ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ತಂಬಾಕು ರಕ್ಕಸ ಚಟದಿಂದ ಕ್ಯಾನ್ಸರಿಗೆ ಲಕ್ಷಗಟ್ಟಲೆ ಜೀವಗಳ ಬಲಿ (ಭಾಗ 1)

ನಮ್ಮ ದೇಶದಲ್ಲಿ ಕ್ಯಾನ್ಸರಿಗೆ ಬಲಿಯಾಗುವವರ ಸಂಖ್ಯೆ ವರುಷದಿಂದ ವರುಷಕ್ಕೆ ಹೆಚ್ಚುತ್ತಲೇ ಇದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ರಾಜ್ಯ ಸಚಿವ ಡಾ. ಭಾರತಿ ಪ್ರವೀಣ್ ಪವಾರ್ ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರ ಇದಕ್ಕೆ ಆಧಾರ: ಅದರ ಅನುಸಾರ ಕ್ಯಾನ್ಸರಿನಿಂದಾದ ಸಾವುಗಳ ಸಂಖ್ಯೆ: 2018ರಲ್ಲಿ 7.33 ಲಕ್ಷ, 2019ರಲ್ಲಿ 7.51 ಲಕ್ಷ ಮತ್ತು     2020ರಲ್ಲಿ 7.70 ಲಕ್ಷ.

Image

ಸದನದ ಪರಂಪರೆಗೆ ಕಪ್ಪು ಚುಕ್ಕೆ

ದೇಶದ ಸಂಸದೀಯ ವ್ಯವಸ್ಥೆಯಲ್ಲಿ ಕರ್ನಾಟಕಕ್ಕೆ ವಿಶಿಷ್ಟ ಹಾಗೂ ಗೌರವಯುತ ಸ್ಥಾನವಿದೆ. ಆಂಧ್ರಪ್ರದೇಶ, ತಮಿಳುನಾಡು, ಉತ್ತರ ಭಾರತದ ರಾಜ್ಯಗಳಲ್ಲಿನ ಸಂಸದೀಯ ವ್ಯವಸ್ಥೆಗೆ ಹೋಲಿಸಿದರೆ ಕರ್ನಾಟಕದ ಸಂಸದೀಯ ವ್ಯವಸ್ಥೆ ಮೇಲುಸ್ತರದಲ್ಲಿದೆ ಎನ್ನುವುದು ಎಲ್ಲರ ಭಾವನೆಯಾಗಿತ್ತು. ನಾಡು, ನುಡಿ, ಜನರ ವಿಷಯ ಬಂದಾಗ ಅದೆಷ್ಟೋ ಬಾರಿ ‘ಪಕ್ಷಾತೀತ’ ತೀರ್ಮಾನಗಳು, ಚರ್ಚೆಗಳು ನಡೆದಿರುವ ಇತಿಹಾಸ ಕರ್ನಾಟಕದ ವಿಧಾನಸಭೆಗಿದೆ.

Image

ಮತ್ತೆ ಸುದ್ದಿಯಲ್ಲಿ ಹನಿ ಟ್ರ್ಯಾಪ್

ಅದೂ ವಿಧಾನಸಭಾ ಅಧಿವೇಶನದಲ್ಲಿ. ರಾಜ್ಯದ ಉಷ್ಣಾಂಶ ಏರು ಗತಿಯಲ್ಲಿ ಸಾಗುತ್ತಿರಬೇಕಾದರೆ, ಜನರ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿರಬೇಕಾದರೆ, ಅಗತ್ಯ ವಸ್ತುಗಳ ಬೆಲೆ ಏರು ಮುಖದಲ್ಲಿ ಇರಬೇಕಾದರೆ, ಭ್ರಷ್ಟಾಚಾರ ಆಕಾಶದೆತ್ತರಕ್ಕೆ ಸಾಗುತ್ತಿರಬೇಕಾದರೆ, ಅಧಿವೇಶನದಲ್ಲಿ ಹನಿ ಟ್ರ್ಯಾಪ್ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

Image

ಸ್ಟೇಟಸ್ ಕತೆಗಳು (ಭಾಗ ೧೨೬೮) - ಒಂದಂಕ

ನಿನ್ನ ಸೋಲು ನಿನಗೆ ಕಾಡಬೇಕು, ಕಾಡದೇ ಇದ್ದರೆ ನೀನು ಮತ್ತೆ ಗೆಲುವಿನ ಕಡೆಗೆ ಪ್ರಯತ್ನ ಪಡುವುದಿಲ್ಲ. ಆ ಸ್ಪರ್ಧೆಯಲ್ಲಿ ಗೆಲ್ಲಬೇಕು ಅಂತ ಕೆಲವಷ್ಟು ದಿನಗಳ ಹಿಂದೆ ಪ್ರಯತ್ನ ಆರಂಭವಾಗಿತ್ತು. ಒಂದಷ್ಟು ಸ್ಪರ್ಧೆಗಳ ಪಟ್ಟಿ ದೊಡ್ಡದಿತ್ತು ಎಲ್ಲದಕ್ಕೂ ತಯಾರಿಯೂ ಆಗಿದ್ದು ಸತತ ಪ್ರಯತ್ನ ಪಟ್ಟು ಒಂದಷ್ಟು ಬಹುಮಾನಗಳು ಹೆಗಲಿಗೇರಿ ಕೊಂಡವು.

Image

ಗೂಬೆಗೆ ಕೊಂಬು ಇದೆಯಾ ?!

ಪಕ್ಷಿ ವೀಕ್ಷಣೆಯ ಹವ್ಯಾಸ ಪ್ರಾರಂಭವಾದ ನಂತರ Birds of a feather flock together ಎಂಬ ಇಂಗ್ಲೀಷ್‌ ಗಾದೆಯಂತೆ ನನ್ನಂತೆಯೇ ಹಲವು ಜನ ಪಕ್ಷಿಗಳ ಬಗ್ಗೆ ಆಸಕ್ತರು ಪರಿಚಯವಾದರು. ಪರಿಚಯ ಮುಂದುವರೆದು ಆತ್ಮೀಯ ಸ್ನೇಹಿತರಾದವರು ಹಲವರು. ಅಂಥವರಲ್ಲಿ ಮೈಸೂರಿನ ಗೆಳೆಯ ಡಾ.ಅಭಿಜಿತ್‌ ಕೂಡಾ ಒಬ್ಬರು. ವೃತ್ತಿಯಿಂದ ಹೋಮಿಯೋಪತಿ ವೈದ್ಯರಾದ ಅಭಿಜಿತ್‌ ಪಕ್ಷಿವೀಕ್ಷಣೆಯಲ್ಲೂ ಬಹಳ ಆಸಕ್ತರು.

Image

ವಿವೇಕದಿಂದ ಆನಂದ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ ಎಸ್.ಎಸ್.ಓಂಕಾರ್
ಪ್ರಕಾಶಕರು
ಯೋಗ ಮಂದಿರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೪

“ವಿವೇಕದಿಂದ ಆನಂದ” ದಲ್ಲಿ ಲೇಖಕರಾದ ಡಾ. ಎಸ್  ಎಸ್ ಓಂಕಾರ್ ಇವರು ಸ್ವಾಮಿ ವಿವೇಕಾನಂದರ ಜೀವನವನ್ನು ಮಾದರಿಯಾಗಿ ಇಟ್ಟುಕೊಂಡು ಪತಂಜಲಿ ಮಹರ್ಷಿಗಳ ಘನವಾದ 'ಯಮ' ಮತ್ತು 'ನಿಯಮ' ತತ್ತ್ವಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ.

ಇದು ಅಕ್ಷರಶಃ ಸತ್ಯವಾದ ಮಾತು !

"ಹೃದಯ ವಿಶಾಲವಾಗಿದ್ದರೆ ಮಾತ್ರ ಅಲ್ಲಿ ನಿಜವಾದ ಜ್ಞಾನ ಹೊಮ್ಮುತ್ತದೆ " - ಸ್ವಾಮಿ ವಿವೇಕಾನಂದ. ಜೊತೆಗೆ ಹೃದಯ ಅಥವಾ ಮನಸ್ಸು ಶುದ್ದವಾಗಿದ್ದರೆ ಜ್ಞಾನ ಅಲ್ಲಿ ಶಾಶ್ವತವಾಗಿ ನೆಲೆಸುತ್ತದೆ. ಎಷ್ಟೊಂದು ಅರ್ಥಪೂರ್ಣ ಮತ್ತು ಅನುಭವದ ಮಾತು. ಇದು ಅಕ್ಷರಶಃ ಸತ್ಯವಾದ ಮಾತು.

Image