ಗುಡಿಯಾಚೆ

ಗುಡಿಯಾಚೆ

ಬರಹ

ದೇಗುಲದಲ್ಲಿ ದೇವರಿಗೆ ವಿಶೇಷ ಪೂಜೆ

ಚಂದನದ ಕಂಪು ಪಸರಿಸಿತ್ತು ಒಳಗೆಲ್ಲ.....

ಜಗಮಗಗುಡುವ ದೀಪದ ಬೆಳಕು...

ಜುಟ್ಟಿನ ಅರ್ಚಕರ ವೇದ ಘೋಷ....

ಗಂಟೆ ಝಾಗಟೆ ಗಳ ಝೇಂಕಾರ

ಜನರ ಭಕ್ತಿ ಪರವಶತೆ

ಒಂದೇ ಎರಡೇ ಹತ್ತು ಹಲವು

ವ್ಯೆಭವದ ಅವತಾರಗಳು.....

ಹೊರಗೆ ಬಿರು ಬಿಸಿಲಲ್ಲಿ ಕುರುಡು ಭಿಕ್ಶುಕಿ

ಬಗಲಲ್ಲಿ ಹಾಲುಗಲ್ಲದ ಹಸುಳೆ...

ಅರೆ ಬಿರಿದ ಮೊಗ್ಗಿನ ತುಟಿ ತೆರೆದು

ಬೆಳ್ಳನೆ ದಾಳಿಂಬೆ ಬಿಂಬಿಸುವಾಗ

ಒಳಗಿನ ಆ ದೇವರು ಇಲ್ಲಿ

ನಕ್ಕ ಹಾಗಿತ್ತು......