ಸ್ಟೇಟಸ್ ಕತೆಗಳು (ಭಾಗ ೧೨೬೮) - ಒಂದಂಕ

ಸ್ಟೇಟಸ್ ಕತೆಗಳು (ಭಾಗ ೧೨೬೮) - ಒಂದಂಕ

ನಿನ್ನ ಸೋಲು ನಿನಗೆ ಕಾಡಬೇಕು, ಕಾಡದೇ ಇದ್ದರೆ ನೀನು ಮತ್ತೆ ಗೆಲುವಿನ ಕಡೆಗೆ ಪ್ರಯತ್ನ ಪಡುವುದಿಲ್ಲ. ಆ ಸ್ಪರ್ಧೆಯಲ್ಲಿ ಗೆಲ್ಲಬೇಕು ಅಂತ ಕೆಲವಷ್ಟು ದಿನಗಳ ಹಿಂದೆ ಪ್ರಯತ್ನ ಆರಂಭವಾಗಿತ್ತು. ಒಂದಷ್ಟು ಸ್ಪರ್ಧೆಗಳ ಪಟ್ಟಿ ದೊಡ್ಡದಿತ್ತು ಎಲ್ಲದಕ್ಕೂ ತಯಾರಿಯೂ ಆಗಿದ್ದು ಸತತ ಪ್ರಯತ್ನ ಪಟ್ಟು ಒಂದಷ್ಟು ಬಹುಮಾನಗಳು ಹೆಗಲಿಗೇರಿ ಕೊಂಡವು. ಆದರೆ ಎಲ್ಲ ಬಹುಮಾನಗಳ ಒಟ್ಟು ಮೊತ್ತವನ್ನು ಸೇರಿದಾಗ ದೊಡ್ಡ ಪಾರಿತೋಷಕವೊಂದು ಕಾದು ಕುಳಿತಿತ್ತು. ಆದರೆ ಒಂದು ಅಂಕದಿಂದ ಆ ದೊಡ್ಡ ಪಾರಿತೋಷಕ ಕೈ ತಪ್ಪಿ ಹೋದಾಗ ಆತ ದೂರದಲ್ಲಿ ಕುಳಿತು ಮೌನವಾಗಿ ಕಣ್ಣೀರು ಇಳಿಸ್ತಾ ಇದ್ದ ಆತನಿಗೆ ತುಂಬ ನೋವಾಗಿತ್ತು ಒಂದು ಅಂಕದ ಮೌಲ್ಯ ಆಗ ಅರ್ಥ ಆಗಿತ್ತು ಅಭ್ಯಾಸ ಮಾಡುವಾಗ ತರಬೇತಿ ನೀಡುವವರು ಮತ್ತೆ ಮತ್ತೆ ಹೇಳಿ ಗೆಲುವು ಬೇಕು ಅಂತ ಯಾಕೆ ಅನ್ನುತ್ತಿದ್ದರು ಅನ್ನೋದು ಅವನಿಗೆ ಅರ್ಥವಾಗುತ್ತಾ ಹೋಯಿತು. ಅವನು ನಿರ್ಧಾರ ಮಾಡಿದ ಈ ಪ್ರಯತ್ನ ಇಲ್ಲಿಗೆ ನಿಲ್ಲಬಾರದು. ಮುಂದೆ ಎಲ್ಲಾ ಸ್ಪರ್ಧೆಗಳಲ್ಲೂ ದೊಡ್ಡ ಪ್ರಶಸ್ತಿ ತನ್ನ ಬಳಿಯೇ ಉಳಿಯಬೇಕು ಅಂತ ಪ್ರಯತ್ನದ ಕಡೆಗೆ ಹೆಜ್ಜೆ ಇಟ್ಟ. ಒಂದು ಅಂಕ ಆತನ ಜೀವನದ ಅದ್ಭುತ ನಿರ್ಧಾರವನ್ನು ನಿರ್ಧರಿಸಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ