ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಆತ್ಮಾನುಸಂಧಾನ

ಪುಸ್ತಕದ ಲೇಖಕ/ಕವಿಯ ಹೆಸರು
ಎ ಎನ್ ರಮೇಶ್ ಗುಬ್ಬಿ
ಪ್ರಕಾಶಕರು
ಗೋಮಿನಿ ಪ್ರಕಾಶನ, ತುಮಕೂರು
ಪುಸ್ತಕದ ಬೆಲೆ
ರೂ. ೨೨೫.೦೦, ಮುದ್ರಣ: ೨೦೨೪

‘ಆತ್ಮಾನುಸಂಧಾನ' ಎನ್ನುವ ಕವನ ಸಂಕಲನ ಎ ಎನ್ ರಮೇಶ್ ಗುಬ್ಬಿ ಅವರ ೧೨ನೇ ಕೃತಿ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಕವಯತ್ರಿ, ಲೇಖಕಿ ಹಾಗೂ ಉಪನ್ಯಾಸಕಿಯಾದ ಡಾ. ಸಂಧ್ಯಾ ಹೆಗಡೆ, ದೊಡ್ಡಹೊಂಡ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವು ಸಾಲುಗಳು ಇಲ್ಲಿವೆ...

ಸ್ಟೇಟಸ್ ಕತೆಗಳು (ಭಾಗ ೧೦೯೧)- ಹಣೆಬರಹ

ಅವನು ವಿಪರೀತ ದೇಹ ಬಗ್ಗಿಸಿ ದುಡಿಯುತ್ತಾನೆ. ಆತನ ಶ್ರಮಕ್ಕೆ ಹಣೆಯಿಂದ ಬೆವರ ಹನಿಗಳು ನೆಲದ ಮೇಲೆ ತಟತಟನೆ ತೊಟ್ಟಿಕ್ಕುತ್ತಿದೆ. ಆತನಿಗೊಂದೇ ಆಸೆ ಮನೆಯಲ್ಲಿ ಹುಟ್ಟುವಾಗಲೇ ಕಷ್ಟ ಅನ್ನೋದು ಅವನ ಸಹೋದರನಾಗಿತ್ತು. ಮನೆಯವರೆಲ್ಲರ ನೆಂಟನಾಗಿತ್ತು. ಎಲ್ಲರೂ ಅವುಗಳ ಜೊತೆಯೇ ಬದುಕಿದವರು. ಒಂದು ಹೊತ್ತಿನ ಊಟಕ್ಕೂ ಹಿಂದೆ ಮುಂದೆ ಯೋಚಿಸುವ ದಿನಗಳು.

Image

ಮಾವಿನ ಹಣ್ಣಿನ ಸಾರು

Image

ಮಾವಿನ ಹಣ್ಣನ್ನು ಹೋಳು ಮಾಡಿ ಗೊರಟು ಸಹಿತ ೪ ಕಪ್ ನೀರಿನಲ್ಲಿ ಅರಸಿನ ಪುಡಿ, ಕೊತ್ತಂಬರಿ-ಜೀರಿಗೆ ಪುಡಿ, ಉಪ್ಪು, ಬೆಲ್ಲ, ಇಂಗು, ಹಸಿಮೆಣಸು ಹಾಕಿ ಬೇಯಿಸಿ. ಬೆಳ್ಳುಳ್ಳಿ ಒಗ್ಗರಣೆ ಕೊಡಿ.

ಬೇಕಿರುವ ಸಾಮಗ್ರಿ

ಮಾವಿನ ಹಣ್ಣು ೩, ಅರಸಿನ ಪುಡಿ ಚಿಟಿಕೆ, ಇಂಗು ಕಡಲೆ ಗಾತ್ರ, ಕೊತ್ತಂಬರಿ-ಜೀರಿಗೆ ಪುಡಿ ೧/೨ ಚಮಚ, ಸೀಳಿದ ಹಸಿ ಮೆಣಸು ೩, ಉಪ್ಪು ರುಚಿಗೆ ತಕ್ಕಷ್ಟು, ಬೆಲ್ಲ ರುಚಿಗೆ, ಒಗ್ಗರಣೆಗೆ ಸಾಸಿವೆ ೧ ಚಮಚ, ಎಣ್ಣೆ ೧ ಚಮಚ, ಬೆಳ್ಳುಳ್ಳಿ ೪ ಎಸಳು, ಒಣಮೆಣಸು ೧, ಕರಿಬೇವು ೨ ಎಸಳು.

ನಿಷ್ಪಾಪಿ ಸಸ್ಯಗಳು (ಭಾಗ ೬೭) - ಸುಗಂಧಿ ಹೂವು

ಮಳೆಗಾಲ ಬಂತೆಂದರೆ ಸಾಕು, ಹಲವಾರು ತರಹದ ಹೂಗಳು ಘಮಿಸತೊಡಗುತ್ತವೆ. ಹೂಗಳಿಗೆ ಇಷ್ಟೊಂದು ಅಂದ ಚಂದ, ಬೆಡಗು ಬಿನ್ನಾಣ, ಲಾಲಿತ್ಯ, ಒನಪು ವೈಯ್ಯಾರವನ್ನು ಸೃಷ್ಟಿ ಏಕೆ ಕೊಟ್ಟಿರಬಹುದೆಂಬ ಪ್ರಶ್ನೆ ನನ್ನನ್ನು ಯಾವಾಗಲೂ ಕಾಡುತ್ತದೆ. ಕೆಲವು ಹೂಗಳು ಬೆಳಗ್ಗೆ ಅರಳಿದರೆ ಕೆಲವು ಸಂಜೆ ಅರಳುತ್ತವೆ. ಕೆಲವು ಒಂಭತ್ತು ಹತ್ತು ಗಂಟೆ ರಾತ್ರಿಗೆ!

Image

ಬಿಡುಗಡೆಯ ಹಾಡುಗಳು (ಭಾಗ ೧) - ಶಾಂತಕವಿ

ಈಗಾಗಲೇ ನಾವು ಹಲವು ದಶಕಗಳಷ್ಟು ಹಳೆಯದಾದ ‘ಸುವರ್ಣ ಸಂಪುಟ', ‘ಹೊಸಗನ್ನಡ ಕಾವ್ಯಶ್ರೀ’ ಮತ್ತು ‘ಪಂಜೆಯವರ ಮಕ್ಕಳ ಪದ್ಯಗಳು’ ಕೃತಿಗಳಿಂದ ಬಹು ಅಪರೂಪದ ಕವನಗಳನ್ನು ಆಯ್ದು ಪ್ರಕಟ ಮಾಡಿದ್ದೇವೆ. ಈ ಮಾಲಿಕೆಗಳು ಹಲವರ ಮನಗೆದ್ದಿದೆ. ಬಹಳಷ್ಟು ಮಂದಿ ಇಂತಹ ಅಪರೂಪದ ಕೃತಿಗಳಲ್ಲಿರುವ ಕವನಗಳನ್ನು ಆಯ್ದು ಪ್ರಕಟಿಸುತ್ತಾ ಇರಿ ಎಂದಿದ್ದಾರೆ.

Image

ಭಾರತದಲ್ಲಿ ಗುಲಾಮಗಿರಿಗೆ ಜಾಗವಿಲ್ಲ

ದಶಕಗಳ ಹಿಂದೆ ಹುಟ್ಟಿಕೊಂಡ ಆಮ್ ಆದ್ಮಿ ಪಕ್ಷವು, ಇತರೆ ರಾಜಕೀಯ ಪಕ್ಷಗಳಿಗಿಂತ ವಿಭಿನ್ನವೆಂದೇ ಹೆಸರುವಾಸಿಯಾಗಿತ್ತು. ಕಾಂಗ್ರೆಸ್ ನ ವಂಶಪಾರಂಪರ್ಯದಿಂದ ಹಿಡಿದು, ಬಿಜೆಪಿಯ ಸಿದ್ಧಾಂತ, ಇತರೆ ಪ್ರಾದೇಶಿಕ ಪಕ್ಷಗಳಲ್ಲಿನ ವಂಶಾಡಳಿತಕ್ಕಿಂತ ಭಿನ್ನವೆಂದೇ ಹೇಳಿಕೊಂಡು ಜನರ ಮುಂದೆ ಹೋಗಿ ಈ ನಿಟ್ಟಿನಲ್ಲಿ ಯಶಸ್ಸು ಕಂಡಿತ್ತು.

Image

ಒಂದು ಪ್ರೀತಿಯ ಹುಟ್ಟು...

ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶಿಸಿದಾಗ ರಾತ್ರಿ 12 ಗಂಟೆ. ಬೆಂಗಳೂರಿಗೆ ನನ್ನ ಪ್ರಯಾಣದ ವಿಮಾನ ಇದ್ದದ್ದು ಮಧ್ಯರಾತ್ರಿ 2 ಗಂಟೆಗೆ. ಅದು ಲಂಡನ್ನಿನ ಹೀಥ್ರೂ ವಿಮಾನ ನಿಲ್ದಾಣದಿಂದ ಹೊರಟು ದುಬೈ ಮುಖಾಂತರ ದೆಹಲಿ ತಲುಪಿ, ಅಲ್ಲಿಂದ ಬೆಂಗಳೂರಿಗೆ ಹೊರಡುತ್ತದೆ.

Image

ಸ್ಟೇಟಸ್ ಕತೆಗಳು (ಭಾಗ ೧೦೯೦)- ಒಳಿತು ಕೆಡುಕು

ತಪ್ಪು ಮಾಡಿ ಸಿಕ್ಕಿಬಿದ್ದಿದ್ದ. ಮನೆಯಲ್ಲಿ ಆ ಕಾರಣಕ್ಕೆ ಒಂದಷ್ಟು ಮಾತುಗಳನ್ನು ಕೇಳಬೇಕಾಗಿತ್ತು. ಮನೆಯ ಎಲ್ಲಾ ಮಾತುಗಳನ್ನ ಕೇಳಿ ರೋಸಿ ಹೋಗಿ ಅಂಗಳದಲ್ಲಿ ಬಂದು ನಿಂತು ಬಿಟ್ಟ. ಒಳಗೆ ಮನೆಯವರೆಲ್ಲ ಕೇಳುತ್ತಿದ್ದ ಪ್ರಶ್ನೆಗಳಿಗೆ ಹೊರಗೆ ನಿಂತು ಜೋರಿನಲ್ಲಿ ಉತ್ತರಿಸಲಾರಂಭಿಸಿದ. ಎಲ್ಲವೂ ನನ್ನದೇ ತಪ್ಪಲ್ಲ.

Image