ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಒಬ್ಬ ಧಡಿಯ ಮತ್ತು ನಮ್ಮ ಪಯಣ

ಮೊನ್ನೆ ಮೊನ್ನೆ ದೀಪಾವಳಿಯಂದು ನಾವೆಲ್ಲ ಮನೆಯವರು ಮೈಸೂರಿಗೆ ಹೋದೆವು ನಮ್ಮದೇ ಮಾರುತೀ ವ್ಯಾನಿನಲ್ಲಿ ಪುತ್ತೂರಿಂದ. ಮಡಿಕೇರಿ ತನಕ ಸಾಕೋ ಸಾಕು. ಚಂದ್ರನ ಕಡೆಗೆ ಸಾಗಿದ್ದೇವೆ. ಆ ಇಂದು ಮುಖದ ಮೇಲಿನ ಗುಂಡಿಗಳನ್ನೇ ನೆನಪಿಗೆ ತರುವ ಗುಂಡಿಗಳೋ ಗುಂಡಿಗಳು. ಒಂದು ಗುಂಡಿ ತಪ್ಪಿಸಿದರೆ ಇನ್ನೊಂದು ಅಲ್ಲಿ,, ಮತ್ತೊಂದು .. ಮಗದೊಂದು. ಯಾಕೆ ನಮ್ಮ ಜನಪ್ರತಿನಿಧಿಗಳಿಗೆ ಕಾಣುವುದಿಲ್ಲ? ವರ್ಷಗಳ ಕೆಳಗೆ ಸಂಪಾಝೆಯ ದಾರಿ ಬದಿಯ ನೂರಾರು ವರ್ಷಗಳಿಂದ ತಣ್ಣಗೆ ನೆರಳು ಕೊಡುತ್ತ ಸೊಂಪಾಗಿ ಬೆಳೆದ ಮರಗಳನ್ನೆಲ್ಲ ಕಡಿದ, ಕಡಿಯುತ್ತಿದ್ದ ರಭಸ ನೋಡಿದಾಗ ದಾರಿ ಸರಿಯಾಗಿ ಚತುಶ್ಪಥವೋ ಏನೋ ಎಲ್ಲ ಆಗುತ್ತದೆಂದು ತಿಳಿದಿದ್ದರೆ .. ಏನೂ ಆಗಿಲ್ಲ. ಆ ಮರ ಎಷ್ಟು ಜನರ ಮನೆಯ ಮಂಚವೋ, ಬಾಗಿಲು ದಾರಂದವೋ ಆಗಿ ಹೋಗಿರಬಹುದಲ್ಲ.. ಎನ್ನುವ ಆಲೋಚನೆ ಬಂದಾಗ ಮನಸ್ಸು ಭಾರವಾಯಿತು. ಮಡಿಕೇರಿ ದಾಟಿ ಕುಶಾಲನಗರದ ಬಳಿಕ ರಾಜ ಮಾರ್ಗ- ಇದ್ದರೆ ಹೀಗಿರಬೇಕು ಅನ್ನುವಂತ್ಯಿತ್ತು. ಪಟ್ಟ ಕಷ್ಟ ಮರೆಯಾಗಿ, ಎಲ್ಲ ಸರಿ ಇದೆ, ಎಂಥ ಸುಭಿಕ್ಷ ಎನ್ನುವ ಭಾವ.
ದೀಪಾವಳಿಯ ಸಂಬ್ರಮಗಳೆಲ್ಲ ಮುಗಿದು ಬೆಳ್ಲಂಬೆಳಗ್ಗೆ ಮೈಸೂರು ಬಿಟ್ಟು ಮನೆಯ ಕಡೆ ಹೊರಟೆವು. ಕಥೆ ಪ್ರಾರಂಭವಾಗುವುದೇ ಈಗ. ಅದೇನು?
ನೇರ ದಾರಿ. ಅಗಲ ರಸ್ತೆ. ವಾಹನ ದಟ್ಟಣೆ ಇಲ್ಲ. ಖುಷಿಯೋ ಖುಷಿ. ಅರುವತ್ತರ ಗಡಿ ದಾಟದ .. ಅಲ್ಲಲ್ಲ .. ದಾಟುವುದಕ್ಕೇ ಮರೆತು ಹೋದ ನನ್ನ ಕಾರು ನೂರರ ಗಡಿ ದಾಟಿ ಓಡುತ್ತಿತ್ತು. ಮನೆಯ ಕಡೆಗೆ. ಹಣಸೂರು ದಾಟಿ ಹತ್ತು ಕಿಮೀ ಬಂದಿದ್ದೆವು. ಒಂದು ದೊಡ್ದ ಉಬ್ಬು. ವ್ಯಾನ್ ಹಾರಿತು. ಬೀಳಲಿಲ್ಲ. ಎಂಜಿನ್ ನಿಂತಿತು, ಮತ್ತೆ ಎಂಜಿನ್ ಜೀವ ತಳೆಯಲೇ ಇಲ್ಲ .. ಏನು ಮಾಡಿದರೂ. ನನ್ನಾಕೆ. ಮಕ್ಕಳಿಗೆ ಆತಂಕ. ನನಗೋ ಇದನ್ನು, ಇವರನ್ನು ಏನು ಮಾಡಲಿ ಎಂಬ ಚಿಂತೆ !
ಆಗ ಬಂತು ಆ ಕಡೆಯಿಂದ ಕೆಂಪು ಮಾರುತಿ ವ್ಯಾನ್. ಧಡಿಯ ತಲೆ ಹೊರಗೆ ಚಾಚಿದ. ನಾನು ತೊಂದರೆ ಹೇಳಿದಾಗ ರಪ್ ಅಂತ ಬಂದ .. ಕೀ ಚಲಾಯಿಸಿದ "ಸರ್, ಟೈಮಿಂಗ್ ಬೆಲ್ಟ್ ಕಟ್ ಆಗಿದೆ. ನೀವೇನು ತಿಪ್ಪರ್ಲಾಗ ಹಾಕಿದರೂ ಹೊರಡದು. ನಾನು ಇವರನ್ನೆಲ್ಲ ಹುಣ್ಸೂರಿಗೆ ಬಿಟ್ಟು ಬರುತ್ತೇನೆ" ಅಂದ ಹೊರಟೇ ಬಿಟ್ಟ. ಹತ್ತು ನಿಮಿಷಗಳು ಯುಗವಾಗಿ ಕಳೆಯಿತು.
ಧಡಿಯ ಬಂದ. ತನ್ನೊಡನೆ ಐದಾರು ಸೈಕಲ್ ಟಯರುಗಳನ್ನೂ ತಂದಿದ್ದ. ನೋಡುವುದರೊಳಗೆ ಟಯರುಗಳನ್ನು ಒಂದರೊಳಗೊಂದರಂತೆ ಸಿಕ್ಕಿಸುತ್ತ ಜೋಡಿಸುತ್ತ ಸರಪಳಿ ಮಾಡಿ ನನ್ನ ವ್ಯಾನನ್ನು ಅವನದರ ಹಿಂಬಾಗಕ್ಕೆ ಸಿಕ್ಕಿಸಿದಾಗ ನನಗೆ ಆಶ್ಚರ್ಯ- ಥೇಟ್ ಎಡಿಸನ್, ಫ್ಯಾರಡೆಯಂತೆ ಆ ಕ್ಷಣ ನನಗೆ ಕಂಡ ಆ ಧಡಿಯ.
ಮತ್ತೆ ಹೊರಟಿತು - ಅಲ್ಲಿಂದ ನಿಧಾನಕ್ಕೆ ನಮ್ಮ ಮೆರವಣಿಗೆ ೧೫ಕಿಮೀ ದೂರದ ಪೆರಿಯಾ ಪಟ್ಣದೆಡೆಗೆ.
ಅಲ್ಲಿ ಪೇಟೆಯ ಹೊರವಲಯದಲ್ಲಿ ನಮ್ಮ ವಾಹನಗಳು ನಿಂತುವು. ನನ್ನಾಕೆಗೆ ಆತಂಕ. ನನಗೆ ಕತ್ತಲಾಗದೇ ಇದ್ದುದರಿಂದ ಜಗ ಗೆಲ್ಲಬಲ್ಲ ಧೈರ್ಯ!

ಆಯುರ್ವೇದ ಮತ್ತು ಆರೋಗ್ಯ

ಇವತ್ತಿನಿಂದ ಆಯುರ್ವೇದ ಶಾಸ್ತ್ರದಲ್ಲಿ ತಿಳಿಯಪದಿಸಲಾದ ಆರೋಗ್ಯಕರ, ಆರೋಗ್ಯವರ್ಧಕ ಮತ್ತು ಆರೋಗ್ಯ ರಕ್ಷಕ ಜೀವನ ವಿಧಾನ, ದಿನ ಚರ್ಯೆಗಳನ್ನು ಪ್ರಸ್ತುತಗೊಳಿಸುತ್ತೇವೆ.
ಪ್ರಸ್ತುತ ವಿಷಯದ ಬಗ್ಗೆ ಚರ್ಚೆ, ಪ್ರತಿಕ್ರಿಯೆ ಮತ್ತು ಸಲಹೆಗಳು ಮತ್ತು ಪೂರಕ ಮಾಹಿತಿಗಳು ನಿಮ್ಮಲ್ಲಿದ್ದರೆ ಒದಗಿಸಬಹುದು.

ಮತಾಂತರ ಮೂಲ

>ಅಜ್ಞಾನವೇ ಮತಾಂತರದ ಮೂಲವಯ್ಯ!

>ಭಯವೇ ಮತಾಂತರ ವಿರೋಧದ ಮೂಲವಯ್ಯ!

.................................................

ಇವತ್ತು ಅಸೃಶ್ಯತೆ ಇಲ್ಲ ಅಂತ ಹೇಳುವವರು... ಮುಗ್ಧರು. ಅವರು ಚೆನ್ನಾಗಿರಲಿ.

ಹಾಗೇನೇ ಮತಾಂತರದಿಂದ ನಮ್ಮ ದೇಶದ ನೆಮ್ಮದಿಗೆ ಏನೂ ದಕ್ಕೆ ಇಲ್ಲ ಅಂತ ಅನ್ನೋವ್ರು ಸಹಾ ಮುಗ್ಧರು. ಅವ್ರು ಚೆನ್ನಾಗಿರಲಿ.

ನ್ಯುಮರಾಲಜಿ ಮೂಲಕ ನಿಮ್ಮ ನೆಚ್ಚಿನ ನಾಯಕ ಯಾರು ಅಂತ ತಿಳಿದು ಕೊಳ್ಳಿ!

ಸಂಖ್ಯಾಶಾಸ್ತ್ರ ದ ಮೂಲಕ ನಿಮ್ಮ ಆದರ್ಶ / ಮೆಚ್ಚಿನ ನಾಯಕನ ಬಗ್ಗೆ ತಿಳಿದುಕೊಳ್ಳ ಬೇಕೆಂಬ ಆಸೆ ಇದೆಯೇ?

ಹಾಗದಾರೆ ಮುಂದೆ ಲೆಕ್ಕ ಮಾಡಿ.

>ಒಂದರಿಂದ ಒಂಬತ್ತರ ಒಳಗಿನ , ನಿಮಗೆ ತುಂಬಾ ಇಷ್ಟವಾದ ಅಂಕೆ ತಗೊಳ್ಳಿ.

>ಅದನ್ನ ಮೂರರಿಂದ ಗುಣಿಸಿ.

>ಬಂದ ಉತ್ತರಕ್ಕೆ ಮೂರನ್ನು ಕೂಡಿ.

>ಬಂದ ಉತ್ತರವನ್ನು ಮತ್ತೆ ಮೂರರಿಂದ ಗುಣಿಸಿ.

ಗುಡಿಯಾಚೆ

ದೇಗುಲದಲ್ಲಿ ದೇವರಿಗೆ ವಿಶೇಷ ಪೂಜೆ

ಚಂದನದ ಕಂಪು ಪಸರಿಸಿತ್ತು ಒಳಗೆಲ್ಲ.....

ಜಗಮಗಗುಡುವ ದೀಪದ ಬೆಳಕು...

ಜುಟ್ಟಿನ ಅರ್ಚಕರ ವೇದ ಘೋಷ....

ಗಂಟೆ ಝಾಗಟೆ ಗಳ ಝೇಂಕಾರ

ಜನರ ಭಕ್ತಿ ಪರವಶತೆ

ಒಂದೇ ಎರಡೇ ಹತ್ತು ಹಲವು

ವ್ಯೆಭವದ ಅವತಾರಗಳು.....

ಹೊರಗೆ ಬಿರು ಬಿಸಿಲಲ್ಲಿ ಕುರುಡು ಭಿಕ್ಶುಕಿ

ಅಳಿಸಲಾರದ ನಾನು

"ನಾನು ಹೋದರೆ ಹೋದೇನು"

ನುಡಿ-ಅದೆಷ್ಟು ಚಂದ!

ನಾನೂ ಯೋಚಿಸಿದೆ,
ಪ್ರೋಫೈಲ್ ನಲ್ಲಿ ನನ್ನ ವಿವರ ಅಳಿಸಿ ಬಿಡಬೇಕೆಂದು
ಕೂಡಲೆ ಹೊಳೆಯಿತು
ಇಂದು ಅಳಿಸಿಬಿಡಬಹುದು
ನಾಳೆ?
ಸಂಘ-ಸಂಸ್ಥೆಯವರು ಸನ್ಮಾನಕ್ಕೆ ಕರೆದಾಗ?

ದೊಡ್ದವರನು ಕಾಣ ಬೇಕಾದಾಗ?
ವಾಚ್ ಮನ್ ಗೆ ಕೊಡಬೇಕು ನನ್ನ ಚೀಟಿ
ಅದರಲಿರಲೇ ಬೇಕು..
ನನ್ನಲ್ಲಿ ಇರುವ-ಇಲ್ಲದ
ಎಲ್ಲಾ ಕ್ವಾಲಿಫಿಕೇಶನ್ ಗಳು

ಹೆಣ್ಣುಗ ಏನೀ ನಿನ್ನ ಪರಿ...

ಕಳೆದ ಒಂದು ತಿಂಗಳಿನಿಂದ ಮಾಧ್ಯಮದಲ್ಲಿ ಹಿಜಡಾಗಳದ್ದೇ ಸುದ್ದಿ. ನಮ್ಮ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಮಾಡಿದ ಖೋಜಾಗಳು ಪೊಲೀಸ್ ಠಾಣೆಯೊಂದಕ್ಕೆ ನುಗ್ಗಿ ಪ್ರವರ ಕೂಡ ಮಾಡಿದ್ದಾರೆ. ಹಲಸೂರು ಪೊಲೀಸ್ ಠಾಣೆಯಲ್ಲಿ ಕಳೆದ ಒಂದು ವರ್ಷದ ಹಿಂದೆ ಇಂತಹದ್ದೇ ಘಟನೆ ನಡೆದಿತ್ತು. ಅದಕ್ಕೆ ಕಾರಣವಿಷ್ಟೆ.

ಖೋಜಾ ಕಮಾಲ್..!

ಕಳೆದ ಒಂದು ತಿಂಗಳಿನಿಂದ ಮಾಧ್ಯಮದಲ್ಲಿ ಹಿಜಡಾಗಳದ್ದೇ ಸುದ್ದಿ. ನಮ್ಮ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಮಾಡಿದ ಖೋಜಾಗಳು ಪೊಲೀಸ್ ಠಾಣೆಯೊಂದಕ್ಕೆ ನುಗ್ಗಿ ಪ್ರವರ ಕೂಡ ಮಾಡಿದ್ದಾರೆ. ಹಲಸೂರು ಪೊಲೀಸ್ ಠಾಣೆಯಲ್ಲಿ ಕಳೆದ ಒಂದು ವರ್ಷದ ಹಿಂದೆ ಇಂತಹದ್ದೇ ಘಟನೆ ನಡೆದಿತ್ತು. ಅದಕ್ಕೆ ಕಾರಣವಿಷ್ಟೆ.