‘ಬಿಡುಗಡೆಯ ಹಾಡುಗಳು’ (ಭಾಗ ೨೬) - ಬಿ. ನೀಲಕಂಠಯ್ಯ

‘ಬಿಡುಗಡೆಯ ಹಾಡುಗಳು’ (ಭಾಗ ೨೬) - ಬಿ. ನೀಲಕಂಠಯ್ಯ

ಬಿ. ನೀಲಕಂಠಯ್ಯ ಎನ್ನುವ ಕವಿಯ ಒಂದು ಮುದ್ರಿತ ಪುಸ್ತಕದಿಂದ ಆಯ್ದ ಲಾವಣಿ. ನೀಲಕಂಠಯ್ಯ ಇವರ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಿಲ್ಲ. ಈ ಲಾವಣಿಯ ಧಾಟಿ ಖಡೀಚಾಲ್ ಆಗಿದೆ.

ಕಾಂಗ್ರೆಸ್ ಲಾವಣಿ

ಶೃಂಗಾರದ ನವರಂಗದ ಮೈಸೂರ್ ಕಾಂಗ್ರೆಸ್ ಘನವೆನ್ನುವನೊಬ್ಬ ।

ಕಾಂಗ್ರೆಸ್ ನ ಸಂಗ್ರಾಮವ ಕೇಳಿದ ಆಂಗ್ಲರಿಗಾಯಿತು ಅಬ್ಬಬ್ಬಾ ॥ಪ॥

 

ಅಬ್ಬಬ್ಬಾ ಈ ದಬ್ಬಾಳಿಕೆ ಅವನೊಬ್ಬನ ದೆಶೆಯಿಂದೆನ್ನುತ್ತಲೊಬ್ಬಾ ।

ದಬ್ಬಾಳಿಕೆಯನು ಎಬ್ಬಿಸಿದವ ನಿಜ ತಬ್ಬಲಿ ಎಂದನು ಮತ್ತೊಬ್ಬ ॥

 

ಒಬ್ಬನಿಂದಲ್ಲವು ಶಿಬ್ಬಂದಿಬಳಾ ಕಬ್ಬಕ್ಕಿ ಎಂತಿಹರೆನುತೊಬ್ಬ ।

ಕೊಬ್ಬಿದ ದರ್ಪದ ಮೊಬ್ಬಿನೊಳಿರುವರ ಹಬ್ಬ್ವಿದೆಂದನು ಹುಡುಗನೊಬ್ಬ ।

ದಬ್ಬಾಳಿಕೆಸುಳಿ ಅಬ್ಬರ ಅಣಗಲಿ ದಬ್ಬೆಯು ಬಿತ್ತೆನಗೆನುತೊಬ್ಬ ।

ದಬ್ಬಾಳಿಕೆ ಮಹ ಬೊಬ್ಬೆಯ ಕೇಳುತ ತಬ್ಬಿಬ್ಬಾದನು ಕಡೆಗೊಬ್ಬ ।

ದೊಡ್ಡುಡನ್

ಎಂತ ಕಾರ್ಯವಿದು ಎಂತ ಚೋದ್ಯವಿದು ಹೊಂತಕಾರಿಗಳೆಯೋಚಿಪುದು ।

ಅಂತುಯಿಂತು ಈ ಶಾಂತಿಯಸಮರವು ಕ್ರಾಂತಿಯ ರೂಪಾವರಿಸಿಹುದು ।

ಅಂತರದೊಳಗಿನ ಅನಂತ ಆಸೆಗೆ ಅನರ್ಥ ಫಲ ಕೈಸೇರುವುದು ।

ಇಂತ ಭ್ರಾಂತಿಯನು ಕಂತೆಯಕಟ್ಟಿಸಿ ಸಂತೆಗೆ ಸಾಗಿಸೆ ಸುಖವಹುದು ॥

ಉಡನ್

ನ್ಯಾಯವೆಂಬುದೆ ಸಾಧನ ಕಾಂಗ್ರೆಸ್ಸಿನ ಘನ ಧ್ಯೇಯ ।

ಧ್ಯೇಯವಿದೊಂದೆ ಶಾಂತಿಯೆ ಸಮರದೊಳಿಡುವುದೆ ಕಾಯ ।

ಕಾಯವಿಟ್ಟಂತೆ ಪ್ರಮುಖರ ಸುಕೀರ್ತಿ ಪುಂಜದ ಛಾಯ ।

ಛಾಯ ಪ್ರಜ್ವಲ ಭಾರತ ದೇಶದ ಉನ್ನತಿ ನ್ಯಾಯಾ ॥

ಗುಲ್ಲುಡನ್
ಪ್ರಜೆಗಳಾಜನ್ಮ ಹಕ್ಕನಿಟ್ಟು । ನಿಜದೆ ಸ್ವಾತಂತ್ರ್ಯಗಳನು ಕೊಟ್ಟು ।

ರಾಜ್ಯವನ್ನಾಳಲು ಬಿಕ್ಕಟ್ಟೂ । ಪೂಜ್ಯ ಬಾಂಧವರ ಬಂಧನದಲಿ ಬಿಡಲತಿ ಫಲವುಂಟೂ ।

ಶ್ಲೋಕ

ಎಂದು ಬೇಡುತ ಬಂದ ಜನರಿಗೆ ಬಂಧನವೆ ನಿಜವೆಂದರು ।

ಮುಂದಿನೊಳು ನೂರ್ನಲ್ವತ್ನಾಲ್ಕನೆ ಸೆಕ್ಷನ್ ಜಾರಿಗೆ ತಂದರು ॥

ಚಾಲ್

ಇಂಗ್ಲೆಂಡ್ ದೇಶದ ಇಂಗ್ಲೀಷರಿಂದಲಿ ಕಂಗೆಟ್ಟಿವು ನಾವೆನುತೊಬ್ಬ ।

ಕಾಂಗ್ರೆಸ್ ಸೆಶನ್ ಸಂಗ್ರಾಮವ ಕೇಳಿದ ಆಂಗಲ್ಲರಿಗಾಯಿತು ಅಬ್ಬಬ್ಬಾ ।

ಅಟ್ಟಹಾಸದಿಟ ನಲವತ್ತೈದನೆಯ ಸೆಕ್ಷನ್ ಜಾರಿಯ ಒಳಗುಟ್ಟು ।

ಬೆಟ್ಟದಿ ಸೆಕ್ಷನ್ ಶವವನು ಮಾಡಿ ಹೊತ್ತನು ಸಂಭಾಜಿ ಶ್ರಮಪಟ್ಟು ॥

ಬಿಟ್ಟರೆ ಸಿಕ್ಕದ ಕೊಟ್ರೆ ನಂಜಪ್ಪನ ತಟ್ಟನೆ ಹಿಡಿದರು ಕಣ್ಣಿಟ್ಟು ।

ಕೊಟ್ಟರು ಸಜವನು ಹೊಸಕೋಟಿಯ ಮಹದೇವಶಾಸ್ತ್ರಿಗಳ ಹಿಡಿದಿಟ್ಟು ।

ಕಷ್ಟ ಕಷ್ಟಮಹ ಕಷ್ಟವಿದೆನ್ನುವ ಎಷ್ಟೋ ಜನರಿಗೆ ಛಡಿಪೆಟ್ಟು ।

ಇಷ್ತರೊಳಗೆ ನೂರೇಳನೆ ಸೆಕ್ಷನ್ ಬಿಟ್ಟರು ತಟ್ಟನೆ ಗುರಿಯಿಟ್ಟು ॥

ದೊಡ್ಡುಡನ್

ಒಡನೆಯೆ ಶಿದ್ದಲಿಂಗಯ್ಯನವರನು ಹಿಡಿದರು ಖಾನೂನ್ ಅನುಸರಿಸಿ ।

ಬಿಡದೆಲೆ ಸೀತಾರಾಮ ಶಾಸ್ತ್ರಿಗಳನಿಡಿದರು ಕೇಸಿನ ಕ್ರಮನಡೆಸಿ ।

ತಡಕು ತಗಡೂರ್ ರಾಮಚಂದ್ರನು ಹಿಡಿದು ತಿಜನರಂಜೊತೆಗೊಳಿಸಿ ।

ಹಿಡಿಯಿರಿ ಸೆರೆಮನೆದಾರಿ ನೀವೆನ್ನುತ ನುಡಿದರು ದರ್ಪದಿ ದಡಬಿಡಿಸಿ ॥

(ಇನ್ನೂ ಇದೆ)