ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಒಂದು ದೇಶದ ಅಭಿವೃದ್ಧಿಯೆಂಬ ವಜ್ರಖಚಿತ ಕಿರೀಟದ ಮುತ್ತುಗಳು

ಆ ದೇಶ ಬಾಹ್ಯಾಕಾಶಕ್ಕೆ ಹಾರಿಸಿದ ಸ್ಯಾಟಲೈಟ್ ಗಳು ಮತ್ತು ಅದರ ಪರಿಣಾಮ, ಆ ದೇಶದಲ್ಲಿ ಇರುವ ಶ್ರೀಮಂತರ ಸಂಖ್ಯೆ, ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಹೊಂದಿರುವ ಸ್ಥಾನ, ಆ ದೇಶದಲ್ಲಿ ಇರಬಹುದಾದ ವಿಶ್ವ ಶ್ರೇಷ್ಠ ಭವ್ಯ ಕಟ್ಟಡಗಳು, ಆ ದೇಶ ವಿಶ್ವ ದರ್ಜೆಯ ಕ್ರೀಡಾಕೂಟದಲ್ಲಿ ಗಳಿಸುವ ಪದಕಗಳು, ಅದು ಹೊಂದಿರಬಹುದಾದ ವಿಮಾನ ನಿಲ್ದಾಣಗಳ ಸಂಖ್ಯೆ, ಆ ದೇಶದಲ್ಲಿ ಚಲಿಸುವ  ಬುಲೆಟ್ ರೈಲುಗಳ

Image

ಸ್ಟೇಟಸ್ ಕತೆಗಳು (ಭಾಗ ೧೨೬೫) - ರೊಟ್ಟಿ

ಬದುಕಿನ ದಾರಿಯ ಕಂಡುಕೊಂಡಿದ್ದಾರೆ. ಬೆಳಗಿನಿಂದ ಸಂಜೆಯವರೆಗೆ ಅವಿರತವಾಗಿ ಬೆವರು ಹರಿಸಿ ದುಡಿದರೂ ಕೂಡ ಮನೆಯಲ್ಲಿ ಬದಲಾವಣೆ ಆಗುವುದಿಲ್ಲ. ಬದುಕಿನ ಹೊಸ ದಾರಿಯ ಬಗ್ಗೆ ಆಲೋಚನೆ ಮಾಡಬೇಕಾಗಿದೆ. ಇರೋದು ಗಂಡ ಹೆಂಡತಿ ಇಬ್ಬರೇ ಆದರೂ ಕನಸುಗಳು ದೊಡ್ಡದಿದೆ.

Image

ಸಿಪ್ಪೆ

ಪ್ರಕೃತಿಯಲ್ಲಿ ಅಸಂಖ್ಯ ಬೀಜಗಳಿವೆ. ಆ ಬೀಜಗಳಿಗೆ ಸಿಪ್ಪೆಯು ಸಹಜವಾಗಿಯೇ ಇರುತ್ತದೆ. ಸರಿಯಾಗಿ ಗಮನಿಸಿದರೆ ಹೆಚ್ಚಿನ ಬೀಜಗಳಿಗೆ ಎರಡೆರಡು ಸಿಪ್ಪೆಗಳು. ಒಂದು ಹೊರ ಸಿಪ್ಪೆ ಇನ್ನೊಂದು ಒಳ ಸಿಪ್ಪೆ. ಗೇರು ಬೀಜ, ನೆಲಕಡಲೆ, ತೆಂಗಿನಕಾಯಿ ಹೀಗೆ ಬೀಜಗಳಿಗೆ ಎರಡೆರಡು ಸಿಪ್ಪೆ. ಸಿಪ್ಪೆಗಳೊಳಗೆ ತಿರುಳು ಸುರಕ್ಷಿತವಾಗಿರುತ್ತದೆ. ಸಿಪ್ಪೆಯನ್ನು ಕಳಚಿದ ನಂತರ ತಿರುಳು ತನ್ನ ಸುರಕ್ಷತೆಯನ್ನು ಕಳೆದು ಕೊಳ್ಳುತ್ತದೆ.

Image

‘ವಂದೇ ಮಾತರಂ’ ರಾಷ್ಟ್ರಗೀತೆ ಏಕೆ ಆಗಲಿಲ್ಲ?

ದೇಶವು ‘ವಂದೇ ಮಾತರಂ’ ಗೀತೆಗೆ ೧೫೦ ವರ್ಷ ತುಂಬಿದ ಸಂಭ್ರಮಾಚರಣೆಯಲ್ಲಿ ತೊಡಗಿರುವ ವಿಷಯ ನೀವು ಈಗಾಗಲೇ ತಿಳಿದುಕೊಂಡಿರುವಿರಿ. ಇಂತಹ ಒಂದು ಅದ್ಭುತ ಗೀತೆ ಭಾರತದ ರಾಷ್ಟ್ರ ಗೀತೆ ಏಕೆ ಆಗಲಿಲ್ಲ? ನಿಮಗೆ ಗೊತ್ತೇ? ಈ ಬಗ್ಗೆ ತಿಳಿದುಕೊಳ್ಳುವ ಮೊದಲು ವಂದೇ ಮಾತರಂ ಗೀತೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ…

Image

ಮಾದಕದ್ರವ್ಯ ಜಾಲದ ವಿರುದ್ಧ ಸಂಘಟಿತ ಸಮರ ಅಗತ್ಯ

ಮಾದಕದ್ರವ್ಯ ಜಾಲ ವಿರುದ್ಧದ ಸಮರದಲ್ಲಿ ಭಾನುವಾರ (ಮಾ.೧೬) ಮಹತ್ವದ ಕಾರ್ಯಾಚರಣೆಗಳು ನಡೆದಿವೆ. ಮಂಗಳೂರು ಪೋಲೀಸರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ನೀಲಾದ್ರಿ ನಗರದಲ್ಲಿ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ದಕ್ಷಿಣ ಆಫ್ರಿಕಾದ ಇಬ್ಬರು ಮಹಿಳಾ ಪ್ರಜೆಗಳನ್ನು ಬಂಧಿಸಿ, ೭೫ ಕೋಟಿ ರೂ. ಮೌಲ್ಯದ ೩೭.೮೭ ಕೆಜಿ ನಿಷೇಧಿತ ಮಾದಕ ಪದಾರ್ಥ ಎಂಡಿಎಂಎ ಅನ್ನು ವಶಪಡಿಸಿಕೊಂಡಿದ್ದಾರೆ.

Image

ವಿಧಾನ ಮಂಡಲ ಮತ್ತು ಸಂಸತ್ತಿನಲ್ಲಿ ಇವುಗಳದೇ ಪ್ರಾಬಲ್ಯ

ರಾಜಕೀಯ ಮತ್ತು ಆಡಳಿತದಲ್ಲಿ ವಕೀಲಿಕೆ ಎಂಬ ವಾದ ಪ್ರತಿವಾದಗಳ ಮಂಕುಬೂದಿ. ವಿಧಾನ ಮಂಡಲ ಮತ್ತು ಸಂಸತ್ತಿನಲ್ಲಿ ಇವುಗಳದೇ ಪ್ರಾಬಲ್ಯ ವಕೀಲಿಕೆಯ ನೆರಳಲ್ಲಿ ಆರೋಪ ಪ್ರತ್ಯಾರೋಪಗಳಿಂದ ಪಲಾಯನ ಮಾಡುವ ಕುತಂತ್ರ ರಾಜಕಾರಣಕ್ಕೆ ನಾವುಗಳು ಮೂಕ ಪ್ರೇಕ್ಷಕರಾಗಿ ಸಾಕ್ಷಿಯಾಗುವ ದುರಂತ ವ್ಯವಸ್ಥೆಯಲ್ಲಿ ನಾವಿದ್ದೇವೆ.

Image

ಸ್ಟೇಟಸ್ ಕತೆಗಳು (ಭಾಗ ೧೨೬೪) - ಮಸಣ

ಮಸಣದ ಗೋಡೆಗಳು ಹೊರಗಿನಿಂದ ಜಗತ್ತು ನೋಡುತ್ತಿರುವೆ. ಅಲ್ಲಿ ಮಾಡುವ ನಾಟಕಗಳು ಆಡುವ ಅಬ್ಬರಗಳು ಮೋಸ ವಂಚನೆ ಪ್ರೀತಿ ನೋವು ಎಲ್ಲವನ್ನು ನೋಡಿ ತಮ್ಮೊಳಗೆ ಅದುಮಿ ಹಿಡಿದಿಟ್ಟುಕೊಳ್ಳುತ್ತಿದೆ. ದಿನ ಕಳೆದಂತೆ ಮತ್ತೆ ಅದೇ ಮುಖಗಳು ಈ ಮಸಣದೊಳಕ್ಕೆ ಬಂದು ಕಣ್ಣೀರು ಸುರಿಸುತ್ತಾ ತಾವೇನೋ ಕಳೆದುಕೊಂಡಿದ್ದೇವೆ ಅನ್ನೋ ರೀತಿ ಮಾತನಾಡುವುದನ್ನು ಕಂಡು ಸುಮ್ಮನೆ ನಗುತ್ತಿವೆ.

Image

ಆಂಗ್ಲಭಾಷೆಯಲ್ಲಿ ಸ್ಕೋರಿಂಗ್ ಹೇಗೆ?

ನಮಗೆಲ್ಲಾ ತಿಳಿದ ಹಾಗೆ ಕನ್ನಡ ಮಾಧ್ಯಮದ ಮಕ್ಕಳಾದರೂ ಆಂಗ್ಲ ಭಾಷೆಯಲ್ಲಿ ಏನೂ ಯಾರೂ ಹಿಂದೆ ಬಿದ್ದಿಲ್ಲ. ಅಲ್ಲಿ ಇಲ್ಲಿ ಒಂದಷ್ಟು ಜನ ಇಂಗ್ಲಿಷ್ ಕಷ್ಟ ಎಂದರೂ ಅವರೆಲ್ಲರೂ ಮೊಬೈಲ್ ಬಳಕೆಯಲ್ಲಿ ಮುಂದಿದ್ದಾರೆ. ಬೆಳಗ್ಗೆ ಎದ್ದಾಗ ಬಳಸುವ ಪೇಸ್ಟ್, ಬ್ರಷ್ ಎಂಬ ಆಂಗ್ಲ ಪದಗಳಿಂದ ಪ್ರಾರಂಭ ಆಗುವ ನಮ್ಮ ದಿನ ಗುಡ್ ನೈಟ್‌ನೊಂದಿಗೆ ಕೊನೆಗೊಳ್ಳುತ್ತದೆ. ಇದು ಸರ್ವೇ ಸಾಮಾನ್ಯ ಸಂಗತಿ.

Image