ಒಂದಿಷ್ಟು ಹನಿಗಳು…

ಒಂದಿಷ್ಟು ಹನಿಗಳು…

ಕವನ

ಶಾಂತಿಯ ಹೊನಲು 

ಘನಘೋರ

ಯುದ್ಧಗಳಲಿ

ಸಾಯುವುದು

ಅಮಾಯಕರಾದ

ಸಾಮಾನ್ಯ

ಜೀವಗಳು...

 

ಈ ನಾಯಕರನು

ಮೊದಲು

ತಳ್ಳಿಬಿಡಿ;

ಆಗ ಆಗುವುದು 

ಇಡೀ ವಿಶ್ವ

ಶಾಂತಿಯ ಹೊನಲು!

***

ಜನಪ್ರಿಯತೆಯ ಹಳಿ 

ದಿಲ್ಲಿ ನಾರಿಯರಿಗೆ

2500 ರೂ

ಅಸ್ತು;

ಬಿಜೆಪಿ

ಸರ್ಕಾರದ

ತೀರ್ಮಾನ...

 

ಕಾಂಗ್ರೆಸ್ ರೈಲು-

ಹಳಿ ತಪ್ಪಿತ್ತು...

ಈಗ ಬಿಜೆಪಿಯೂ

ಅದೇ ಹಳಿ ಮೇಲೆ

ಚಲಿಸುತ್ತಿದೆ..

ಇದು ಸರೀನಾ?

***

ಜೀವನ ಪ್ರಸಾಧನಗಳು 

ನಿಜ ಜೀವನದ

ಸುಗಂಧ

ಸೌಂದರ್ಯ

ಪ್ರಸಾಧನಗಳು-

ಪ್ರೀತಿ, ಪ್ರೇಮ, ವಿಶ್ವಾಸ

ನಂಬಿಕೆ, ಭಯ, ಭಕುತಿ...

 

ಇವುಗಳ

ನಾವು ಧರಿಸಿ

ವ್ಯವಹರಿಸಿದರೆ

ನಿಜಕೂ

ಜೀವನದಲಿ

ದೊರೆವುದು ಮುಕುತಿ!

***

ವಿಸ್ಮಯದ ಜಗತ್ತು 

ಈ ಜಗದ

ಆಧ್ಯಾತ್ಮದಲಿ

ದೇವರನು;

ವಿಜ್ಞಾನದಲಿ

ಎಲೆಕ್ಟ್ರಾನನು-

ಕಂಡವರಿಲ್ಲ...

 

ಆದರೆ 

ಇವೆರಡರಿಂದ

ಈ ವಿಶ್ವದಲಿ

ಅದೇನು

ಸೋಜಿಗ

ವಿಸ್ಮಯವೆಲ್ಲ...!

***

ಯುಗಾದಿಗೆ ಸಿಹಿ ಸುದ್ದಿ...

ರಾಜ್ಯ ಜನತೆಗೆ

ಸಿಹಿ ಸುದ್ದಿ-

ಯುಗಾದಿ

ಹೋಳಿಗೆಗೆ

ತಗ್ಗಿದ

ತೊಗರಿ ಬೇಳೆ...

 

ಹೋಳಿಗೆ

ತಿಂದೂ ತಿಂದು

ಜನರ

ಸಕ್ಕರೆ ಕಾಯಿಲೆ

ಹೆಚ್ಚಬಹುದೇ

ನಾಳೆ...?

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್