ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಲರ್ನಿಂಗ್ ಸೆಂಟರ್ ಹೊಸ ರೂಪದಲ್ಲಿ

ಕನ್ನಡ ಲರ್ನಿಂಗ್ ಸೆಂಟರ್ ಯೋಜನೆ ೨೦೦೫ರಲ್ಲಿ ಸಂಪದದೊಟ್ಟಿಗೇ ಪ್ರಾರಂಭವಾದರೂ ಹಲವು ಕಾರಣಗಳಿಂದಾಗಿ ಅಷ್ಟಾಗಿ ಬೆಳೆಯಲಿಲ್ಲ. ಈ ಯೋಜನೆಯ ಉದ್ದೇಶ ಸುಲಭವಾಗಿ ಕನ್ನಡ ತಿಳಿದಿಲ್ಲದವರಿಗೆ ಕನ್ನಡ ಅಂತರ್ಜಾಲ ಮೂಲಕವೇ ಹೇಳಿಕೊಡುವುದು. ಮತ್ತೊಮ್ಮೆ, ಮತ್ತಷ್ಟು ಉತ್ತಮವಾಗಿ ಹೊರತರಬೇಕೆಂಬ ಆಕಾಂಕ್ಷೆ ಹೊತ್ತು ನವ ರೂಪದಲ್ಲಿ ಈಗ ನಿಮ್ಮ ಮುಂದಿದೆ:

ನೀವೂ ಭಾಗವಹಿಸಿ ಕನ್ನಡ ಹೇಳಿಕೊಡುವ ಪ್ರಯತ್ನದಲ್ಲಿ ಕೈ ಸೇರಿಸಬಹುದು.
ಭಾಗವಹಿಸುವುದು ಹೇಗೆ ಎನ್ನುವ ಕುರಿತು ಹೆಚ್ಚಿನ ಮಾಹಿತಿಗೆ [:http://sampada.net/contact|ಸಂಪದ ಲಿಸ್ಟಿಗೊಂದು ಮೇಯ್ಲ್ ಹಾಕಿ].

ಇದು ನಮ್ಮ ಬೆಂಗಳೂರು ವಿಶ್ವ ವಿದ್ಯಾನಿಲಯ !!!!!!!!!!!

BA, Bsc, Bcom, ಇದನ್ನು ಓದುತ್ತಿರುವ ಬೆಂಗಳೂರಿನ ವಿದ್ಯಾರ್ಥಿ ಹಾಗು ವಿದ್ಯಾರ್ಥಿನಿಯರು ತಮ್ಮ ವಿದ್ಯಾಭ್ಯಾಸದಲ್ಲಿ ಎದುರುಸುತ್ತಿರುವ ಸಮಸ್ಯೆ ಎಂದರೆ (RESULT) ಫಲಿತಾಂಶ.ನಾವು ಉತ್ತರ ಪತ್ರಿಕೆಯಲ್ಲಿ ಬರೆದಸ್ಟು ಅಂಕ ನಮ್ಮ ಫಲಿತಾಂಶದಲ್ಲಿ ಬರುವುದಿಲ್ಲ. ಸರಿಯಾದ ವೇಳೆ ಗೆ ಫಲಿತಾಂಶ ಬರುವುದಿಲ್ಲ. ಎಸ್ಟೋ ಜನರ ಫಲಿತಾಂಶ ಬಂದೆ ಇಲ್ಲ.

ಬಸ್ಸಿನಲ್ಲಿ ಸೀಟು ಸಿಕ್ಕಾಗ......

ನಮ್ಕಡೆ ಹಾಗೆನೇ.ಡ್ರೈವರ್ಗಳು ಬಸ್ ನಿಲ್ಸೋದು ಬಸ್ ಸ್ಟಾಂಡ್ಗಿಂತ ಹತ್ತು ಮೀಟರ್ ಮೊದಲು ಅಥವಾ ಹತ್ತು ಮೀಟರ್ ದೂರದಲ್ಲಿ. ಉದ್ಧೇಶವೇನೆಂದರೆ ಬಸ್ ಸದಾ ರಷ್ ಆಗಿರುವುದರಿಂದ ಜನ ಹತ್ತುವವರು ಕಡಿಮೆ ಆಗಲಿ ಎಂದು.ಬಸ್ ಸ್ಟಾಂಡ್ನಿಂದ ಓಡಿ ಬರುವಷ್ಟರಲ್ಲಿ ಬಸ್ ಹೊರಟಿರುತ್ತದೆ.ಇದರಿಂದ ಮುದುಕರನ್ನು ಹಾಗೂ ಹೆಂಗಸರನ್ನು ತಡೆಯಬಹುದೇ ಹೊರತು ಕಾಲೇಜಿಗೆ ಹೋಗುವ ನಮ್ಮಂತವರನ್ನಲ್ಲ..ನಾವು ಮೊದಲೇ ಸಿದ್ಧವಾಗಿರುತ್ತಿದ್ದೆವು.ಹೀಗಾಗಿ ಆವತ್ತು ಓಡಿ ಹೋಗಿ ಬಸ್ಸನ್ನು ಹಿಡಿದು ಒಂದು ಕಾಲನ್ನು ಬಾಗಿಲಿಲ್ಲದ ಬಸ್ಸಿನ ಮೆಟ್ಟಿಲಿನ ಮೇಲಿಡಲು ಸಫಲನಾದೆ.

ಭಾರತದ ಜನಸಂಖ್ಯಾಸಮಸ್ಯೆ ನಿಜವಾಗಿ ಅರಿವಿಗೆ ಬಂದಿದ್ದು ಆಗಲೇ.ಎಲ್ಲಿಂದ ಬರ್ತಾರೋ ಎಲ್ಲಿಗೆ ಹೋಗ್ತಾರೋ..ಇಲ್ರೀ ಬಸ್ಸಿನ ಬಾಗಿಲ ಮೇಲೆ ಇದನ್ನೆಲ್ಲ ಆಲೋಚನೆ ಮಾಡಕಾಗ್ತಾ ಇಲ್ಲ..ನಾನೀಗ ಒಂದು ಕಾಲಿನ ಮೇಲೆ ಬ್ಯಾಲೆನ್ಸ್ ಮಾಡಲು ಪ್ರತ್ನ ಮಾಡುವುದರ ಜೊತೆಗೆ ಜನ ವ್ಯೂಹವನ್ನು ಬೇಧಿಸಿ ಒಳ ಪ್ರವೇಶ ಮಾಡಬೇಕಾಗಿದೆ.ಬಸ್ಸು ಘಟ್ಟದಲ್ಲಿ ನಿಧಾನವಾಗಿ ಹೋಗುತ್ತಿತ್ತು. ಇದೇ ಸಮಯದಲ್ಲಿ ಆ ಕಂಡಕ್ಟರ್ ಕೂಡಾ ಮುಂದಿನ ಬಾಗಿಲಿನಿಂದ ಇಳಿದು ಹಿಂದಿನ ಬಾಗಿಲಿನಲ್ಲಿ ನನ್ನನ್ನು ದೂಡಿಕೊಂಡು ಹತ್ತೇ ಬಿಟ್ಟ.ಸಾಮಾನ್ಯವಾಗಿ ಬಸ್ ರಷ್ ಆದರೆ ಕಂಡಕ್ಟರ್ ಆಗಿರುವವರಿಗೆ ಇದೇ ಸಮಸ್ಯೆ.ಆಕಡೆ ಒಮ್ಮೆ ..ಈಕಡೆ ಒಮ್ಮೆ ..ಹೀಗಾಗಿ ಮಧ್ಯದಲ್ಲಿ ಇರುವವರಿಗೆ ಟಿಕೆಟ್ ಸಿಗುವ ಸಂಭವನೀಯತೆ ಬಹಳ ಕಡಿಮೆ..ಇದನ್ನೇ ಬಂಡವಾಳವಾಗಿರಿಸಿಕೊಂಡಿರುವ ಕೆಲ ಭಂಡರು ಕಂಡಕ್ಟರ್ ಬರುವ ಮೊದಲೇ ಮಧ್ಯ ನುಸುಳಿಕೊಳ್ಳಲು ಹೊಂಚು ಹಾಕುತ್ತಿರುತ್ತಾರೆ....

ವೈದಿಕರು ಭಾರತದ ಮೂಲನಿವಾಸಿಗಳಲ್ವಾ?!

ನಾನು ಕಂಡ, ಓದಿದ ಬಹುತೇಕ ಬ್ರಾಹ್ಮಣ ದ್ವೇಷಿಗಳು ಒಂದು ವಾದವನ್ನು ಮುಂದಿಡುತ್ತಾರೆ. ಆರ್ಯರು ಅಂದರೆ ಬ್ರಾಹ್ಮಣರು ಎಲ್ಲಿಂದಲೋ ಭಾರತಕ್ಕೆ ಬಂದರು ದ್ರಾವಿಡರನ್ನು ದಕ್ಷಿಣಕ್ಕೆ ತಳ್ಳಿ ತಾವು ಆಕ್ರಮಿಸಿಕೊಂಡರು, ತಮ್ಮ ಸಂಸ್ಕೃತಿಯನ್ನು ಹೇರಿದರು ಎಂದು.

ಗೌಡರೊಂದಿಗೆ ಅನಂತಮೂರ್ತಿ

ಇವತ್ತು ಬೆಳಿಗ್ಗೆ ಸುದ್ದಿ ನೋಡ್ತಾ ಇದ್ದೆ. ನಮ್ಮ ಕನ್ನಡದ ಹೆಮ್ಮೆಯ ಲೇಖಕರ ಯಾವುದೋ ಪುಸ್ತಕ ಬಿಡುಗಡೆಯ ಸುದ್ದಿ.!!! ಬಿಡುಗಡೆ ಮಾಡಿದವರು ಮಣ್ಣಿನ ಮಗ ದೇವೇಗೌಡ!!! ನನಗೆ ವಯಕ್ತಿಕವಾಗಿ ಅನಂತಮೂರ್ತಿಯವರ ಬಗ್ಗೆ ಯಾವುದೇ ರೀತಿಯ ಗೌರವವಿಲ್ಲದಿದ್ದರೂ, ಅವರು ಎತ್ತುತ್ತಿದ್ದ ಸಾಮಾಜಿಕ (ಸಮಸ್ಯೆಗಳ) ಪ್ರಶ್ನೆಗಳು, ನಿಜವಾಗಲೂ ಚರ್ಚಾರ್ಹ ಎಂಬುದನ್ನು ನಿರಾಕರಿಸಲಾರೆ.

ಕನಕದಾಸರ ಕೀರ್ತನೆಗಳು -೨ ಧಾನ ಧರ್ಮವಮಾಡಿ ಸುಖಿಯಾಗು ಮನವೆ

ಧಾನ ಧರ್ಮವ ಮಾಡಿ ಸುಖಿಯಾಗು ಮನವೆ
--------------------------------------

ಕೇದಾರ ಗೌಳ ರಾಗ, ಅಟ್ಟ ತಾಳ

ಧಾನ ಧರ್ಮವ ಮಾಡಿ ಸುಖಿಯಾಗು ಮನವೆ
ಹೀನ ವೃತ್ತಿಯಲಿ ನೀಕೆಡಬೇಡ ಮನವೆ

ಎಕ್ಕನಾತಿ ಎಲ್ಲಮ್ಮ ಮಾರಿ ದುರ್ಗಿಯ ಚೌಡಿಯ
ಅಕ್ಕರಿಂದಲಿ ಪೂಜೆ ಮಾಡಲೇಕೆ
ಕಿಕ್ಕಿರಿದು ಯಮನ ದೂತರೆಳೆದೊಯ್ವಾಗ
ಶಕ್ತೇರು ಬಿಡಿಸಿಕೊಂಡಾರೇನೊ ಮರುಳೆ

ಸಂಭ್ರಮದಲೊಂಧೊತ್ತು ನೇಮದಲಿದ್ದು

ಅಮೆರಿಕಾದ ಕ್ರಾಂತಿ! ಭಾರತದ ಭ್ರಾಂತಿ!

ಅಮೆರಿಕಾದಲ್ಲಿ ಸ್ವಾತಂತ್ರ್ಯ ಯುದ್ಧದ ಹೆಸರಿನಲ್ಲಿ 1863ರಲ್ಲಿ ನಡೆದದದ್ದು ನಿಜವಾದ ಕ್ರಾಂತಿಯಲ್ಲ. ಒಬಾಮಾ ಆ ರಾಷ್ಟ್ರದ ಅಧ್ಯಕ್ಷನಾಗಿ ಆಯ್ಕೆಯಾಗಿರುವುದೇ ಆ ದೇಶದಲ್ಲಿ ಸಂಭವಿಸಿರುವ ನಿಜವಾದ ಕ್ರಾಂತಿ ಎಂದು ಜಾಗತಿಕ ರಾಜಕೀಯ ವಿಶ್ಲೇಷಕರು ಹೇಳತೊಡಗಿದ್ದಾರೆ. ಇದನ್ನು ಇನ್ನಷ್ಟು ತಿದ್ದಿ ಹೇಳುವುದಾದರೆ, ಅಮೆರಿಕಾದ ನಿಜವಾದ ಕ್ರಾಂತಿ ಈಗ ಆರಂಭವಾಗಿದೆ!

ಕನಕದಾಸರ ಕೀರ್ತನೆಗಳು - ೧

ಭಜಿಸಿ ಬದುಕೆಲೊ ಮನುಜ
---------------------
ಕಾಂಬೋದಿ ರಾಗ, ಝಂಪೆ ತಾಳ.

ಭಜಿಸಿ ಬದುಕೆಲೊ ಮನುಜ ಮನಮುಟ್ಟಿ ಶ್ರೀಹರಿಯ
ಅಜ ಸುರೇಂದ್ರಾದಿಗಳ ಆದಿ ವಂದಿತ ಪಾದ

ಪಾಕಶಾಸನಗೊಲಿದು ಬಲಿಯ ಮೆಟ್ಟಿದ ಪಾದ
ಕಾಕು ಶಕಟನ ತುಳಿದು ಕೊಂದಪಾದ
ಲೋಕೇಶನಿಗೆ ಒಲಿದು ಪೂಜೆಗೊಂಬುವಪಾದ
ಲೋಕಪಾವನ ಗಂಗೆ ಜನಿಸಿದಾ ಪಾದ

ಶಿಲೆಯ ಸತಿಯಳನು ಸೌಂದರ್ಯಗೊಳಿಸಿದ ಪಾದ

ಸಿಸ್ಕೊ ಕಂಪನಿಯಲ್ಲಿ ರಾಜ್ಯೋತ್ಸವ

ಸಂಭ್ರಮ,,, ಈ ಹೆಸರಲ್ಲಿಯೇ ಸಂತಸದ ಹೊಳೆ, ಹಬ್ಬದ ಕಳೆ ಇದೆ. ಸಿಸ್ಕೊ ಕಂಪನಿಯ ಕನ್ನಡ ಬಳಗ "ಸಂಭ್ರಮ" ಕಳೆದ ಶುಕ್ರವಾರ, ೧೪/೧೧/೨೦೦೮, ರಂದು ಅದ್ದೂರಿಯಾಗಿ ಕನ್ನಡದ ಹಬ್ಬವಾದ ರಾಜ್ಯೋತ್ಸವವನ್ನು ಆಚರಿಸಿತು. ಕಾರ್ಯಕ್ರಮಕ್ಕೆ ಬೆಂಗಳೂರಿನ ಸಿಸ್ಕೊ ಕಂಪನಿಯ ಎಲ್ಲ ಕಚೇರಿಗಳು ಮದುಮಗಳಂತೆ ಅಲಂಕೃತಗೊಂಡಿದ್ದವು.