ಖೋಜಾ ಕಮಾಲ್..!

ಖೋಜಾ ಕಮಾಲ್..!

ಕಳೆದ ಒಂದು ತಿಂಗಳಿನಿಂದ ಮಾಧ್ಯಮದಲ್ಲಿ ಹಿಜಡಾಗಳದ್ದೇ ಸುದ್ದಿ. ನಮ್ಮ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಮಾಡಿದ ಖೋಜಾಗಳು ಪೊಲೀಸ್ ಠಾಣೆಯೊಂದಕ್ಕೆ ನುಗ್ಗಿ ಪ್ರವರ ಕೂಡ ಮಾಡಿದ್ದಾರೆ. ಹಲಸೂರು ಪೊಲೀಸ್ ಠಾಣೆಯಲ್ಲಿ ಕಳೆದ ಒಂದು ವರ್ಷದ ಹಿಂದೆ ಇಂತಹದ್ದೇ ಘಟನೆ ನಡೆದಿತ್ತು. ಅದಕ್ಕೆ ಕಾರಣವಿಷ್ಟೆ. ಕೋಮಲ ಎಂಬ ಹೆಣ್ಣುಗನನ್ನು ಪೊಲೀಸರು ಥಳಿಸಿದ್ದಾರೆ ಎಂಬುದು.

ಇನ್ನೂ ಒಂದು ಆಘಾತಕಾರಿ ವಿಚಾರವೆಂದರೆ 14 ವರ್ಷದ ಬಾಲಕನೊಬ್ಬನ್ನು ಹಿಜಡಾಗಳು ಅಪಹರಣ ಮಾಡಿ ಅಂಗ ಛೇಧ ಮಾಡಿಸಿ ಖೋಜಾ ಅಗಿ ಮಾರ್ಪಡಿಸಿರುವುದು. ಇದೊಂದು ಆಘಾತ ಎನಿಸಿದರೂ ಅವರನ್ನು ಹತ್ತಿರದಿಂದ ಬಲ್ಲವರಿಗೆ ಇದು ಅಚ್ಚರಿ ಎನಿಸುವುದಿಲ್ಲ. ಕಾರಣವಿಷ್ಟೆ... ಅವರ ಸಲುಗೆಗಾಗಿ ಹಲವು ಮಂದಿ ಹಾತೊರೆಯುತ್ತಿರುತ್ತಾರೆ. ಕೆಲವು ಆಟೋ ಡ್ರೈವರ್‌ಗಳು ಸದಾ ಇವರ ಸೇವೆಗೆ ನಿಂತಿರುತ್ತಾರೆ. ಇವರ ಸಕಲ ಕೆಲಸಗಳಿಗೆ ಹಿಜಡಾಗಳ ತನು ಮನ ಧನ ಅರ್ಪಿಸಿ ಬೆಂಬಲ ನೀಡ್ತಾರೆ.

ಸಂಪಿಗೆಹಳ್ಳಿ ಪೊಲೀಸ್ ಠಾಣೆ ಹಾಗೂ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇವರ ಸಂಖ್ಯೆ ತುಸು ಹೆಚ್ಚೆಂದರೆ ತಪ್ಪಿಲ್ಲ. ಬೆಳಿಗ್ಗೆ ಆಟೋಗಳನ್ನು ಹಿಡಿದು ರಿಂಗ್ ರಸ್ತೆ, ಹೆಬ್ಬಾಳ ಮೇಲ್ಸೇತುವೆಯಲ್ಲಿ ಇವರು ನಡೆಸುವ ಘನ ಕಾರ್ಯಗಳನ್ನು ವೀಕ್ಷಿಸಬಹುದು. ಅದರಲ್ಲೂ ಹಮಾಮ್‌ಗಳ ಹೆಸರಲ್ಲಿ ಇವರು ನಡೆಸುವ ಮೈದಂಧೆ ಹಾಗೂ ಸುಲಿಗೆ ಯಾರಿಗೆ ತಾನೆ ತಿಳಿದಿಲ್ಲ.

ಇವರಲ್ಲೂ ಬಹುಮುಖ್ಯವಾಗಿ 2 ವರ್ಗಗಳನ್ನು ಕಾಣಬಹುದು. ಒಂದು ತಂಡ ಕೇವಲ ಭಿಕ್ಷಾಟನೆ ಮಾಡಿಕೊಂಡು ಜೀವನ ನಡೆಸುತ್ತಾರೆ. ಇವರಿಗೆ ಹಣಗಳಿಸುವ ದುರುದ್ದೇಶ ಮಾತ್ರವಲ್ಲ ಸೌಂದರ್ಯ ಪ್ರಜ್ಞೆ ಕೂಡ ಅಷ್ಟಕಷ್ಟೆ.. ಇವರು ಪ್ರತಿನಿತ್ಯ ರಸ್ತಬದಿಯಲ್ಲಿ ಭಿಕ್ಷೆ ಬೇಡುವುದು, ನಿಗದಿತ ರಸ್ತೆಗಳ ಬದಿಯಲ್ಲಿನ ಅಂಗಡಿಗಳಲ್ಲಿ ಹಣ ಕೇಳಿ ಪಡೆಯುತ್ತಾರೆ.

ಇನ್ನು ಎರಡನೇ ವರ್ಗದಲ್ಲಿನ ಕಾರ್ಯವಂತು ಘೋರವಾದುದು. ಭಿಕ್ಷಾಟನೆ ಹೆಸರಲ್ಲಿ ಮಸಾಜ್ ಪಾರ್ಲರ್‌ಗಳನ್ನು ತೆರೆದು ಮೈದಂಧೆಯಲ್ಲಿ ತೊಡಗುತ್ತಾರೆ. ವಿಪರ್ಯಾಸವೆಂದರೆ ಹೆಣ್ಣುಗನ ಬಳಿ ಇವರು ಅದೆಂಥ ರತಿ ಸುಖ ಪಡೆಯುತ್ತಾರೆ ಎಂಬುದು. ಏಕೆಂದರೆ ಖೋಜಾ ಕೂಡ ಮೂಲತಃ ಗಂಡಾಗಿರುತ್ತಾನೆ. ಹಾಗಾಗಿ ಇವನಿಗೆ ಹೆಣ್ಣಿನ ಕೃತಕ ದೇಹ ಮಾತ್ರವಿದ್ದು ನಡತೆ, ಧ್ವನಿ ಮಾತ್ರ ಹೆಣ್ಣಿನದ್ದಾಗಿರುತ್ತದೆ. ಒಮ್ಮೆ ಹೆಬ್ಬಾಳ ಮೇಲ್ಸೇತುವೆ ಹಾಡುಹಗಲೇ ನಿಂತು ಗಮನಿಸಿ ತಮಗೂ ಸ್ಪಷ್ಟವಾಗುತ್ತದೆ. ಉಳಿದಂತೆ ಸೂರ್ಯ ಮರೆಯಾದ ತಕ್ಷಣ ಇವರು ಸುಣ್ಣ ಬಣ್ಣ ಬಳಿದ ಮುಖಗಳ ಜೊತೆ ಹೊರಬೀಳ್ತಾರೆ. ನೇರವಾಗಿ ಹೋಗಿ ರಸ್ತೆ ಬದಿ ನಿಂತು " ಹೇ ಬರ್ತೀಯಾ " ಎಂಬ ವಿಶಿಷ್ಟ ಧ್ವನಿ ಹಾಗೂ ದೇಹವನ್ನು ತೋರ್ಪಡಿಸಿ ಅಕರ್ಷಿಸುತ್ತಾರೆ. ಥೇಟ್ ಹುಡುಗಿ ತರ ರೆಡಿಯಾಗಿ ನಿಂತಿರುವ ಇವರ ಮುಂದೆ ಸುಂದರ ತರುಣಿಯನ್ನು ಇಳೆ ತೆಗೆಯಬೇಕು, ಹಾಗಿರ್ತಾರೆ. ಅಲ್ಲದೆ, ರಸ್ತೆ ಬದಿ ಭಿಕ್ಷೆ ಬೇಡುವುದರ ಜೊತೆ ಕಳ್ಳತನವೂ ಮಾಡ್ತಾರೆ. ಇದಕ್ಕೆ ನಿದರ್ಶನಗಳು ಅನೇಕ.

ಇವರ ಕಾರ್ಯ ಮಧ್ಯರಾತ್ರಿ ತನಕ ನಡೆಯುತ್ತದೆ. ಆ ಸಮಯದಲ್ಲಿ ಮನೆ ಸೇರುವ ತವಕದಲ್ಲಿರುವ ಆಟೋಗಳು ಸೇರಿದಂತೆ ಒಂಟಿ ವ್ಯಕ್ತಿಗಳನ್ನು ಹೆದರಿಸಿ ಹಣ ಕೀಳುವ ಕೆಟ್ಟ ಪ್ರವೃತ್ತಿ ಇಡೀ ಹೆಣ್ಣುಗ ಕುಟುಂಬಕ್ಕೆ ಕಳಂಕ ತಂದೊಡ್ಡಿದೆ. ಅದರಲ್ಲೂ ಇವರ ಉದ್ದಾರ ಮಾಡ್ತೀವಿ ಅಂತ ಕೆಲವು ಸಂಘಟನೆಗಳು ಹೋರಾಡ್ತಿವೆ. ಆದ್ರೆ ಉದ್ದಾರ ಆಗ್ತೀರುವರು ಯಾರೋ ಪಾಪ...

ನಾನು ಕೆಲವು ಹಿಜಡಾಗಳನ್ನು ಹತ್ತಿರದಿಂದ ಬಲ್ಲೆ. ಇವರು ಯಾರು ಹೆಣ್ಣಂತು ಅಲ್ಲ. ಬಹುತೇಕ ಗಂಡಸರು. ಬೆಳೆಯುತ್ತಾ ಹೆಣ್ಣಿನ ರೀತಿಯ ಲಕ್ಷಣಗಳು ಇವರನ್ನು ಹೊಕ್ಕುತ್ತವೆ. ಆನಂತರ ಇವರು ಕೆಲ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆದು ಕೃತಕ ಎದೆ ಉಬ್ಬುವ ರೀತಿ ಔಷಧಿ ಪಡೆಯುತ್ತಾರೆ. ಆದ್ರೆ ಇವರ ನಕಲುತನಕ್ಕೆ ಮರುಳಾಗಿ ಅನೇಕರು ಹೆಣ್ಣೆಂದೇ ನಂಬಿ ಮೋಸ ಹೋಗ್ತಾರೆ. ಸ್ವಲ್ಪ ಯಡವಟ್ಟಾದರೆ ಇವರ ಬಳಿಯಿರುವ ಗಡಿಯಾರ, ಮೊಬೈಲ್, ಹಣವೂ ಅವರ ಪಾಲಾಗ್ತವೆ. ಅಲ್ಲದೆ ಹೆಚ್ಚು ಮಾತಾಡಿದ್ರೆ ತಕ್ಕಶಾಸ್ತ್ರಿ ಕೂಡ ಉಂಟು.

ಇಷ್ಟಿದ್ದರೂ ಕೆಲವು ಗಂಡಸರು ಇವರ ಸಂಗವನ್ನೇ ಬಯಸುವುದು. ಅದಕ್ಕೆ ಕಾರಣವೇನೋ ನನಗೆ ಗೊತ್ತಿಲ್ಲ. ಗೊತ್ತಿದ್ರೆ ಹೇಳಿ..! ಆದ್ರೆ ಇವರು ಯಾರನ್ನಾದ್ರೂ ನಂಬಿದ್ರೆ ಪ್ರಾಣ ಕೂಡ ಕೊಡಬಲ್ಲರು. ಅಲ್ಲದೆ ನಂಬಿಕೆಗೆ ಅರ್ಹರಲ್ಲದವರಾದ್ರೆ ನಿಮ್ಮ ಗತಿ ಆ ಕೃಷ್ಣನಿಗೇ ಪ್ರೀತಿ ಅನ್ಬೇಕು...

- ಬಾಲರಾಜ್ ಡಿ.ಕೆ

Rating
No votes yet