ಒಂದು ಗಝಲ್
ಕವನ
ಬವಣೆಗಿಂದು ಬೆಂಕಿಯು ಬಿದ್ದಿದೆಯೋ ನಡುವಿನಲ್ಲಿದ್ದು ಕೂಗಿರುವೆ
ಮತ್ಸರದ ಗೂಡುಗಳಿಲ್ಲಿ ಒಡೆದಿವೆಯೋ ಒಡಲಿನಲ್ಲಿದ್ದು ಕೂಗಿರುವೆ
ಚೀತ್ಕಾರದ ನಡುವೆಯಿಂದು ರಕ್ಷಿಸುವಂತಹ ಕೈಗಳೆಲ್ಲೂ ಕಾಣದೇಕೊ
ಬೆತ್ತಲಾಗಿರುವ ನೆಲದೊಳಗೆ ಬೀಳುತ್ತಾ ಬದುಕಿನಲ್ಲಿದ್ದು ಕೂಗಿರುವೆ
ಉರಿಸುತ್ತಲಿರುವ ಮಹಾನ್ ತತ್ವಗಳನ್ನು ಒಗ್ಗೂಡಿಸಲು ಸಾಧ್ಯವೇನು
ಉಳಿದಿರುವ ಮನುಷ್ಯತ್ವವ ಉಳಿಸಿರೆಂದು ಕನಸಿನಲ್ಲಿದ್ದು ಕೂಗಿರುವೆ
ಬದುಕಿರುವವರ ಕುತ್ತಿಗೆಯನಿಂದು ಸೀಳಿದರೆ ಖುಷಿಯೇನು ನಿಮಗೆ
ಊಟಕ್ಕಿಂದು ಗತಿಯಿಲ್ಲದವರ ಜೊತೆಗೇ ಹಸಿವಿನಲ್ಲಿದ್ದು ಕೂಗಿರುವೆ
ಹೊಡೆದಾಟಗಳೆನ್ನುವ ಹಂದರಗಳ ನಡುನಡುವೆಯೇ ನಾನಿರುವೆ ಈಶಾ
ಜೀವನದಲಿ ಕೈಯನ್ನಿಡಿದು ನಡೆಯಿರೆನ್ನುತ್ತಾ ನನಸಿನಲ್ಲಿದ್ದು ಕೂಗಿರುವೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
