ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗಾಂಧಿ ಎಂದರೆ...

ಗುಜರಾತಿನ ಪೋರಬಂದರ್ ನ ಸಾಮಾನ್ಯ ಶಿಶು, ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿ, ಇಂಗ್ಲೇಂಡಿನಲ್ಲಿ ಕಾನೂನು ಶಿಕ್ಷಣ ಪಡೆಯಲು ಹೊರಟ ಕನಸುಗಣ್ಣಿನ ಯುವಕ, ಅಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ಹಿಂತಿರುಗಿದ ಕುಟುಂಬದ ಹೆಮ್ಮೆಯ ಪುತ್ರ, ಆಕಸ್ಮಿಕವಾಗಿ ದೊರೆತ ಅವಕಾಶದಿಂದ ದಕ್ಷಿಣ ಆಫ್ರಿಕಾದಲ್ಲಿ ವಾದ ಮಂಡಿಸಲು ಹೊರಟ ವಕೀಲ, ವಕೀಲಿ ವೃತ್ತಿಯಲ್ಲಿ ಅನಿವಾರ್ಯವಾಗಿ ತಮ್ಮ

Image

ಸ್ಟೇಟಸ್ ಕತೆಗಳು (ಭಾಗ ೧೦೯೭)- ದುಷ್ಟ ಕೂಟ

ಚರ್ಚೆ ತುಂಬಾ ಜೋರಾಗಿತ್ತು ಈಗ ಸಿಕ್ಕಿರುವ ಅವಕಾಶವನ್ನು ನಾವು ತಪ್ಪಿಸಿಕೊಳ್ಳಬಾರದು. ಈ ಕೆಲಸ ನಮ್ಮಿಂದಾದರೆ ಇನ್ನು ಮುಂದೆ ರಾಜ್ಯದಲ್ಲಿ ರಾಷ್ಟ್ರದಲ್ಲಿ ನಮ್ಮ ಹೆಸರು ವ್ಯಾಪಿಸಿ ಹೆಚ್ಚು ಹೆಚ್ಚು ದುಡ್ಡು ಕಮಾಯಿಸುವ ಎಲ್ಲಾ ದಾರಿಗಳು ಇದರಿಂದ ತೆರೆದುಕೊಳ್ಳುತ್ತವೆ. ಯಾರೋ ಒಬ್ಬ ಲಾರಿಯ ಸಮೇತ ಮಣ್ಣಿನಡಿಗೆ ಹೋಗಿ ಸಿಲುಕಿಕೊಂಡಿದ್ದಾನೆ.

Image

ಕುಡಿತದ ಆವಾಂತರ

ನಾನು ನಿರೂಪಿಸುತ್ತಿರುವ ವ್ಯಕ್ತಿ ಬಹಳ ಮಿದು ಸ್ವಭಾವಿ. ಹೆಸರು ರಂಗ. ಎಲ್ಲರಿಗೂ ಸಹಾಯ ಮಾಡುತ್ತಾನೆ ಮತ್ತು ಸಹಾಯ ಪಡೆಯುತ್ತಾನೆ. ನನಗೆ ಬಹಳ ಪರಿಚಿತ ಮತ್ತು ಆಪ್ತ. ಒಂದು ದಿನ ಕಾರ್ಯಾರ್ಥವಾಗಿ ಪಕ್ಕದೂರಿಗೆ ಹೋಗಿದ್ದೆ. ಆ ಊರ ಗಣ್ಯರು ಆ ಊರಿನ ಒಂದು ಖಾಲಿ ಮನೆಯಲ್ಲಿ ನನಗೆ ಮತ್ತು ನನ್ನ ಜೊತೆಗಿದ್ದ ಸ್ನೇಹಿತರಿಗೆ ಉಳಕೊಳ್ಳಲು ವ್ಯವಸ್ಥೆಯನ್ನು ಮಾಡಿದ್ದರು.

Image

ಸಮಯಪಾಲನೆ ಮತ್ತು ಸ್ವಚ್ಛತೆ

‘ಇವನ್ಯಾಕೋ ಗಾಂಧೀ ತರಹ ಮಾತಾಡ್ತಾನೆ' ಎನ್ನೋದು ನಮ್ಮ ಶಾಲಾ ದಿನಗಳಲ್ಲಿ ಕೇಳಿಬರುತ್ತಿದ್ದ ಸಾಮಾನ್ಯವಾದ ಮಾತಾಗಿತ್ತು. ಪಾಪದ, ಅವನಷ್ಟಕ್ಕೇ ಇರುವ, ಎಲ್ಲರೊಂದಿಗೆ ಬೆರೆಯದೆ ಇದ್ದರೂ ಉತ್ತಮ ಅಂಕಗಳನ್ನು ಗಳಿಸುವ ವಿದ್ಯಾರ್ಥಿಗೆ ‘ಗಾಂಧಿ' ಎನ್ನುವ ಉಪನಾಮ ಸಾಮಾನ್ಯವಾಗಿತ್ತು.

Image

ತೆಂಗು ಬೆಳೆಯಿಂದ ಗರಿಷ್ಟ ಲಾಭಮಾಡಿಕೊಳ್ಳಿ

ತೆಂಗು ಬೆಳೆ ಎಲ್ಲದಕ್ಕಿಂತ ಉತ್ತಮ. ಕನಿಷ್ಟ ನಿರ್ವಹಣೆಯಲ್ಲಿ ತಕ್ಕಮಟ್ಟಿಗೆ ಲಾಭ ತಂದುಕೊಡಬಲ್ಲ ಬೆಳೆ. ತೆಂಗಿನಿಂದ ಲಾಭ ಮಾಡಿಕೊಳ್ಳುವುದು ನಮ್ಮ  ಬೇಸಾಯ ಕ್ರಮದಲ್ಲಿದೆ. ಇತ್ತೀಚೆಗೆ ತೆಂಗಿನ ದರವೂ ಕೆ ಜಿ ಗೆ ೪೦ ರಿಂದ ೫೦ ರ ತನಕ ಇದೆ. ಎಳನೀರು ದರ ತೆಂಗಿನ ಕಾಯಿಯನ್ನೂ ಮೀರಿ ೫೦ - ೬೦ ತನಕ ಇದೆ. ಹಬ್ಬಗಳೂ ಹತ್ತಿರ ಬರುತ್ತಿವೆ. ತೆಂಗಿನ ಕಾಯಿಯ ಕೊರತೆ ಎಲ್ಲೆಡೆ ಕಾಣಿಸುತ್ತಿದೆ.

Image

ಚೆನ್ನಭೈರಾದೇವಿ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಗಜಾನನ ಶರ್ಮ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೩೯೫.೦೦, ಮುದ್ರಣ: ೨೦೨೩

ದಕ್ಷಿಣ ಕೊಂಕಣ ಹಾಗೂ ಮಲೆನಾಡನ್ನು ಸುಮಾರು ಐದು ದಶಕಗಳ ಕಾಲ ಆಳಿದ ಚೆನ್ನಾಭೈರಾದೇವಿ ಎಂಬ ರಾಣಿಯ ಬಗ್ಗೆ ತಿಳಿದಿರುವವರ ಸಂಖ್ಯೆ ಬಹಳ ಕಡಿಮೆ. ನಾವು ಶಾಲೆಗಳಲ್ಲಿ ಇಂತಹ ಮಹಾರಾಣಿಯರ ಜೀವನ ಕಥೆಯನ್ನು ಕೇಳಿಯೇ ಇಲ್ಲ, ಕಲಿತೂ ಇಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಯ ದುರಂತ ಇದು.

ತ್ರಿಭಾಷಾ ಸೂತ್ರ ಎಷ್ಟು ಸರಿ ?

ಕನ್ನಡ : ರಾಜ್ಯ ಭಾಷೆ. ಹಿಂದಿ : ರಾಷ್ಟ್ರ ಭಾಷೆ (ಬಹುಸಂಖ್ಯಾತರಾಡುವ ಭಾಷೆ), ಇಂಗ್ಲೀಷ್ : ಅಂತರರಾಷ್ಟ್ರೀಯ ಭಾಷೆ. ಈ ಭಾಷಾ ಸೂತ್ರ ಸರಿಯೇ ?  ಇದು ಸಂವಿಧಾನಾತ್ಮಕವೇ ? ಇದು ವಾಸ್ತವವೇ ? ಪ್ರಾಯೋಗಿಕವೇ ? ಕನ್ನಡದ ಹಿತಕ್ಕೆ ಇದು ಒಳ್ಳೆಯದೇ ಅಥವಾ ಮಾರಕವೇ ? ಭಾರತದ ಒಕ್ಕೂಟ ವ್ಯವಸ್ಥೆಗೆ ಇದು ಹಿತವೇ ಅಥವಾ ಅಪಾಯಕಾರಿಯೇ ?

Image

ಸ್ಟೇಟಸ್ ಕತೆಗಳು (ಭಾಗ ೧೦೯೬)- ವಾದ

ಅಜ್ಜನಿಗೆ ಮೊಮ್ಮಗನಿಗೂ ಮಾತುಕತೆ ನಡೆದಿತ್ತು. ನಿಮ್ಮ ಕಾಲ ಚೆನ್ನಾಗಿತ್ತು. ಒಪ್ಪಿಕೊಳ್ಳುತ್ತೇನೆ ಆದರೆ ನಮ್ಮ ಈ ಕಾಲದಲ್ಲಿ ಈ ಮೀಡಿಯಾಗಳು ಬಂದಿರುವುದರಿಂದ ಜನರಿಗೆ ಸತ್ಯ ಅರಿವಾಗ್ತಾ ಇದೆ. ಎಲ್ಲ ವಿಷಯಗಳು ಬಹಳ ಬೇಗ ತಲುಪುತ್ತವೆ. ತಪ್ಪು ಮಾಡುವವರಿಗೆ ಹೆದರಿಕೆ ಉಂಟಾಗಿದೆ.

Image

ಕಚೋರಿ

Image

ಗೋಧಿ ಹಿಟ್ಟು, ಮೈದಾ ಹಿಟ್ಟುಗಳಿಗೆ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಆಲೂಗಡ್ಡೆಗಳನ್ನು ಬೇಯಿಸಿ ಸಿಪ್ಪೆ ತೆಗೆದು ಹುಡಿ ಮಾಡಿ. ಬಟಾಣಿ ಕಾಳುಗಳು, ಶುಂಠಿ ತುರಿ, ಹಸಿಮೆಣಸಿನಕಾಯಿ, ಇಂಗು ಜೀರಿಗೆ ಹುಡಿ, ಅರಸಿನ, ಗರಮ್ ಮಸಾಲಾ ಹುಡಿ, ಉಪ್ಪು ಎಲ್ಲವನ್ನೂ ಸೇರಿಸಿ ನೀರು ಹಾಕದೆ ಮಸಾಲೆ ರುಬ್ಬಿ. ಬೇಯಿಸಿದ ಆಲೂಗಡ್ಡೆಗೆ ರುಬ್ಬಿದ ಮಸಾಲೆ ಸೇರಿಸಿ ಚೆನ್ನಾಗಿ ಕಲಕಿ.

ಬೇಕಿರುವ ಸಾಮಗ್ರಿ

ಆಲೂಗಡ್ಡೆ ೨, ಗೋಧಿ ಹಿಟ್ಟು - ೧ ಕಪ್, ಮೈದಾ ಹಿಟ್ಟು ಅರ್ಧ ಕಪ್, ಬಟಾಣಿ ಕಾಳುಗಳು - ಅರ್ಧ ಕಪ್, ಕತ್ತರಿಸಿದ ಹಸಿಮೆಣಸಿನಕಾಯಿ - ೪, ಶುಂಠಿಯ ತುರಿ ೧ ಚಮಚ, ಇಂಗು ಕಾಲು ಚಮಚ, ಜೀರಿಗೆ ಹುಡಿ - ೧ ಚಮಚ, ಅರಸಿನ ಕಾಲು ಚಮಚ, ಗರಮ್ ಮಸಾಲಾ ಹುಡಿ - ೧ ಚಮಚ, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.