ಅಸಿಸ್ಟೆಂಟ್ - ಸಬ್ ಇನ್ಸ್ಪೆಕ್ಟರ್, ’ತುಕಾರಾಮ್ ಒಮ್ಲೆ,” ಜೀವವನ್ನೂ ಲೆಕ್ಕಿಸದೆ, ಆತಂಕಿ, ಕಸಬ್ ನನ್ನು ಪೋಲೀಸರಿಗೆ ಹಿಡಿದುಕೊಟ್ಟು, ಅಮರರಾದರು !

ಅಸಿಸ್ಟೆಂಟ್ - ಸಬ್ ಇನ್ಸ್ಪೆಕ್ಟರ್, ’ತುಕಾರಾಮ್ ಒಮ್ಲೆ,” ಜೀವವನ್ನೂ ಲೆಕ್ಕಿಸದೆ, ಆತಂಕಿ, ಕಸಬ್ ನನ್ನು ಪೋಲೀಸರಿಗೆ ಹಿಡಿದುಕೊಟ್ಟು, ಅಮರರಾದರು !

ಬರಹ

'ತುಕಾರಾಮ್ ಒಮ್ಲೆ, ಆ ಕರಾಳ-ದಿನ-೨೬/೧೧ ರಂದು ಆತಂಕವಾದಿ, ಕಸಬ್ ನನ್ನು ಜೀವಂತವಾಗಿ ಸೆರೆಹಿಡಿಯಲು ತಮ್ಮ ತನುವನ್ನೇ ನೀಗಿದ ಅಸಮಾನ್ಯ ಪೋಲೀಸ್ ಪೇದೆ. ಇವರ ಸಹಾಯವಿಲ್ಲದಿದ್ದಲ್ಲಿ, ಜೀವಂತವಾಗಿ ಆತಂಕವಾದಿ ಕಸಬ್, ಮುಂಬೈ ಪೋಲೀಸರಿಗೆ ಸಿಗುತ್ತಿರಲಿಲ್ಲ. ಈ ವಿಷಯವನ್ನು ವರದಿಮಾಡಿರುವುದು, ಇಂದಿನ ’ಮುಂಬೈ ಟೈಮ್ಸ್ ಪತ್ರಿಕೆ.” ರಿಪೋರ್ಟರ್, ದೀಪ್ತಿಮನ್ ತಿವಾರಿ, ಹೀಗೆ ದಾಖಲಿಸಿದ್ದಾರೆ. ......ಓದಿ.

ಮುಂಬೈನ ಗಿರ್ಗಾಮ್ ಚೌಪಾತಿಯಲ್ಲಿ ಡ್ಯೂಟಿಯಲ್ಲಿದ, ಒಬ್ಬ ಸಬ್ ಇನ್ ಸ್ಪೆಕ್ಟರ್, ತುಕಾರಾಮ್ ಒಮ್ಲೆ ಯವರು, ಬೀಚಿ ನಲ್ಲಿದ ಜನಸಂದಣಿಯನ್ನು ನಿಯಂತ್ರಿಸುವ ಕೆಲಸದಲ್ಲಿ ತೊಡಗಿದ್ದರು.

ಅಸಿಸ್ಟೆಂಟ್ - ಸಬ್ ಇನ್ಸ್ಪೆಕ್ಟರ್ , ತುಕಾರಾಮ್ ಒಮ್ಲೆ, ನವೆಂಬರ್ ೨೭ ರ ನಡುರಾತ್ರಿಯಲ್ಲಿ, ಗನ್ , ಹ್ಯಾಂಡ್ ಗ್ರೆನೇಡ್ ಗಳ ಮಳೆಗರೆಯುತ್ತಿದ್ದ , ಆತಂಕಿಗಳಿಗೆ ದೊಡ್ಡಸವಾಲಾದರು. ತಮ್ಮ ಬಳಿ, ಏನೂ ಆಯುಧವಿಲ್ಲದಿದ್ದರೂ, ತಾವೇ ಮುಂದಾಗಿನುಗ್ಗಿ, ತಮ್ಮ ಶಕ್ತಿಯನ್ನೇಲ್ಲಾ ಸೇರಿಸಿ, ಆತಂಕಿಗಳನ್ನು ಮುಂಬೈ ನ ಪೋಲೀಸರಿಗೆ ಹಿಡಿದುಕೊಡಲು ಸಹಾಯಮಾಡಿದ್ದರು. ಆನಂತರ, ಜನರ ಸಮೂಹವೇ ಕಸಬ್ ನನ್ನು ಮುತ್ತಿ ಸೆರೆಹಿಡಿಯಿತು ! ಆದರೆ ಈ ಮಹಾಸಾಹಸ-ಕಾರ್ಯದಲ್ಲಿ ಅವರಿಗೆ ಬಡಿದ ೫ ಗುಂಡುಗಳ ನೋವು, ’ ಒಮ್ಲೆಯವರಿಗೆ,’ ತಿಳಿದದ್ದು, ಈ ಸಾಹಸಕಾರ್ಯದ ನಂತರವೇ ! ಅವರು ಮೂರ್ಛಿತರಾದರು, ಹಾಗೂ ಮೃತರಾದರು !

ಒಮ್ಲೆಯವರು, ಸತಾರಾ ನಗರದ, ಒಬ್ಬರೈತರ ಮನೆಯಲ್ಲಿ ಜನಿಸಿದ್ದರು. ಅವರ ಅಣ್ಣಂದಿರು, ಇಬ್ಬರು. ಒಬ್ಬ ತಂಗಿಯೂ ಇದ್ದಾಳೆ. ಯಾವತ್ತೂ ಬಂದೂಕವನ್ನು ಹಿಡಿದು, ಗುಂಡಿನ ಮಳೆಗರೆಯಲು ಅವಕಾಶಸಿಕ್ಕದಿದ್ದರೂ, ೨೭ ರದಿನದಂದು ಒಮ್ಲೆಯವರು ಮಾಡಿದ ಸಾಹಸಕಾರ್ಯ, ಅವರ ಜೀವನದ ದಿನಚರಿಯಲ್ಲಿ, ಹಾಗೂ ಮುಂಬೈ ಪೋಲೀಸರ ದಿನಚರಿಯಲ್ಲಿ ದಾಖಲುಮಾಡಲು ಯೋಗ್ಯವಾದದ್ದು !

೨೭ ರ ರಾತ್ರಿ ಸುಮಾರು, ೧೨-೧೫ ರ ಹೊತ್ತಿನಲ್ಲಿ, ಒಂದು ಸ್ಕೋಡಾವ್ಯಾನ್ ನ್ನು ಟೆರೆರಿಸ್ಟ್ ಗಳು ಅಪರಿಹರಿಸಿರುವ ವಿಚಾರದ ಬಗ್ಗೆ, ಪೋಲೀಸರಿಗೆ, ವೈರ್ಲೆಸ್ ಮೆಸೇಜ್ ಬಂತು. ಅ ಗುಂಪಿನಲ್ಲಿ ಒಮ್ಲೆಯವರೂ ಇದ್ದರು. ಅದು, ಮೆರಿನ್ ಲೈನ್ಸ್, ಕಡೆಧಾವಿಸುತ್ತಿರುವ ವಿಚಾರ ತಿಳಿಯಿತು. ಸಬ್ ಇನ್ಸ್ಪೆಕ್ಟರ್, ಭಾಸ್ಕರ್ ಕದಮ್, ಸಂಜಯ್ ಗೋವಿಲ್ಕರ್, ಹೇಮಂತ್ ಬವಧಂಕರ್, ತಮ್ಮ ತಮ್ಮ ಪೊಸಿಶನ್ ಗಳಲ್ಲಿ ಕಾಯುತ್ತಿದ್ದರು. ಆದರೆ, ಒಮ್ಲೆಯವರು, ಒಂದು ಜಾಗದಲ್ಲಿ ಬಚ್ಚಿಟ್ಟುಕೊಂಡು ಕಾಯುತ್ತಿದ್ದರು

೧೨-೩೦ ಕ್ಕೆಸರಿಯಾಗಿ ಸ್ಕೋಡಾಗಾಡಿ ಅಲ್ಲಿಗೆ ಧಾವಿಸಿತು. ವೇಗವಾಗಿ ಬಂದ ಗಾಡಿ ಸರಕ್ಕನೆ, ಒಮ್ಲೆಯವರ ಮುಂದೆಯೇ ಬಂದು ನಿಂತಿತು. ತಕ್ಷಣ ಓಮ್ಲೆಯವರು, ಮಿಂಚಿನಂತೆ, ಆತಂಕಿಯಮೇಲೆ ಹಾರಿದರು. ಕಸಬ್, ಎರಡುಕಾಲುಗಳ ಮಧ್ಯೆಇಟ್ಟುಕೊಂಡಿದ್ದ ಮೆಶಿನ್ ಗನ್ ತೆಗೆದುಕೊಂಡು, ತಾನು ಪೋಲೀಸರಿಗೆ ಶರಣಾಗುವ ನಾಟಕ ಮಾಡುತ್ತಿದ್ದಂತೆಯೇ, ದಿಢೀರನೆ ಎದ್ದು ನಿಂತು, ಜನರಮೇಲೆ, ಗುಂಡಿನಮಳೆಗರೆದನು. ಆಗಲೇ ಒಮ್ಲೆಯವರಿಗೆ ೫ ಗುಂಡುಗಳು ತಗುಲಿ, ಅಪಾರ ರಕ್ತ-ಸ್ರಾವವಾಗುತ್ತಿದ್ದರೂ ಲೆಕ್ಕಿಸದೆ, ಅವರು ಹಾರಿಬಂದು, ಕಸಬ್ ನನ್ನು ಬಿಗಿಯಾಗಿ ಅಪ್ಪಿ-ಹಿಡಿದುಕೊಂಡರು. ಕಾರನ್ನು ನಡೆಸುತ್ತಿದ್ದ, ’ ಇಸ್ಮೇಲ್ ಖಾನ್,’ ನನ್ನು, ಪೋಲೀಸರು ಗುಂಡಿನೇಟಿನಿಂದ ಹೊಡೆದುರುಳಿಸಿದರು. ನಂತರ, ಬವಧಂಕರ್, ಮತ್ತು ಇತರ ಪೋಲೀಸ್ ಅಧಿಕಾರಿಗಳ ಸಹಾಯದಿಂದ, ಹಾಗೂ ಅಲ್ಲಿನೆರೆದಿದ್ದ, ಪ್ರಚಂಡ ಜನಸ್ತೋಮದ ಸಹಕಾರದಿಂದ, ಕಸಬ್ ನನ್ನು ಜೀವಸಹಿತ ಹಿಡಿದು, ಅವನ ಪಾಕೀಸ್ತಾನದ ಹಿನ್ನೆಲೆಯನ್ನು ಅವನಬಾಯಿನಿಂದಲೇ ಹೊರಡಿಸಲು ಅನುವುಮಾಡಿಕೊಟ್ಟರು. ಇದೊಂದು ಅದ್ಭುತಕಾರ್ಯಗಳಲ್ಲೊಂದು! ಕಸಬ್ ಆನಂತರ ಕೊಟ್ಟಮಾಹಿತಿಗಳು, ಕೆಲವು ನಿಜ. ಕೆಲವು ಸುಳ್ಳಿರಬಹುದು. ಏನೇಆಗಲಿ, ಪಾಕೀಸ್ತಾನದ ಆತಂಕವಾದವನ್ನು ವಿಶ್ವದ ಜನರ ಸಮ್ಮುಖದಲ್ಲಿ ಪ್ರಸ್ತುತಪಡಿಸುವಲ್ಲಿ ಅವು, ಬಹು-ಪ್ರಮುಖಪಾತ್ರವನ್ನು ಹೊಂದಿವೆ. ೨೬/೧೧ ರ, ಆತಂಕಕಾರಿಗಳ ಯೋಜನೆಗಳ ನೈಜತೆಯನ್ನು, ಸಾಬೀತುಮಾಡಿವೆ.

ಈ ಕೊಂಡಿಯನ್ನು ಅನುಸರಿಸಿ :

http://epaper.timesofindia.com/daily/skins/MM/navigator.asp?login=default

’ಮುಂಬೈ ಮಿರರ್” ಒಂದು ಅಸಮಾನ್ಯ ಪತ್ರಿಕೆಯಾಗಿ ಕಾರ್ಯಭಾರವಹಿಸಿದೆ. ಅದು ನಮ್ಮ ಸಮಾಜದ ದುಷ್ಟಶಕ್ತಿಗಳನ್ನು, ಸಾರ್ವಜನಿಕರ, ಸರ್ಕಾರದ, ಎದುರಿಗೆ ತರುವಲ್ಲಿ ಮಾಡುತ್ತಿರುವ ಪತ್ರಿಕಾ- ಸೇವೆ, ನೆನೆಯಲು ಅರ್ಹವಾಗಿದೆ :

'ಮುಂಬೈ ಮಿರರ್', ಈಗಾಗಲೇ ಓದುಗರೆಲ್ಲರ ಮನವನ್ನು ಗೆದ್ದಿರುವ ಪತ್ರಿಕೆಗಳಲ್ಲಿ ಪ್ರಮುಖವಾದದ್ದು. ಇದು 'ಟೈಮ್ಸ್ ಆಫ್ ಇಂಡಿಯ' ಜೊತೆಗೆ
'ಸಪ್ಲಿಮೆಂಟ್' ತರಹ ಬರುತ್ತಿತ್ತು. ಈಗಲೂ ಬರುತ್ತಿದ್ದರೂ ಅದರ ಘನತೆ ನೂರೂ-ಪಟ್ಟು ಹೆಚ್ಚಿದೆ. ಈ ಪತ್ರಿಕೆಯಲ್ಲಿ ಪ್ರಕಟವಾಗುವ, 'ಇನ್ವೆಸ್ಟಿಗೇಟೀವ್ ಲೇಖನಗಳು', ವಿಶೇಷಮಾಹಿತಿ ಸಂಗ್ರಹಗಳು, ತಾಜಾಸುದ್ದಿಗಳು, ಹಾಗೂ ಸುದ್ದಿಯನ್ನು ದಾಖಲಿಸುವಾಗ, ಮತ್ತೆ ಪ್ರಚುರಪಡಿಸುವಾಗ, ಮುಚ್ಚುಮರೆಯಿಲ್ಲದ ಪಾರದರ್ಶಿಕತೆ, ಮತ್ತು ನಂಬಿಕೆಗೆ ಅರ್ಹವಾದ ರಿಪೋರ್ಟ್ ಗಳು- ಇದರ ಶ್ರೇಯಸ್ಸಿಗೆ ಕಾರಣ ! ಈ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಗಳಿಂದ ಹಲವಾರು ಸುಧಾರಣೆಗಳೂ ಸಾರ್ವಜನಿಕರ ಹಾಗೂ ಸರ್ಕಾರಿವಲಯಗಳಲ್ಲಿ ಅಗಿರುವುದನ್ನು ಗಮನಿಸಬಹುದು. ಅಂತಹ ಅನೇಕಾನೇಕ ಉದಾಹರಣೆಗಳನ್ನು ಇಲ್ಲಿ ಉದ್ಧರಿಸಬಹುದು. ಅವುಗಳಲ್ಲಿ ಪ್ರಮುಖವಾದ ಕೆಲವಲ್ಲಿ :

೧. ಲಂಚಪಡೆದು, ಮೆಡಿಕಲ್ ಸರ್ಟಿಫಿಕೇಟ್ ಮಾರುತ್ತಿದ್ದ ಡಾಕ್ಟರ್ ಒಬ್ಬರು, ಸಿಕ್ಕುಬಿದ್ದರು.

೨. ಮುಂಬೈನ ಕೋಟೆ ಪ್ರದೇಶದ, 'ಸೈಫಿ ಆಸ್ಪತ್ರೆ,' ಯಲ್ಲಿ ಐ. ಸಿ, ಯು ನಲ್ಲಿ ಕೆಲಸಮಾಡುತ್ತಿದ್ದ ಡ್ಯೂಟಿ ಡಾಕ್ಟರ್, ಒಬ್ಬ ಫೇಕ್ ಡಾಕ್ಟರಾಗಿದ್ದರೇಬುದು ತಿಳಿದದ್ದು, ಮಿರರ್ ಸುದ್ದಿಗಾರರಿಂದ ! ನೋಡಲು ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ಈತ ಅದನ್ನೇ, ತನ್ನ ಮೋಸಗಾರ ಕೆಲಸಕ್ಕೆ ಬಂಡವಾಳ ಮಾಡಿಕೊಂಡು, ಕೆಲಸಮಾಡಿದ್ದರು. 'ಮುಂಬೈ ಮಿರರ್' ನಲ್ಲಿ ಪ್ರಕಟವಾದ ಸುದ್ದಿಯನಂತರ, ತಲೆತಪ್ಪಿಸಿಕೊಂಡು, ಓಡಿಹೋದ ಅವರನ್ನು ಪೋಲೀಸ್ ಹಿಡಿದು ಬಂಧಿಸಿದ್ದಾರೆ. ಅವರು ಎಷ್ಟು ಚೆನ್ನಾಗಿ ತಮ್ಮ ವೃತ್ತಿಯಲ್ಲಿ ಪಳಗಿದ್ದರೆಂದರೆ, 'ಹ್ಯೂಮನ್ ಅನಾಟೊಮಿಯ ಬಗ್ಗೆ' ಅವರಿಗೆ ಏನೂ ತಿಳಿದಿರಲಿಲ್ಲ. ಅಲ್ಲಿಯೇ ಕೆಲಸಮಾಡುತ್ತಿದ್ದ ಲೇಡಿ ಡಾಕ್ಟರೊಬ್ಬರನ್ನು ಪಟಾಯಿಸಿ, ಮದುವೆಯೂ ಆದರು. ನಂತರ ನಿಧಾನವಾಗಿ ಆಕೆಯಿಂದಲೇ ಗುಟ್ಟುಗಳೆಲ್ಲಾ ಬಯಲಾಯಿತು. ಅದನ್ನು ಮೊಟ್ಟಮೊದಲು, ತನಿಖೆಮಾಡಿ ಖಚಿತಪಡಿಸಿಕೊಂಡು ದಾಖಲುಮಾಡಿದ ಶ್ರೇಯಸ್ಸು, 'ಮುಂಬೈ ಮಿರರ್ ಗೇ ಸೆರಬೇಕು. ಇಂತಹ ಹಲವಾರು ಸುದ್ದಿಗಳು ಪೋಲೀಸರಿಗೆ ಸಹಾಯಕವಾಗಿವೆ.

೩. ಈಗ, ತೀರಾ ಹೊಸದೆಂದರೆ, ಚಿತ್ರಕಾರ, 'ಸೆಬ್ಯಾಸ್ಟಿಯನ್ ಡಿಸೌಝ' ರವರ, ಆತಂಕವಾದಿ, ನರಮೇಧಕ, ಅಝಮಲ್ ಕಸಬ್ ನ ಚಿತ್ರವನ್ನು ತೀರ-ಸಮೀಪದಿಂದ ಛಾಯಾಗ್ರಹಣಮಾಡಿದ ಸುದ್ದಿ ! 'ಸೆಬ್ಯಾಸ್ಟಿಯನ್ ಡಿಸೌಝ' ರವರಿಗೆ ನಮ್ಮೆಲ್ಲ ಮುಂಬೈಕರ್ ಗಳ ವತಿಯಿಂದ ಧನ್ಯವಾದಗಳು, ಅವರ ಸಹೋದ್ಯೋಗಿಗಳಿಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು.

ಹಿಂದೆ, ಆರ್. ಕೆ. ಕಾರಂಜೀಯರವರ, 'ಬ್ಲಿಟ್ ಝ್' ಪತ್ರಿಕೆ, ಇಂತಹ ಕೆಲಸವನ್ನು ಮಾಡುತ್ತಿತ್ತು. ಬೆಂಗಳೂರಿನಲ್ಲಿ ’ಲಂಕೇಶ್ ಪತ್ರಿಕೆ,” ಇನ್ನೂ ಮುಂತಾದವು, ಹೆಸರುಮಾಡಿವೆ. ಆದರೆ, ಈರಂಗದಲ್ಲಿ ಯಶಸ್ಸನ್ನು ಸಾಧಿಸುವುದು, ಸುಲಭಸಾಧ್ಯವಲ್ಲ.

’ಮುಂಬೈ ಮಿರರ್ ’ ಪತ್ರಿಕೆ ದಕ್ಷರಾದ ನಿಸ್ವಾರ್ಥ-ಸುದ್ದಿಗಾರರರ ಪಡೆಯನ್ನು ಹೊಂದಿದೆ. ಮುಂಬೈ ನ ತಾಜ್ಮಹಲ್, ಒಬೆರಾಯ್, ನಾರಿಮನ್ ಕಟ್ಟಡಗಳಲ್ಲಾದ ವಿಧ್ವಂಸಕ- ಕೃತ್ಯಗಳನ್ನು ಮುಂಬೈ ಮಿರರ್ ನ , ನೀಲೇಶ್ ವೈರ್ಕರ್, ರಾನಾ ಚಕ್ರಬೊರ್ತಿ, ಸತೀಶ್ ಮಲವಡೆ, ಸೆಬ್ಯಾಸ್ಟಿಯನ್ ಡಿಸೌಝ, ರಾಜುಶಿಂಧೆ, ಆಶೀಶ್ ರಾಜೆ, ದೀಪಕ್ ತುರ್ಬೇಕರ್, ಸಚಿನ್ ಹರಲ್ಕರ್, ಅವರೆಲ್ಲಾ ಚೆನ್ನಾಗಿ ಅಲ್ಲಿ ನಡೆದ ವಿದ್ಯಮಾನಗಳನ್ನು ಯಶಸ್ವಿಯಾಗಿ ದಾಖಲಿಸಿ, ವರದಿಮಾಡುವ ಕೆಲಸವನ್ನು ಅತ್ಯಂತ ಸಮರ್ಪಕವಾಗಿ, ನಿಭಾಯಿಸಿದ್ದಾರೆ.

’ಮುಂಬೈ ಮಿರರ್ ಪತ್ರಿಕೆ ’ ಯ ಶೀರ್ಷಿಕೆಯ ಹೆಸರು :

'Terror Eyes'-Friday, December,26, 2008

ಈ ಕೊಂಡಿಯ ಲೇಖನವನ್ನು ದಯಮಾಡಿ ಓದಿ :

http://epaper.timesofindia.com/daily/skins/MM/navigator.asp?login=default