ್ತು ಲಿನಕ್ಸ್ ಫೈಲ್ ಸಿಸ್ಟಂಗೆ ಸಂಬಂದ ಪಟ್ಟ ತೊಂದರೆಗಳನ್ನು.

ಜೀವನಕ್ಕೆ ಅರ್ಥವೂ ಉದ್ದೇಶವೂ

ಒಮ್ಮೊಮ್ಮೆ ನಾವು ಜೀವನದ ಬಗ್ಗೆ ತಲೆಕೆಡಿಸಿಕೊಳ್ಳುವುದುಂಟು. ( ಅಥವಾ ಉಣ್ಣಲಿಕ್ಕಾಗಿ , ಉಡಲಿಕ್ಕಾಗಿ ... ಮತ್ತೇತಕ್ಕೋ ಅತ್ತರಂತೆ! )
ಎಲ್ಲರಿಗೂ ಸಮಾಧಾನಕರವಾದ ಉತ್ತರವೇನೂ ನನ್ನ ಹತ್ತಿರ ಇಲ್ಲ .
ಆದರೆ ಒಬ್ಬ ಮಹನೀಯರು ಕಂಡುಕೊಂಡ ಉತ್ತರ ಇಲ್ಲಿದೆ . ಇದನ್ನೂ ಪರಿಶೀಲಿಸಬಹುದು.

ವಿಡಿಯೋ ಗೇಮ್ ಅನ್ನು ಕಂಪ್ಯುಟರ್’ನಲ್ಲಿ ಆಡಿ! ಮಜಾ ಮಾಡಿ!

ಬಾಲ್ಯದಲ್ಲಿ ವಿಡಿಯೋ ಗೇಮ್ ಆಡಿದ ಸವಿ ನೆನಪನ್ನು ನಿಮ್ಮ ಕಂಪ್ಯುಟರ್’ನಲ್ಲಿ ವಿಡಿಯೋ ಗೇಮ್ ಆಡುವುದರ ಮೂಲಕ ಹಸಿರಾಗಿಸಬಹುದು. ವಿಡಿಯೋ ಗೇಮ್ ಅನ್ನು ಕಂಪ್ಯುಟರ್’ನಲ್ಲಿ ಆಡಬಹುದು. ವಿಡಿಯೋ ಗೇಮ್ File ಗಳು NES (*.nes) ಫೈಲ್ ಆಗಿರುತ್ತವೆ, ಇವನ್ನು ತಾವು http://rom-world.com/dl.php?name=Nintendo&letter=A ದಿಂದ ಡೌನ್-ಲೋಡ್ ಮಾಡಿಕೊಳ್ಳಬಹುದು.

ಮಗುವಿನ ಪ್ರಶ್ನೆಗೆ ಉತ್ತರಿಸಲು ಸಹಾಯ ಮಾಡ್ತೀರಾ

ನನ್ನ ಮಗಳು ಬೆಳೆಯುತ್ತಿದ್ದಾಳೆ . ಹಾಗೆ ಅವಳ ಕುತೂಹಲ, ಎಲ್ಲವನ್ನೂ ತಿಳಿಯಬೇಕೆಂಬ ಹಂಬಲವೂ.
ಕೆಲವೊಮ್ಮೆ ಅವಳು ಕೇಳಿವ ಪ್ರಶ್ನೆಗಳಿಗೆ ನಾನು ಉತ್ತರಿಸುವ ರೀತಿ ಅವಳಿಗೆ ಅರ್ಥವೇ ಆಗೋದಿಲ್ಲ
ಒಂದಷ್ಟು ಪ್ರಶ್ನ್ಗೆಗಳು

ನಲ್ಲಿಯಿಂದ ನೀರು ಯಾಕೆ ಕೆಳಗೆ ಬೀಳುತ್ತದೆ ಯಾಕೆ ಮೇಲೆ ಹೋಗೋದಿಲ್ಲ.

ಹೀಗೇ ಸುಮ್ಮನೆ...

ಪತ್ರಿಕೆಗಗಳಲ್ಲಿ, ಇಂಟರ್ ನೆಟ್ ನಲ್ಲಿ ಬರವಣಿಗೆಗಳಿಗೇನೂ ಕೊರತೆ ಇಲ್ಲ. ಆದರೆ ನಾವು ಯಾಕಾಗಿ ಬರೆಯುತ್ತೇವೆ? ತಲೆ ಕೆಡಸಿಕೊಂಡು ಬರೆಯುವ ನನ್ನ ಮಿತ್ರರು ಸ್ವಲ್ಪ ನಮ್ಮ ತಲೆ ಒಳಗೆ ಏನಿದೆ? ಅಂತಾ ಹಂಚಿಕೊಳ್ಳುವಿರಾ?

ಆತ್ಮ ಕಥೆ - ಭಾಗ ೧

ನನ್ನ ಹಿಂದಿನ ಬರಹದ ಪ್ರತಿಕ್ರಿಯೆಗಳಲ್ಲಿ ಕೆಲವು ನನ್ನನ್ನು ಚಿಂತನೆಗೆ ಹಚ್ಚಿದವು. ಅದರ ಫಲವೇ ಈ ಬರಹ. ದೇಹ ಮತ್ತು ಆತ್ಮಗಳ ವಿಷಯದಲ್ಲಿ ಇದು ಕೇವಲ ನನ್ನ ಥಿಯರಿ. ತಪ್ಪೆನಿಸಿದರೆ ಹೆಚ್ಚು ತಿಳಿದವರು ಬೇಕಾದರೆ ಸಂವಾದಿಸಿ, ಸರಿಪಡಿಸಿ.

ನಾಯಿ ಸಾಕುವ ನಾಯಿ ಪಾಡು......

‘ನಾಯಿ ಮನೆಕಾಯುತ್ತದೆ. ತಂಗಳನ್ನೂ ಅಮೃತವೆನ್ನುವಂತೆ ಉಣ್ಣುತ್ತದೆ. ಎಂದೆಂದೂ ಮನೆಯ ಸುತ್ತಳತೆಯಲ್ಲೇ ಇದ್ದು ಹೋಗಿ ಬರುವವರ ನಿಗ ನೋಡುತ್ತದೆ. ಬೇಜಾರಿನ ಘಳಿಗೆಗಳಲ್ಲಿ, ಸಂತಸದ ಸಂದರ್ಭಗಳಲ್ಲೂ ಮನೆಯ ಯಜಮಾನನ ಕಾಲ ಬುಡದಲ್ಲೇ ಇದ್ದು ಆ ಕ್ಷಣಗಳ ಸಾಕ್ಷಿಯಾಗುತ್ತದೆ....'

ನಾಯಿಯ ಮೇಲೆ ಪ್ರಬಂಧ ಬರೆಯಲು ತಿಣುಕುತ್ತಿದ್ದ ನನ್ನ ಚಿಕ್ಕ ಮಗನಿಗೆ ಇಷ್ಟು ವಿವರ ಕೊಟ್ಟದ್ದೇ ತಪ್ಪಾಗಿಬಿಟ್ಟಿತು. ಪ್ರಬಂಧ ಬರೆಯುವುದನ್ನು ಅಷ್ಟಕ್ಕೇ ಬಿಟ್ಟವನೇ ತನಗೊಂದು ನಾಯಿಮರಿ ಬೇಕೇ ಬೇಕೆಂದು ಹಟ ಹಿಡಿದು ಕುಳಿತು ಬಿಟ್ಟ. ಸಾಮ, ಬೇಧ, ಮುಗಿದು ದಂಡನೆಯ ತುರೀಯಕ್ಕೆ ನಾನಿಳಿದರೂ ಅವನು ಜಪ್ಪಯ್ಯ ಅನ್ನದೇ ನಾಯಿಯ ಧ್ಯಾನದಲ್ಲೇ ಊಟ, ತಿಂಡಿಗಳನ್ನು ಬಿಟ್ಟು ಸತ್ಯಾಗ್ರಹದ ಹಾದಿ ತುಳಿದ. ಎಷ್ಟಾದರೂ ಹೆತ್ತ ಕರುಳು. ಇವಳೂ ಮಗನ ಪರವಾಗಿ ನಿಂತಳು. ಇಷ್ಟೂ ದಿನ ನನ್ನೆದುರು ನಿಲ್ಲಲೂ ಹೆದರುತ್ತಿದ್ದ ನನ್ನ ಮಗಳೂ ತಮ್ಮನ ಪರವಾಗಿ ವಾದಿಸತೊಡಗಿದಳು.