ಗೌಡರೊಂದಿಗೆ ಅನಂತಮೂರ್ತಿ

ಗೌಡರೊಂದಿಗೆ ಅನಂತಮೂರ್ತಿ

ಬರಹ

ಇವತ್ತು ಬೆಳಿಗ್ಗೆ ಸುದ್ದಿ ನೋಡ್ತಾ ಇದ್ದೆ. ನಮ್ಮ ಕನ್ನಡದ ಹೆಮ್ಮೆಯ ಲೇಖಕರ ಯಾವುದೋ ಪುಸ್ತಕ ಬಿಡುಗಡೆಯ ಸುದ್ದಿ.!!! ಬಿಡುಗಡೆ ಮಾಡಿದವರು ಮಣ್ಣಿನ ಮಗ ದೇವೇಗೌಡ!!! ನನಗೆ ವಯಕ್ತಿಕವಾಗಿ ಅನಂತಮೂರ್ತಿಯವರ ಬಗ್ಗೆ ಯಾವುದೇ ರೀತಿಯ ಗೌರವವಿಲ್ಲದಿದ್ದರೂ, ಅವರು ಎತ್ತುತ್ತಿದ್ದ ಸಾಮಾಜಿಕ (ಸಮಸ್ಯೆಗಳ) ಪ್ರಶ್ನೆಗಳು, ನಿಜವಾಗಲೂ ಚರ್ಚಾರ್ಹ ಎಂಬುದನ್ನು ನಿರಾಕರಿಸಲಾರೆ. ಜಾತೀ ಸಮಸ್ಯೆ ಇರಬಹುದು, ಜಾಗತೀಕರಣದ ಪರಿಣಾಮಗಳಿರಬಹುದು, ಅನಂತಮೂರ್ತಿಯ ಧೋರಣೆಗಳು ಜನರು ಆ ಬಗ್ಗೆ ಚಿಂತಿಸಲು ಅನಿವಾರ್ಯವಾಗಿಸಿವೆ.

ಅದೆಲ್ಲ ಒಂದಡೆಯಾದರೆ, ಇನ್ನೊಂದೆಡೆ ಇಂಥ ಅನಂತಣ್ಣ, ಈ ಕರ್ನಾಟಕದ ಅಧೋಗತಿಯ ಹರಿಕಾರರಾದ ದೇವೇಗೌಡರೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದು ಈಗ ಎಲ್ಲರಿಗೂ ಎದ್ದು ಕಾಣುತ್ತಿದೆ. ಇಲ್ಲಿಯವರೆಗೂ ಜಾತ್ಯಾತೀತತೆಯ ಮುಖವಾಡ ಹಾಕಿಕೊಂಡು ಅನಂತಣ್ಣ ಹೇಳಿದ್ದೆಲ್ಲ ಕೇವಲ ತನ್ನ ಸ್ವಾರ್ಥಕ್ಕಗಿಯೇ? ರಾಜಕಾರಣಿಗಳಂತೆ, ಅನಂತಮೂರ್ತಿಯೂ ಕೂಡ, ಜನಸಾಮಾನ್ಯರ ಭಾವನೆಗಳನ್ನು ಕೆರಳಿಸಿ, ಅದನ್ನೇ ತಾವು ಬೆಳೆಯುವ ಅಸ್ತ್ರವಾಗಿಸಿಕೊಂದಿದ್ದರೇನೋ ಎಂಬ ಬಲವಾದ ಸಂಶಯ ಮೂಡದೇ ಇರದು. ಹಾಗೇ, ಇವರನ್ನು ಅನುಕರಿಸುತ್ತಿರುವ ಮುಗ್ಧ ಜನರನ್ನು ದಾರಿತಪ್ಪಿಸುತ್ತಿದ್ದು, ಜಾತ್ಯಾತೀತ ಜನತಾದಳಕ್ಕೆ ಸೇರಿಸುವ ಪ್ರಯತ್ನವೂ ಎದ್ದು ಕಾಣುತ್ತದೆ.

ಒಬ್ಬ ಸಂವೇದನಾತ್ಮಕ, ಜವಾಬ್ದಾರಿಯುತ ಲೇಖಕರಾದ ಅನಂತಮೂರ್ತಿ, ಹೀಗೆ ಸ್ವಾರ್ಥಿಗಳಾಗುತ್ತಿರುವುದು ಭಯ ತರುವ ವಿಷಯ. ದಡ್ಡರಾದವರು ಸ್ವಾರ್ಥಿಗಳಾದರೆ, ಅವರು ಸಾಮಾಜಿಕವಾಗಿ ಮಾಡುವ ಹಾನಿ ಕಡಿಮೆ. ಆದ್ರೆ, ಅನಂತಮೂರ್ತಿಯವರಂಥ ಜಾಣ ಜನ, ಸ್ವಾರ್ಥಿಗಳಾದರೆ, ನಮ್ಮ ನಿಮ್ಮೆಲ್ಲರ ಗತಿ ಏನಾದೀತು?

[ಈ ಪುಟ ಲೇಖನ ವರ್ಗಕ್ಕೆ ಸೇರಿಸಲಾಗಿತ್ತು. ಚರ್ಚೆಯ ವೇದಿಕೆಗೆ ಸೂಕ್ತವಾದ್ದರಿಂದ ಅಲ್ಲಿಗೆ ಸ್ಥಳಾಂತರಿಸಲಾಗಿದೆ - ಸಂಪದ ನಿರ್ವಹಣೆ]

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet