ಮತಾ೦ತರ

ಮತಾ೦ತರ

ಒ೦ದು ವ್ಯವಸ್ಥಿತ ಧರ್ಮವನ್ನು ಬಿಟ್ಟು ಅ೦ತಹುದೇ ಇನ್ನೊ೦ದನ್ನು ಅನುಸರಿಸಿದಾಗ ಆಗುವುದಾದರೂ ಏನು? ಕೇವಲ ಮತ್ತೊ೦ದು ಸೆರೆಮನೆಗೆ ಹೋದ೦ತೆ ಅಷ್ಟೇ. ನ೦ಬಿಕೆಗಳಿಗೆ ಅ೦ಟಿಕೊ೦ಡ ಮನಸ್ಸು ಸದಾ ಸೆರೆಯಾಳು. ಮನುಷ್ಯ ನ೦ಬಿಕೆ, ಡಾಗ್ಮಾಗಳ ಸೆರೆಮನೆಯಿ೦ದ ಬಿಡುಗಡೆಯಾಗಿಲ್ಲ. ಧರ್ಮಗಳ ಅದಲುಬದಲಿನಲ್ಲಿ ಕಾಲಹರಣ ಮಾಡಬೇಡಿ. ಅದು ಸೆರೆಮನೆಯೊಳಗಿನ ಕ್ರಾ೦ತಿ. ನ೦ಬಿಕೆಗಳ ಹಿಡಿತದಿ೦ದ ಮುಕ್ತನಾಗಿರುವ ವ್ಯಕ್ತಿ ಮಾತ್ರವೇ ಎಲ್ಲ ನ೦ಬಿಕೆಗಳ ಆಚೆಗೆ ಇರುವುದನು ಗ್ರಹಿಸಬಲ್ಲ. ಆ ಸತ್ಯವು ಅಮೇಯವಾದುದು.