ಜೀವನಕ್ಕೆ ಅರ್ಥವೂ ಉದ್ದೇಶವೂ

ಜೀವನಕ್ಕೆ ಅರ್ಥವೂ ಉದ್ದೇಶವೂ

ಒಮ್ಮೊಮ್ಮೆ ನಾವು ಜೀವನದ ಬಗ್ಗೆ ತಲೆಕೆಡಿಸಿಕೊಳ್ಳುವುದುಂಟು. ( ಅಥವಾ ಉಣ್ಣಲಿಕ್ಕಾಗಿ , ಉಡಲಿಕ್ಕಾಗಿ ... ಮತ್ತೇತಕ್ಕೋ ಅತ್ತರಂತೆ! )
ಎಲ್ಲರಿಗೂ ಸಮಾಧಾನಕರವಾದ ಉತ್ತರವೇನೂ ನನ್ನ ಹತ್ತಿರ ಇಲ್ಲ .
ಆದರೆ ಒಬ್ಬ ಮಹನೀಯರು ಕಂಡುಕೊಂಡ ಉತ್ತರ ಇಲ್ಲಿದೆ . ಇದನ್ನೂ ಪರಿಶೀಲಿಸಬಹುದು.

'' ಸಂಸ್ಕಾರಗಳು ನಮ್ಮ ಜೀವನದ ಗುರಿಯನ್ನು ನಿರ್ಣಯಿಸುತ್ತವೆ . ಈ ಸಂಸ್ಕಾರಗಳು ಅನೇಕ ಕಾರಣಗಳಿಂದ ಆಗುತ್ತವೆ.
ಹಿಂದಿನ ಜನ್ಮಗಳ ಸಂಸ್ಕಾರಗಳು ಕೆಲವು .
ತಾಯ್ತಂದೆಗಳ ರಕ್ತದಿಂದ ಬಂದವು ಕೆಲವು .
ಕಾಲಮಾನದಿಂದಲೂ ಸುತ್ತಲಿನ ಪರಿಸ್ಥಿತಿಯಿಂದಲೂ ಉಂಟಾಗುವ ಸಂಸ್ಕಾರಗಳು ಕೆಲವು.
ಶಿಕ್ಷಣದ ಮೂಲಕ ಉಂಟಾಗುವವು ಕೆಲವು .
ಇವೆಲ್ಲವೂ ಆಯಾ ಜೀವನದ ಮೂಲಸ್ವರೂಪಕ್ಕನುಸರಿಸಿ ಬೇರೆ ಬೇರೆ ಜನರ ಮೇಲೆ ಬೇರೆಬೇರೆ ಪರಿಣಾಮವುಂಟುಮಾಡುತ್ತವೆ . ಅವು ಜೀವನಕ್ರಮವನ್ನೂ ಗುರಿಯನ್ನೂ ನಿಶ್ಚಯಿಸುತ್ತವೆ.

....ಮನುಷ್ಯನ ಹುಟ್ಟು ಬಹುಶ: ಒಂದೇ ಒಂದು ಸಂದೇಶ ಕೊಡಲು ... ಒಂದೇ ಒಂದು ಬಾಣ ಬಿಡಲು .... .
''

ಹಾಗಾದರೆ ಅದು ಯಾವುದು ? ನಮಗೆ ತಿಳಿವ ಬಗೆ ಹೇಗೆ ?

'' ನಮ್ಮಿಂದ ಯಾವ ಕಾರ್ಯವು ಆಗತಕ್ಕದ್ದೆಂದು ನಮಗಿಂತ ದೇವರಿಗೆ ಹೆಚ್ಚಿಗೆ ಗೊತ್ತು , ಆ ಕೆಲಸವನ್ನು ಅವನು ನಮ್ಮಿಂದ ಮಾಡಿಸಿಕೊಳ್ಳುತ್ತಾನೆ ''

Rating
No votes yet